ಹಿಮಾಚಲ ಪ್ರದೇಶದ ಈ ಗ್ರಾಮದಲ್ಲಿದೆ ವಿಚಿತ್ರ ಪದ್ಧತಿ; ಮದುವೆಯಾದ ಮಧುಮಗಳು 7 ದಿನ ವಿವಸ್ತ್ರವಾಗಿರಬೇಕು!

author-image
Gopal Kulkarni
Updated On
ಇದೆಂಥಾ ಅನಿಷ್ಟ ಪದ್ಧತಿ! ಇಲ್ಲಿ ಬಾಡಿಗೆಗೆ ಸಿಗುತ್ತಾರಂತೆ ಹೆಣ್ಣುಮಕ್ಕಳು! ಏನಿದು ಸ್ಟೋರಿ?
Advertisment
  • ಹಿಮಾಚಲ ಪ್ರದೇಶದ ಈ ಒಂದು ಹಳ್ಳಿಯಲ್ಲಿದೆ ಎಲ್ಲೂ ಇಲ್ಲದ ವಿಚಿತ್ರ ಪದ್ಧತಿ
  • ಮದುವೆಯಾದ ಮೇಲೆ 7 ದಿನಗಳ ಕಾಲ ಮದುಮಗಳು ಬಟ್ಟೆ ಧರಿಸುವಂತಿಲ್ಲ
  • 7 ದಿನಗಳ ಕಾಲ ತನ್ನ ಪತಿಯೊಂದಿಗೆ ಒಂದೇ ಒಂದು ಮಾತು ಕೂಡ ಆಡುವಂತಿಲ್ಲ

ಜಗತ್ತಿನ ಪ್ರತಿಯೊಂದ ಧರ್ಮದಲ್ಲಿಯೂ ತನ್ನದೇ ಆತ ರೀತಿ ರೀವಾಜುಗಳು ಇರುತ್ತವೆ. ತಮ್ಮದೇ ಆದ ಪದ್ಧತಿಗಳು ಇರುತ್ತವೆ. ಅದೇ ರೀತಿ ಭಾರತವೂ ಹಿಂದೂಗಳು ಬಹುಸಂಖ್ಯಾತ ರಾಷ್ಟ್ರವಾದರೂ ಕೂಡ ರಾಜ್ಯದಿಂದ ರಾಜ್ಯಕ್ಕೆ ಹಳ್ಳಿಯಿಂದ ಹಳ್ಳಿಗೆ ಅನೇಕ ಪದ್ಧತಿಗಳು ಬೇರೆ ಬೇರೆಯಾಗಿರುತ್ತವೆ. ಅದರಲ್ಲೂ ಮದುವೆಯ ವಿಚಾರ ಬಂದಾಗ ಪ್ರತಿಯೊಂದು ಜಾತಿಯ, ಸಮುದಾಯದ ಪದ್ಧತಿಗಳು ಬೇರೆ ಬೇರೆ. ಇನ್ನೂ ಪ್ರಾದೇಶಿಕವಾಗಿಯೂ ಕೂಡ ಈ ರೀತಿಯ ಬೇರೆ ಬೇರೆ ಇರುತ್ತವೆ. ಅದೇ ರೀತಿ ವಿಚಿತ್ರವಾಗಿಯೂ ಕೆಲವೊಂದು ಕಡೆ ಇರುತ್ತವೆ. ಹಿಮಾಚಲ ಪ್ರದೇಶದ ಈ ಒಂದು ಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯದಿಂದ ಮದುವೆಯ ನಡೆಯುತ್ತದೆ.

