newsfirstkannada.com

‘ಜಸ್​ಪ್ರೀತ್ ಬೂಮ್ರಾ ಚಾಂಪಿಯನ್ ಆಟಗಾರ’.. ಹಿಟ್​ಮ್ಯಾನ್ ರೋಹಿತ್ ಹೀಗೆ ಅಂದಿದ್ಯಾಕೆ?

Share :

Published February 6, 2024 at 2:20pm

    25 ಓವರ್​​ಗಳ ನಂತರ ವಿಕೆಟ್ ಮೇಲೆ ವಿಕೆಟ್​​​​​​​​​​ ಕಬಳಿಸಿದ ಬೂಮ್ರಾ

    ನ್ಯೂ ಬಾಲ್​​ನಲ್ಲಿ ಚಾಂಪಿಯನ್ ಬೌಲರ್ ಬೂಮ್ರಾ​ ಫುಲ್ ಸೈಲೆಂಟ್​

    2ನೇ ಟೆಸ್ಟ್ ಮ್ಯಾಚ್​ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಯಾರಿಗೆ ಲಭಿಸಿತು?

ಹೈದ್ರಾಬಾದ್​​​​​​​ ಸಮರ ಗೆದ್ದ ಆಂಗ್ಲರು ವೈಜಾಗ್​ನಲ್ಲಿ ಮಣ್ಣು ಮುಕ್ಕಿದ್ದಾರೆ. ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ್ದು ಒನ್ ಆ್ಯಂಡ್ ಓನ್ಲಿ ಜಸ್​ಪ್ರೀತ್ ಬೂಮ್ರಾ. ವೈಜಾಗ್​ ರನ್​ಭೂಮಿಯಲ್ಲಿ ಬೂಮ್ರಾ ಬಿರುಗಾಳಿಯನ್ನೇ ಎಬ್ಬಿಸಿ ವಿಕೆಟ್ ಬೇಟೆಯಾಡಿದ್ರು. ಹಳೆ ಬಾಲ್​​ನಲ್ಲಿ ಬೆಂಕಿ ಉಗುಳಿ, ಕ್ರಿಕೆಟ್​ ಜನಕರೇ ಬೆವರಿ ಹೋಗುವಂತೆ ಮಾಡಿಬಿಟ್ರು.

ಜಸ್​ಪ್ರೀತ್ ಬೂಮ್ರಾ ನಮಗೆ ಚಾಂಪಿಯನ್ ಆಟಗಾರ. ಸುದೀರ್ಘ ಕಾಲದಿಂದ ತಂಡಕ್ಕೆ ನೆರವಾಗ್ತಿದ್ದಾರೆ. ಇಂತಹ ಪಂದ್ಯಗಳನ್ನ ಗೆಲ್ಲಬೇಕಾದ್ರೆ ಉತ್ತಮ ಪ್ರದರ್ಶನ ಅತ್ಯವಶ್ಯ. ಕಂಡಿಷನ್​​​ ಸುಲಭವಾಗಿರ್ಲಿಲ್ಲ. ಬೌಲರ್​ಗಳನ್ನ ಹುರಿದುಂಬಿಸಿದೆ. ಅವರು ತಮ್ಮ ಕಾರ್ಯವನ್ನ ಯಶಸ್ವಿ ನಿಭಾಯಿಸಿದ್ರು.

ರೋಹಿತ್ ಶರ್ಮಾ, ಭಾರತ ತಂಡದ ಕ್ಯಾಪ್ಟನ್

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾ ಹೇಳಿದ್ದು ಹಂಡ್ರೆಂಡ್ ಪರ್ಸೆಂಟ್​ ಕರೆಕ್ಟ್​​​. ಅತಿಶಯೋಕ್ತಿ ಮಾತುಗಳೇನು ಅಲ್ಲ. ಜಸ್​​ಪ್ರೀತ್ ಬೂಮ್ರಾ ನಿಜಕ್ಕೂ ಚಾಂಪಿಯನ್​ ಪ್ಲೇಯರ್​​​. ಇಂಗ್ಲೆಂಡ್​ ಎದುರಿನ ಔಟ್​ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್​​ ಅದಕ್ಕೆ ಉತ್ತಮ ನಿದರ್ಶನ. ವೈಜಾಗ್​ನಲ್ಲಿ ಈ ಬೆಂಕಿ ಬೌಲರ್​​ ಇಂಗ್ಲೆಂಡ್​ಗೆ​ ಅಕ್ಷರಶಃ ನರಕವನ್ನೇ ತೋರಿಸಿ ಬಿಟ್ರು.

