/newsfirstlive-kannada/media/post_attachments/wp-content/uploads/2023/06/Marriage.jpg)
ಉತ್ತರಪ್ರದೇಶದ ಪ್ರತಾಪ್​ಗಢದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ತನ್ನ ಮದುವೆಯಲ್ಲಿ ತಾನೇ ಕುಡಿದು ಬಂದಿದ್ದು ವರನಿಗೆ ದುಬಾರಿ ಆಗಿ ಪರಿಣಮಿಸಿದೆ. ಖಂಧಿ ಪೊಲೀಸ್ ಠಾಣಾ ವ್ಯಾಪ್ತಿಯ ಬಕ್ಸಿದ್ಹಿ ಎಂಬ ಗ್ರಾಮದಲ್ಲಿ ಅನೀಶ್ ಎಂಬ ಯುವಕನ ಮದುವೆ ನಡೆದಿತ್ತು. ಮದುವೆಯ ವೇಳೆಯೂ ಕೂಡ ಅವನು ಕುಡಿದು ಬಂದಿದ್ದರಿಂದ ಮಧಮಗಳಾಗಿ ಸಿದ್ಧಗೊಂಡಿದ್ದ ,ಇನ್ನೇನು ಸಪ್ತಪದಿ ತುಳಿಯಬೇಕಿದ್ದ ಹುಡುಗಿ ಮದುವೆಯನ್ನು ನಿರಾಕರಿಸಿದ್ದಾಳೆ. ಇದು ಮದುವೆಯಾಗಬೇಕಿದ್ದು ಯುವಕ ಅನೀಶ್ ಹಾಗೂ ಆತನ ಕುಟುಂಬಕ್ಕೆ ಬಾರೀ ದುಬಾರಿಯಾಗಿ ಪರಿಣಮಿಸಿದೆ.
ಸೋಮವಾರ ರಾತ್ರಿ ವರ ಅನೀಶ್​ ಭರ್ಜರಿಯಾಗಿ ಮೆರವಣಿಗೆ ಮಾಡಿಕೊಂಡು ವಧುವಿನ ಮನೆಗೆ ಬಂದಿದ್ದಾನೆ. ಇನ್ನೇನು ವಧುವಿನ ಮನೆಯ ಹೊಸ್ತಿಲು ಮುಟ್ಟಿದ ಕೂಡಲೇ ವಧುವಿಗೆ ಒಂದು ಅನುಮಾನ ಬಂದಿದೆ. ಈತ ಕುಡಿದು ತೂರಾಡುತ್ತಲೇ ಮೆರವಣಿಗೆಯಲ್ಲಿ ಬಂದಿದ್ದು ಎಂದು ಗೊತ್ತಾಗಿದೆ. ಇದನ್ನು ಕಂಡು ಶಾಕ್ ಆದ ಯುವತಿ, ಅವನ ವರ್ತನೆಯನ್ನು ಕೂಡ ಗಮನಿಸಿದ್ದಾಳೆ. ವಧುವಿನ ಮನೆಗೆ ಬಂದಿದ್ದ ಅನೀಶ್​ ಹುಡುಗಿಯ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದರಿಂದ ರೊಚ್ಚಿಗೆದ್ದ ಹುಡುಗಿಯ ಮನೆಯವರು ಮದುವೆಗೆ ಬಂದ ಎಲ್ಲಾ ನೆಂಟರಿಗೆ ವಾಪಸ್ ಹೋಗಲು ಹೇಳಿದ್ದಾರೆ. ಕೇವಲ ವರ ಹಾಗೂ ಅವರ ತಂದೆ ಜೀತಲ್​ನನ್ನು ತಮ್ಮ ಸೆರೆಯಲ್ಲಿಟ್ಟುಕೊಂಡಿದ್ದಾರೆ. ಸುಮಾರು 18 ತಾಸುಗಳ ಕಾಲ ಸೆರೆಯಾಳಾಗಿದ್ದ ತಂದೆ ಮಗನನ್ನು ಪೊಲೀಸ್​ ಠಾಣೆ ಮೆಟ್ಟಿಲೇರುವವರೆಗೂ ಹೋಗಿದೆ
ಇದನ್ನೂ ಓದಿ:ಕರ್ನಾಟಕದ ಮಹಿಳೆ ಮದುವೆಯಾಗಿದ್ದ ತಮಿಳುನಾಡಿನ ಸ್ವಾಮೀಜಿಗೆ ಭಾರೀ ವಿರೋಧ; ಕಾರಣವೇನು?
ಎರಡೂ ಕಡೆಯ ಸಂಬಂಧಿಕರ ನಡುವೆ ಪಂಚಾಯ್ತಿ ದೊಡ್ಡದಾಗಿ ನಡೆದಿದೆ. ಹುಡುಗಿಯ ಕಡೆಯವರು ಮದುವೆಗೆ ಖರ್ಚಾದ ಎಲ್ಲಾ ವೆಚ್ಚವನ್ನು ಕೊಡಬೇಕು ಎಂದು ಪಟ್ಟುಹಿಡಿದ್ದಾರೆ. ಇದರ ನಡುವೆ ದೊಡ್ಡ ಚೌಕಾಸಿಯೂ ಕೂಡ ನಡೆದಿದೆ. ಕೊನೆಗೆ ಹುಡುಗನ ಕಡೆಯವರು ಹುಡುಗಿಯ ಕಡೆಯವರಿಗೆ 95 ಸಾವಿರ ರೂಪಾಯಿ ಕೊಡಬೇಕೆಂದು ನಿಶ್ಚಯವಾಗೊಂಡು ಪಂಚಾಯ್ತಿ ಮುಗಿದಿದೆ.ಕೊನೆಗೆ ಮದುವೆಗೆ ಎಂದು ತಂದಿದ್ದ ಕಾಣಿಕೆಗಳನ್ನು ಕೂಡ ಹುಡುಗಿಯ ಕಡೆಯವರಿಗೆ ನೀಡಿ ಸದ್ಯ ಬದುಕ್ತು ಜೀವ ಅಂದುಕೊಂಡು ವರನ ಕಡೆಯವರು ಎಸ್ಕೇಪ್ ಆಗಿದ್ದಾರೆ.
ಈ ಎಲ್ಲಾ ಪಂಚಾಯ್ತಿಗಳು ಮುಗಿದ ಬಳಿಕ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ವರ ಅನೀಶ್. ನಾನು ಚೂರೇ ಚೂರು ಕುಡಿದಿದ್ದೆ, ಅದನ್ನು ಹುಡುಗಿಯ ಕಡೆಯವರು ವಿಪರೀತ ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋದರು. ನನ್ನನ್ನ ಸೆರೆಯಾಳಾಗಿ ಏನು ಇಟ್ಟುಕೊಂಡಿದ್ದಿಲ್ಲ. ನಮ್ಮ ಊರಿನ ಹಿರಿಯರು ಹಣವನ್ನು ಹೊಂದಿಸಿಕೊಂಡು ಬರಲು ಹೋಗಿದ್ದರು ಹೀಗಾಗಿ ನಾನು ಇಲ್ಲಿ ಸುಮ್ಮನೆ ಕುಳಿತಿದ್ದೆ ಎಂದು ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us