/newsfirstlive-kannada/media/post_attachments/wp-content/uploads/2024/06/Marriage.jpg)
ಲಕ್ನೋ: ಮಗಳ ಮದುವೆ ಅಂದರೆ ಪೋಷಕರಿಗೆ ಎಲ್ಲಿಲ್ಲದ ಸಂಭ್ರಮ ಇರುತ್ತೆ. ಮಗಳ ಮದುವೆ ದಿನ ಆ ಕೆಲಸ, ಈ ಕಾರ್ಯ ಅಂತ ತಂದೆ-ತಾಯಿ ಬ್ಯುಸಿಯಾಗಿ ಇರ್ತಾರೆ. ಆದ್ರೆ ಇಲ್ಲೊಬ್ಬ ತಾಯಿ ತನ್ನ ಮಗಳು ಮದುವೆಯಾಗಬೇಕಾಗಿದ್ದ ವರನ ಜೊತೆಗೆ ಪರಾರಿಯಾಗಿದ್ದಾಳೆ.
ಇದನ್ನೂ ಓದಿ:ಯಶ್, ರಾಧಿಕಾ ಪಂಡಿತ್ ನಟಿಸಿದ್ದ ಸೂಪರ್ ಹಿಟ್ ಧಾರಾವಾಹಿ ಮತ್ತೆ ತೆರೆಗೆ..! ಯಾವುದು ಆ ಹೊಸ ಕಥೆ?
ಈ ವಿಚಿತ್ರ ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಲಿಗಢದಲ್ಲಿ. ಅಚ್ಚರಿ ಎನಿಸಿದರೂ ಇದು ನಿಜ. ಮಗಳ ಮದುವೆಗೆ ಒಂಬತ್ತು ದಿನ ಬಾಕಿ ಇದ್ದಾಗಲೇ ವರ ಅಂದರೆ ಭಾವಿ ಅಳಿಯನ ಜೊತೆ ವಧುವಿನ ತಾಯಿ ಎಸ್ಕೇಪ್ ಆಗಿದ್ದಾಳೆ. ಅಲ್ಲದೇ ಜೊತೆಗೆ ಮಗಳ ಮದುವೆಗಂತ ಮಾಡಿಸಿದ್ದ ಚಿನ್ನದ ಒಡವೆಗಳನ್ನೂ ತನ್ನೊಂದಿಗೆ ಕದ್ದೊಯ್ದಿದ್ದಾಳಂತೆ.
ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮಹಿಳೆ ಭಾವಿ ಅಳಿಯನ ಜೊತೆ ಓಡಿ ಹೋಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಇನ್ನೂ ಮಗಳ ಮದುವೆಗೆ ಒಂಬತ್ತು ದಿನ ಮಾತ್ರ ಬಾಕಿ ಇದ್ದಾಗಲೇ ಅತ್ತೆ ಮತ್ತು ಭಾವಿ ಅಳಿಯನ ನಡುವೆ ಪ್ರೀತಿ ಚಿಗುರಿತ್ತಂತೆ. ಅಲ್ಲದೇ ಈ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇತ್ತಂತೆ. ಹೀಗಾಗಿ ತನ್ನ ಮಗಳ ಕೈಹಿಡಿಯ ಬೇಕಿದ್ದ ವರನ ಜೊತೆ ತಾಯಿ ಓಡಿ ಹೋಗಿದ್ದಾಳೆ ಎನ್ನಲಾಗಿದೆ.
ಹೌದು, ಏಪ್ರಿಲ್ 16ರಂದು ಯುವಕ ಹಾಗೂ ಯುವತಿಯ ವಿವಾಹ ನಿಶ್ಚಯ ಆಗಿತ್ತು. ವಿವಾಹದ ಸಿದ್ದತೆಗಾಗಿ ಅತ್ತೆ ಮನೆಗೆ ಆಗಾಗ ಯುವಕ ಭೇಟಿ ನೀಡುತ್ತಿದ್ದ. ಆದ್ರೆ ಆ ಯುವಕನಿಗೆ ಮದುವೆಯಾಗುವ ಹುಡುಗಿ ಬಿಟ್ಟು ಆಕೆಯ ತಾಯಿ ಮೇಲೆ ಲವ್ ಆಗಿದೆ. ಹೀಗಾಗಿ ಯುವಕ ಯುವತಿಯ ತಾಯಿಗೆ ಮೊಬೈಲ್ ಕೊಡಿಸಿದ್ದನಂತೆ. ಆಗಾಗ ಮೊಬೈಲ್ನಲ್ಲಿ ಯುವಕ- ಯುವತಿ ತಾಯಿ ಮಧ್ಯೆ ಚಾಟಿಂಗ್, ಟಾಕಿಂಗ್ ನಡೀತಾ ಇತ್ತಂತೆ. ಆದ್ರೆ ಮದುವೆಯ ಸಿದ್ಧತೆಯ ಖರೀದಿಗೆಂದು ಜೊತೆಗೆ ಹೋಗಿದ್ದ ಇಬ್ಬರು ಮನೆಗೆ ವಾಪಸ್ ಬಂದಿರಲಿಲ್ಲ. ಅಲ್ಲದೇ ಮದುವೆಗೆಂದು ತಂದಿದ್ದ ಚಿನ್ನದ ಒಡವೆಗಳು ಕೂಡ ಕಾಣೆಯಾಗಿದ್ದವು. ಹೀಗಾಗಿ ಅನುಮಾನಗೊಂಡ ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಭಾವಿ ಅಳಿಯ ಹಾಗೂ ಯುವತಿ ತಾಯಿಯ ಫೋನ್ ಟ್ರ್ಯಾಕಿಂಗ್ ಮೂಲಕ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