ಒನ್​​​​ ಮ್ಯಾನ್​ ಆರ್ಮಿ ಇಡೀ ಇಂಗ್ಲೆಂಡ್​ ತಂಡಕ್ಕೆ ನೀರು ಕುಡಿಸಿದ. ವರ್ಲ್ಡ್ ಕ್ಲಾಸ್ ಬ್ಯಾಟರ್ಸ್​, ಡೇಂಜರಸ್ ಹಾಗೂ ಗೇಮ್​ ಚೇಂಜರ್​ಗಳ ದಂಡೇ ಇಂಗ್ಲೆಂಡ್​​ ತಂಡದಲ್ಲಿತ್ತು. ಆದರೆ ಬೂಮ್​​​​​​ ಬಾಲ್​​​ ಅಸ್ತ್ರದ ಮುಂದೆ ಇಂಗ್ಲೆಂಡ್ ಬ್ಯಾಟರ್ಸ್​​ ನೆಲಕಚ್ಚಿ ಹೋಯ್ತು. ಅದ್ಯಾವ ಮಟ್ಟಿಗೆ ಅಂದ್ರೆ 106 ರನ್​​​ಗಳ ದೊಡ್ಡ ಅಂತರದಿಂದ ಪರಾಭಾವಗೊಳ್ತು.

ಹಳೆ ಬಾಲ್​​ನಲ್ಲಿ ಜಸ್​ಪ್ರೀತ್​​ ಬೂಮ್ರಾ ಫುಲ್​ ವೈಲೆಂಟ್

ನ್ಯೂ ಬಾಲ್​​​​​​​ನಲ್ಲಿ ಬೌಲರ್ಸ್​ ಹೆಚ್ಚು ವಿಕೆಟ್ ಬೇಟೆಯಾಡುತ್ತಾರೆ. ಚೆಂಡು ಹೆಚ್ಚು ಹೊಳಪು ಇರೋದ್ರಿಂದ ಹೆಚ್ಚು ಸ್ವಿಂಗ್ ಆಗಿ ವಿಕೆಟ್​ ಉರುಳುವ ಸಾಧ್ಯತೆ ಹೆಚ್ಚಿರುತ್ತೆ. ಆದರೆ ಫೈರಿ ಬೌಲರ್​ ಬೂಮ್ರಾ ವಿಚಾರದಲ್ಲಿ ಮಾತ್ರ ಇದು ಉಲ್ಟಾ. ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಬೂಮ್ರಾ ಹೊಸ ಬಾಲ್​​ನಲ್ಲಿ ಅಬ್ಬರಿಸಿದ್ದಕ್ಕಿಂತ ಸೈಲೆಂಟಾಗಿದ್ದೆ ಹೆಚ್ಚು. ಅಂದ್ರೆ 25 ಓವರ್​ಗಳ ಮೊದಲು ನ್ಯೂ ಬಾಲ್​​​​​​​​​​ನಲ್ಲಿ ಡೀಸೆಂಟ್​ ಆಟವಾಡಿದ್ರು.