publive-image

ಹಿಮಾಚಲ ಪ್ರದೇಶದ ಮಣಿಕರ್ಣಿ ಪೀಣಿ ಎಂಬ ಗ್ರಾಮದಲ್ಲೊಂದು ವಿಚಿತ್ರ ಪದ್ಧತಿ ಇದೆ. ಇಲ್ಲಿ ಮದುವೆಯಾದ ಮೇಲೆ ವಧು 7 ದಿನಗಳ ಕಾಲ ಬಟ್ಟೆ ಧರಿಸುವಂತಿಲ್ಲ. 7 ದಿನಗಳ ಕಾಲವೂ ಆಕೆ ವಿವಸ್ತ್ರವಾಗಿರಬೇಕು. ಈ ಒಂದು ಸಂಪ್ರಾದಾಯ ಶತಮಾನಗಳಿಂದಲೂ ಇಲ್ಲಿ ಜಾರಿಯಲ್ಲಿದೆ.ಎಲ್ಲ ಕಡೆಯ ಹಾಗೆಯೇ ಇಲ್ಲಿಯೂ ಕೂಡ ಮದುವೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಮಂತ್ರ ಘೋಷಗಳ ಮೂಲಕ ಮಾಂಗಲ್ಯಧಾರಣೆಯೂ ಕೂಡ ಆಗುತ್ತದೆ. ಆದ್ರೆ ಮದುವೆಯಾದ ಮೊದಲ ರಾತ್ರಿಯಿಂದ ಹಿಡಿದು 7 ದಿನಗಳವರೆಗೆ ಇಲ್ಲಿ ಮದುಮಗಳು ಬಟ್ಟೆ ಧರಿಸುವಂತಿಲ್ಲ. ಈ ಒಂದು ಪದ್ಧತಿ ಇಲ್ಲಿ ಜಾರಿಯಲ್ಲಿದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದೇ ಪ್ರಿಯತಮನ ವಿರುದ್ಧ ರಿವೇಂಜ್ ತೀರಿಸಿಕೊಂಡ ಯುವತಿ; ಸುಸ್ತಾದ ಪ್ರಿಯಕರ..!

ಈ ಏಳು ದಿನಗಳ ಕಾಲ ಮದುವೆಯಾದ ಹುಡುಗ ಮತ್ತು ಹುಡುಗಿ ಇಬ್ಬರ ನಡುವೆಯೂ ಒಂದೇ ಒಂದು ಮಾತುಗಳು ಕೂಡ ಆಡುವಂತಿಲ್ಲ. 7 ದಿನಗಳ ಕಾಲ ಇಬ್ಬರ ನಡುವಿನ ಮಾತುಕತೆಗೆ ನಿಷೇಧವಿದೆ ಹಾಗೂ ಮದುಮಗಳು ವಿವಸ್ತ್ರವಾಗಿಯೇ ಇರುವಂತಹ ಒಂದು ಪದ್ಧತಿ ಇದೆ. 7 ದಿನಗಳ ನಂತರ ವಧುವಿಗೆ ಬಟ್ಟೆ ತೊಡಿಸಲಾಗುವುದು ಬಳಿಕ ಅವರ ಮೊದಲ ರಾತ್ರಿಯನ್ನು ಆಚರಿಸಲಾಗುವುದು.

ಇದನ್ನೂ ಓದಿ:ಕುಂಭ ಮೇಳ ಸುಂದರಿ ಮೊನಾಲಿಸಾಗೆ ಮತ್ತೊಂದು ದೊಡ್ಡ ಕೆಲಸ.. 15 ಲಕ್ಷ ರೂಪಾಯಿ ಸಂಬಳ!

ಇನ್ನು ಕೇವಲ ಮದುವೆಯಾದ ಏಳು ದಿನಗಳ ಕಾಲ ಮಾತ್ರವಲ್ಲ. ಮದುವೆಯಾದ ಮೊದಲ ಶ್ರಾವಣದಂದೂ ಕೂಡ ಹೊಸದಾಗಿ ಮದುವೆಯಾದ ಹುಡುಗಿ ಇಡೀ ದಿನ ಬಟ್ಟೆಯನ್ನು ತೊಡುವಂತಿಲ್ಲ. ಈ ರೀತಿಯ ವಿಚಿತ್ರವಾದ ಅನೇಕ ಸಂಪ್ರದಾಯಗಳು ಈ ಊರಿನಲ್ಲಿವೆ. ಈ ಊರಿನಲ್ಲಿರುವ ಎಲ್ಲಾ ಮನೆಗಳು, ಎಲ್ಲಾ ಜಾತಿಯವರು ಒಂದು ಪದ್ಧತಿಯನ್ನು ಕಡ್ಡಾಯವಾಗಿ ಪಾಲಿಸುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment