/newsfirstlive-kannada/media/post_attachments/wp-content/uploads/2024/08/Hardik-Pandya-1.jpg)
ಟೀಂ ಇಂಡಿಯಾದ ಸ್ಟಾರ್​ ಆಟಗಾರ ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಬಳಿಕ ದೂರ ದೂರವಾದ ಸಂಗತಿ ತಿಳಿದೇ ಇದೆ. ಆದರೀಗ ಪಾಂಡ್ಯ ಹೆಸರು ಖ್ಯಾತ ಸಿಂಗರ್​ ಜೊತೆಗೆ ತಳುಕು ಹಾಕಿಕೊಂಡಿದೆ. ಮಾತ್ರವಲ್ಲದೆ, ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ನತಾಶಾ ಬಳಿಕ ಹಾರ್ದಿಕ್​​ ಪಾಂಡ್ಯ ಹೆಸರಿನ ಜೊತೆಗೆ ಅನನ್ಯಾ ಪಾಂಡೆ ಹೆಸರು ಕೇಳಿಬಂತು. ಆದರೀಗ ಖ್ಯಾತ ಬ್ರಿಟಿಷ್​ ಸಿಂಗರ್​ ಮತ್ತು ಕಿರುತೆರೆ ನಟಿಯೊಬ್ಬರ ಜೊತೆಗೆ ಪಾಂಡ್ಯ ಹೆಸರು ಕೇಳಿಬಂದಿದೆ. ಸದ್ಯ ಇವರಿಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ ಹಾರ್ದಿಕ್​ ಜೊತೆ ಕೇಳಿಬರುತ್ತಿರೋ ಈ ಖ್ಯಾತ ಸಿಂಗರ್​ ಯಾರು? ಇಲ್ಲಿದೆ ಮಾಹಿತಿ.
/newsfirstlive-kannada/media/post_attachments/wp-content/uploads/2024/08/Hardik-Pandya.jpg)
ಇದನ್ನೂ ಓದಿ: ಬೆಂಗಳೂರು: ನೌಕರನ ಮೇಲೆ ಮನಬಂದಂತೆ ಹಲ್ಲೆ, ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ
ಜಾಸ್ಮಿನ್​ ವಾಲಿಯಾ. ಇವರು ಬ್ರಿಟಿಷ್​​ ಸಿಂಗರ್​. ಮಾತ್ರವಲ್ಲದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೀಗ ಈ ಸಿಂಗರ್​ ಹೆಸರು ಹಾರ್ದಿಕ್​ ಜೊತೆ ಕೇಳಬರಲು ಕಾರಣವೊಂದಿದೆ. ಅದೇನೆಂದರೆ ಇಬ್ಬರು ಗ್ರೀಸ್​ಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/s.jpg)
ಜಾಸ್ಮಿನ್​ ವಾಲಿಯಾ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸೆಲೆಬ್ರಿಟಿ. ಲಂಡನ್​​ನ ಎಸೆಕ್ಸ್​ನಲ್ಲಿ ಜನಿಸಿದ್ದಾರೆ. ಆದರೆ ಈಕೆಯ ಪೋಷಕರು ಭಾರತೀಯ ಮೂಲದವರು. ಬ್ರಿಟಿಷ್​​ ರಿಯಾಲಿಟಿ ಶೋ ‘ದಿ ಓನ್ಲಿ ವೇ ಈಸ್​’ ಭಾಗವಾಗಿ ಮೊದಲು ಕಾಣಿಸಿಕೊಂಡರು.
/newsfirstlive-kannada/media/post_attachments/wp-content/uploads/2024/08/Jasmin-Walia.jpg)
ಇದನ್ನೂ ಓದಿ: ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..
2014ರಲ್ಲಿ ಯುಟ್ಯೂಬ್​​ ಚಾನೆಲ್​​ ಆರಂಭಿಸಿದ ಜಾಸ್ಮಿನ್​​ ಅನೇಕ ಹಾಡುಗಳನ್ನು ಹಾಡಿದ್ದಾರೆ. ಮಾತ್ರವಲ್ಲದೆ ಜಾಕ್​ ನೈಟ್​​, ಇಂಟೆನ್ಸ್​-ಟಿ ಮತ್ತು ಗ್ರೀನ್​ ಮ್ಯೂಸಿಕ್​ ಜೊತೆಗೆ ಕೈ ಜೋಡಿಸಿದ್ದಾರೆ. 2017ರಲ್ಲಿ ಬ್ಯಾಡ್​​​ ಡಿಗ್ಗಿ ಮೂಲಕ ದೊಡ್ಡ ಬ್ರೇಕ್​ ಪಡೆದುಕೊಂಡರು.
ಇದನ್ನೂ ಓದಿ: ಸಮಂತಾಗೆ ಮತ್ತೆ ಲವ್ ಆಗಿದೆ.. ಸ್ಟಾರ್ ಡೈರೆಕ್ಟರ್​ ಜೊತೆ ಡೇಟಿಂಗ್..?​
2018ರಲ್ಲಿ ಜಾಸ್ಮಿನ್​ ಬಾಲಿವುಡ್​ನ ‘ಸಂಉ ಕೆ ಟಿಟು ಕಿ ಸ್ವೀಟಿ’ ಸಿನಿಮಾಗೆ ‘ಬೋಮ್​​ ಡಿಗ್ಗಿ ಡಿಗ್ಗಿ’ ಹಾಡನ್ನು ರಿಮೇಕ್​ ಮಾಡಿದರು. ಆ ಬಳಿಕ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us