ಇಂಗ್ಲೆಂಡ್​ ವಿರುದ್ದ ನ್ಯೂ ಬಾಲ್​​ನಲ್ಲಿ ಬೂಮ್ರಾ

ಇಂಗ್ಲೆಂಡ್​ ಎದುರಿನ ಸರಣಿಯಲ್ಲಿ ಜಸ್​ಪ್ರೀತ್​​​ ಬೂಮ್ರಾ ನ್ಯೂ ಬಾಲ್​​ನಲ್ಲಿ 26 ಓವರ್ಸ್​ ಬೌಲಿಂಗ್ ಮಾಡಿದ್ರು. 40.5 ರ ಎವರೇಜ್​​ನಲ್ಲಿ ಬರೀ 2 ವಿಕೆಟ್​ ಪಡೆದ್ರು. 78 ಬಾಲ್​​ಗೆ ಒಂದರಂತೆ ವಿಕೆಟ್​​​ ಕಬಳಿಸಿದ್ರು. ಆದರೆ ಹಳೆ ಬಾಲ್​ ವಿಚಾರಕ್ಕೆ ಬಂದ್ರೆ ಬೂಮ್ರಾ ನಿಜಕ್ಕೂ ಬೆಂಕಿ ಉಗುಳಿದ್ದಾರೆ. ಮೋಸ್ಟ್​​ ಡೇಂಜರಸ್ ಅನ್ನಿಸಿಕೊಂಡಿದ್ದಾರೆ. ಹೈದ್ರಾಬಾದ್​ ಹಾಗೂ ವೈಜಾಗ್​​​​​​​​ ಟೆಸ್ಟ್​​ನಲ್ಲಿ ಬೂಮ್ರಾ ಆಂಗ್ಲರಿಗೆ ಹೆಚ್ಚು ಕಾಟ ಕೊಟ್ಟಿದ್ದು ಹಳೇ ಬಾಲ್​​ನಲ್ಲಿ. ಬೌಲ್​​ ರಿವರ್ಸ್​​ ಆದಂತೆಲ್ಲ ಬ್ಯಾಟ್ಸ್​ಮನ್​ಗಳ ತಲೆ ಕೆಡಿಸಿದ್ದಾರೆ.

ಯಾರ್ಕರ್​ ಸ್ಪೆಷಲಿಸ್ಟ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಹಳೆ ಬಾಲ್​ನಲ್ಲಿ ಜಸ್​ಪ್ರೀತ್​​​​​ ಬೂಮ್ರಾ ಇಂಪ್ರೆಸ್ಸಿವ್​ ದಾಳಿ ನಡೆಸಿದ್ದು, 26.1 ಓವರ್​​​​​​​​​​ ಹಾಕಿ 11 ವಿಕೆಟ್ ಬೇಟೆಯಾಡಿದ್ದಾರೆ. 5.8 ಬೌಲಿಂಗ್ ಎವರೇಜ್​​​​​​ ಆದ್ರೆ 14.3 ಬಾಲ್​​ಗೆ ಒಂದೊಂದು ವಿಕೆಟ್​ ಪಡೆದಿದ್ದಾರೆ. ವೈಜಾಗ್​ನಲ್ಲಿ ಧೂಳೆಬ್ಬಿಸಿದ ಬೂಮ್ರಾ ಆಂಗ್ಲರ ಹೆಡೆಮುರಿ ಕಟ್ಟಿದ್ರು. ಮೊದಲ ಇನ್ನಿಂಗ್ಸ್​​​ನಲ್ಲಿ 6 ಹಾಗೂ 2ನೇ ಇನ್ನಿಂಗ್ಸ್​​ನಲ್ಲಿ 3 ವಿಕೆಟ್​​​ ಕಬಳಿಸಿ ಗೆಲುವಿನ ಹೀರೋ ಅನ್ನಿಸಿಕೊಂಡ್ರು. ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ ಸೂಪರ್​ ಸ್ಟಾರ್ ಬೌಲರ್​​​​ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ್ರು.

ವೈಜಾಗ್​​​​ನಲ್ಲಿ ಟೀಮ್ ಇಂಡಿಯಾ ವಿಜೃಂಭಿಸಿದೆ. ಇದ್ರಲ್ಲಿ ಬೂಮ್​ ಬೂಮ್​ ಬೂಮ್ರಾ ಪಾತ್ರ ದೊಡ್ಡದಿದೆ. ಮುಂದಿನ ಪಂದ್ಯ ತವರು ಗುಜರಾತ್​​ನ ರಾಜ್​ಕೋಟ್​​ನಲ್ಲಿ ನಡೆಯಲಿದೆ. ಅಲ್ಲೂ ಚಾಂಪಿಯನ್​ ಬೌಲರ್​ ಆಂಗ್ಲರಿಗೆ ಚಳ್ಳೆಹಣ್ಣು ತಿನ್ನಿಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಜಸ್​ಪ್ರೀತ್ ಬೂಮ್ರಾ ಚಾಂಪಿಯನ್ ಆಟಗಾರ’.. ಹಿಟ್​ಮ್ಯಾನ್ ರೋಹಿತ್ ಹೀಗೆ ಅಂದಿದ್ಯಾಕೆ?

https://newsfirstlive.com/wp-content/uploads/2024/02/Jasprit_Bumrah.jpg

Load More