/newsfirstlive-kannada/media/post_attachments/wp-content/uploads/2023/07/marriage-1.jpg)
ಪೊಲೀಸ್ ಕಾನ್​ಸ್ಟೇಬಲ್ ಒಬ್ಬ ವರದಕ್ಷಿಣೆಯಾಗಿ 30 ಲಕ್ಷ ರೂಪಾಯಿ ಬೇಡಿಕೆಯಿಟ್ಟು ಪೊಲೀಸರ ಅತಿಥಿಯಾದ ಘಟನೆ ಘಾಜಿಯಾಬಾದ್​​ ನಲ್ಲಿ ನಡೆದಿದೆ. ಪೊಲೀಸ್ ಕಾನ್ಸ್​​ಟೇಬಲ್ ರವಿ ಕುಮಾರ್ ಎಂಬುವವರ ಮದುವೆ ನಡೆದಿತ್ತು . ಮದುವೆಯ ಎಲ್ಲಾ ಸಾಂಪ್ರದಾಯಿಕ ಪದ್ಧತಿಗಳು ಸಾಂಗವಾಗಿ ನಡೆಯುತ್ತಿದ್ದವು ಏಕಾಏಕಿ ಮದುಮಗ ರವಿ ಕುಮಾರ್ ಕೂಡಲೇ ವರದಕ್ಷಿಣೆ ಹಣವಾಗಿ 30 ಲಕ್ಷ ರೂಪಾಯಿ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತ. ಇದನ್ನು ಕೇಳಿ ಹುಡುಗಿಯ ಕಡೆಯವರು ಅಕ್ಷರಶಃ ಶಾಕ್​​ಗೆ ಒಳಗಾಗಿದ್ದರು. ಮದುಮಗನ ಈ ಹಠ ನೋಡಿ ಅವನನ್ನು ಮದುವೆಯಾಗಬೇಕಿದ್ದ ಹುಡುಗಿ ಮದುವೆಯೇ ಬೇಡವೆಂದ ಮದುವೆ ಮಂಟಪ ಬಿಟ್ಟು ಹೋದ ಘಟನೆ ನಡೆದಿದೆ.
ಇದನ್ನೂ ಓದಿ:VIDEO: 14 ವರ್ಷದ ಹಿಂದಿನ ಸಹಾಯ.. ತರಕಾರಿ ವ್ಯಾಪಾರಿ ಹುಡುಕಿ ಬಂದ DYSP; ಮನ ಮಿಡಿದ ಸ್ಟೋರಿ ಇದು!
ನವೆಂಬರ್ 13ರ ರಾತ್ರಿ ಈ ಒಂದು ಘಟನೆ ನಡೆದಿದ್ದು ಮೂಲಗಳು ಹೇಳುವ ಪ್ರಕಾರ ಮದುವೆಯ ಎಲ್ಲ ಪದ್ಧತಿಗಳು ಸರಿಯಾಗಿ ನಡೆದು ವಧು ವರ ಹೂವಿನ ಹಾರಗಳನ್ನು ಬದಲಾಯಿಸುವ ಸಮಯದಲ್ಲಿ ವರ ಹಾಗೂ ಆತನ ಕುಟುಂಬದವರು ಕೂಡಲೇ ವರದಕ್ಷಿಣೆ ಹಣ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ. ಹಣ ನೀಡದೇ ಇದ್ದ ಪಕ್ಷದಲ್ಲಿ ಮದುವೆಯ ಮುಂದಿನ ಪ್ರಕ್ರಿಯೆಗಳನ್ನು ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಧುವಿನ ಕಡೆಯವರು ಎಷ್ಟೇ ಬೇಡಿಕೊಂಡರು, ಚೌಕಾಶಿ ಮಾಡಿದರು 30 ಲಕ್ಷ ರೂಪಾಯಿಗಿಂತ ಕಡಿಮೆ ಇಲ್ಲದೇ ಈ ಮದುವೆ ನಡೆಯುವುದಿಲ್ಲ ಎಂದು ಹಠ ಹಿಡಿದು ಕುಳಿತುಕೊಂಡಿದೆ ವರ ಹಾಗೂ ಆತನ ಕುಟುಂಬ.
ಇದನ್ನೂ ಓದಿ:ಕುಡಿದು ಬಂದ ವರನನ್ನು ವರಿಸಲು ನಿರಾಕರಿಸಿದ ವಧು; ಮದುಮಗನಿಂದ ಮದುವೆ ಖರ್ಚು ಒದ್ದು ವಸೂಲಿ!
ವರ ಹಾಗೂ ಆತನ ಕುಟುಂಬದ ವರ್ತನೆಯನ್ನು ಕಂಡ ಮದುಮಗಳು ಮದುವೆಯೇ ಬೇಡವೆಂದು ಮದುವೆಯ ಮಂಟಪವನ್ನು ತೊರೆದು ಹೋಗಿದ್ದಾಳೆ. ಕೂಡಲೇ ಹುಡುಗಿಯ ತಂದೆ ಘಾಜಿಯಾಬಾದ್ ಪೊಲೀಸ್​ ಠಾಣೆಯಲ್ಲಿ ಸಬ್ ಇನ್ಸ್​ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾರೆ. ಅವರು ಪೊಲೀಸರನ್ನು ಕರೆದು ವರನ ಕುಟುಂಬದ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಮೂಲಕ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.
ಪೊಲೀಸರು ಕಾನ್ಸ್​ಟೇಬಲ್ ರವಿ ಕುಮಾರ್ ಹಾಗೂ ಆತನ ತಂದೆಯನ್ನು ಬಂಧಿಸಿ ಸೆಕ್ಷನ್ 352ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮದುವೆ ಹುಡುಗಿಯ ತಂದೆ ಹೇಳುವ ಪ್ರಕಾರ, ನಾವು ಈಗಾಗಲೇ ಮದುವೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವು. ವರನ ಮನೆಗೆ ನೀಡಲು ಅಂತ ಸಾಕಷ್ಟು ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿಯೇ ಖರೀದಿಸಿ ನೀಡಿದ್ದೇವು. ಆದರೂ ಕೂಡ ಇನ್ನೂ 30 ಲಕ್ಷ ರೂಪಾಯಿ ನೀಡುವಂತೆ ಅವರು ಕೀಟಲೆ ಆರಂಭಿಸಿದರು. ಹೀಗಾಗಿ ನಾವು ಪೊಲೀಸರ ಮೊರೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us