ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಕೇರಳದಿಂದ ಇಂಗ್ಲೆಂಡ್​​ ಏರ್​ಲಿಫ್ಟ್ - ಅಸಲಿಗೆ ಆಗಿದ್ದೇನು ಗೊತ್ತಾ?

author-image
Ganesh
Updated On
ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಕೇರಳದಿಂದ ಇಂಗ್ಲೆಂಡ್​​ ಏರ್​ಲಿಫ್ಟ್ - ಅಸಲಿಗೆ ಆಗಿದ್ದೇನು ಗೊತ್ತಾ?
Advertisment
  • 19 ದಿನಗಳಿಂದ ಅನಾಥವಾಗಿ ನಿಂತಿದ್ದ ಯುದ್ಧ ವಿಮಾನ
  • ಲಂಡನ್​ ನೌಕಾಪಡೆಯ ಎಫ್-35 ಬಿ ಯುದ್ಧ ವಿಮಾನ
  • C-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಸಾಗಾಟ

ಕೇರಳದಿಂದ ಯುದ್ಧ ವಿಮಾನವೊಂದು ಲಂಡನ್​​ಗೆ ಏರ್​ಲಿಫ್ಟ್​ ಆಗ್ತಿದೆ! ಹೌದು, ಕಳೆದ 19 ದಿನಗಳಿಂದ ತಿರುವನಂತಪುರ ಏರ್​ಪೋರ್ಟ್​ನಲ್ಲಿ ಲಂಡನ್​ ನೌಕಾಪಡೆಯ ಎಫ್-35 ಬಿ ಯುದ್ಧ ವಿಮಾನವು ಅನಾಥವಾಗಿ ನಿಂತಿತ್ತು.

ವಿಶ್ವದ ದುಬಾರಿ ಯುದ್ಧ ವಿಮಾನಗಳಲ್ಲಿ ಇದು ಕೂಡ ಒಂದಾಗಿದೆ. ವಿಮಾನ ಕೆಟ್ಟು ಹೋಗಿದ್ದರಿಂದ ತಿರುವನಂತಪುರಂ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಮಾಡಿತ್ತು. ನಂತರ ಅದನ್ನು ರಿಪೇರಿ ಮಾಡುವ ಪ್ರಕ್ರಿಯೆಗಳು ನಡೆದಿದ್ದವು. ಆದರೆ ಫೈಟರ್ ಜೆಟ್​ನ ಹೈಡ್ರಾಲಿಕ್ ಸಮಸ್ಯೆಯಿಂದ ಟೇಕ್​ಆಫ್ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಜೋರು ಮಳೆ.. ಎರಡು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

publive-image

ಇಂಗ್ಲೆಂಡ್​ನಿಂದ ವಿಮಾನದ ಇಂಜಿನಿಯರ್​ಗಳು ಬಂದು ರಿಪೇರಿ ಮಾಡಿದ್ದರೂ ಅದು ಸಕ್ಸಸ್ ಕಾಣಲಿಲ್ಲ. ಹೀಗಾಗಿ ಈಗ F-35 ಬಿ ಫೈಟರ್ ಜೆಟ್ ಅನ್ನು ಏರ್ ಲಿಫ್ಟ್ ಮಾಡಲು ಇಂಗ್ಲೆಂಡ್ ನಿರ್ಧಾರ ಮಾಡಿದೆ. C-17 ಗ್ಲೋಬ್ ಮಾಸ್ಟರ್ ಸರಕು ಸಾಗಣೆಯ ದೈತ್ಯ ವಿಮಾನದಲ್ಲಿ F-35 ಬಿ ವಿಮಾನ ಏರ್ ಲಿಫ್ಟ್ ಆಗಲಿದೆ.

ಇನ್ನು ವಿಮಾನದ ಕೆಲವು ಭಾಗಗಳನ್ನು ಬೇರ್ಪಡಿಸಿ ಏರ್​ಲಿಫ್ಟ್ ಆಗಲಿದೆ. ತಿರುವನಂತಪುರದಿಂದ ಇಂಗ್ಲೆಂಡ್​ಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ. ಈ ಹಿಂದೆಯೂ ಬೇರೆ ಬೇರೆ ಯುದ್ದ ವಿಮಾನಗಳು ಏರ್​ಲಿಫ್ಟ್ ಆಗಿರುವ ಉದಾಹರಣೆಗಳು ಇವೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಹೆತ್ತವರ ಲಾಲನೆ-ಪಾಲನೆ ಇಲ್ಲದಿದ್ರೆ ಮಕ್ಕಳು ಹೀಗೂ ಆಗ್ತಾರೆ.. ಕಣ್ಣೀರು ತರಿಸುತ್ತೆ ಈ ಸ್ಟೋರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment