/newsfirstlive-kannada/media/post_attachments/wp-content/uploads/2024/08/VINESH-PHOGAT-5-2.jpg)
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹರಾಗಿದ್ದಾರೆ. ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ. ಈ ವಿಚಾರ ಕೋಟ್ಯಾಂತ ಭಾರತೀಯರ ಹೃದಯ ಒಡೆದಿದೆ.
ಅನರ್ಹದ ಹಿಂದೆ ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಕೈವಾಡ, ಪಿತೂರಿ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ ಬ್ರಿಜ್ ಭೂಷಣ್ ಅವರ ಪತ್ರರಿಬ್ಬರು, ಅನರ್ಹತೆಯ ಸುದ್ದಿ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಫೈನಲ್ನಿಂದ ಅನರ್ಹ.. ಅವರಿಗೆ ಬೆಳ್ಳಿ ಅಥವಾ ಕಂಚು ಸಿಗುತ್ತಾ? ನಿಯಮ ಹೇಗಿದೆ?
ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರ ಮತ್ತು ಕೈಸರ್‌ಗಂಜ್ ಬಿಜೆಪಿ ಸಂಸದ ಕರಣ್ ಭೂಷಣ್ ಸಿಂಗ್ ಪ್ರತಿಕ್ರಿಯಿಸಿ, ವಿನೇಶ್ ಫೋಗಟ್ ಅನರ್ಹದ ಸುದ್ದಿಯಿಂದ ಆಘಾತ ಆಗಿದೆ. ಇದರಿಂದ ದೇಶಕ್ಕೆ ನಷ್ಟವಾಗಿದೆ. ಕುಸ್ತಿ ಫೆಡರೇಶನ್ ಇದನ್ನು ಪರಿಶೀಲಿಸುತ್ತದೆ. ಮುಂದೆ ಏನು ಮಾಡಬಹುದು ಅನ್ನೋದ್ರ ಬಗ್ಗೆ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ಬ್ರಿಜ್ ಭೂಷಣ್ ಅವರ ಮತ್ತೋರ್ವ ಪುತ್ರ ಪ್ರತೀಕ್ ಭೂಷಣ್ ಟ್ವೀಟ್ ಮಾಡಿ.. ಅನರ್ಹತೆಯ ಸುದ್ದಿ ವಿನಾಶಕಾರಿ ಮತ್ತು ಹೃದಯ ವಿದ್ರಾವಕವಾಗಿದೆ. ಇದು ದುಃಖಕರವಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಅವರು ಎಲ್ಲಿಯೂ ಕೂಡ ವಿನೇಶ್ ಫೋಗಟ್ ಹೆಸರನ್ನು ಬರೆದಿಲ್ಲ.
The news of disqualification is devastating and heartbreaking
Today’s setback hurts— Prateek Bhushan Singh (@PrateekBhushan) August 7, 2024
ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