/newsfirstlive-kannada/media/post_attachments/wp-content/uploads/2025/03/BRITISH-MONARCHY-CONTRIES.jpg)
ಒಂದು ಕಾಲದಲ್ಲಿ ಬ್ರಿಟನ್​ನ್ನು ಸೂರ್ಯ ಮುಳುಗದ ನಾಡು ಎಂದು ಕರೆಯಲಾಗುತ್ತಿತ್ತು. ಕಾರಣ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಬ್ರಿಟಿಷರು ತಮ್ಮ ವಸಾತುಶಾಹಿಯ ಹಿಡಿತವನ್ನು ಪಡೆದಿದ್ದರು. ಬಹುತೇಕ ರಾಷ್ಟ್ರಗಳು ಬ್ರಿಟಿಷರ ಗುಲಾಮಗಿರಿಯಲ್ಲಿ ನೂರಾರು ವರ್ಷಗಳನ್ನು ಕಳೆದವು. ನಿರಂತರ ಬಂಡಾಯ, ಹೋರಾಟ, ಕ್ರಾಂತಿ ಹಾಗೂ ಶಾಂತಿಗಳಿಂದಲೇ ಕೊನೆಗೆ ಬ್ರಿಟಿಷರನ್ನು ಹೊರಗಟ್ಟಿ. ತಮ್ಮದೇ ಆದ ಸ್ವಾತಂತ್ರ್ಯವನ್ನು ಪಡೆದವು. ತಮ್ಮದೇ ಆದ ಸಂವಿಧಾನದೊಂದಿಗೆ ಸಾರ್ವಭೌಮತ್ವವನ್ನು ಹೊಂದಿದವು. ಗುಲಾಮಗಿರಿಯಿಂದ ಮುಕ್ತವಾದವು.
ಇದನ್ನೂ ಓದಿ:ಇದು ಜಗತ್ತಿನ ಏಕೈಕ ವಿಮಾನ ನಿಲ್ದಾಣ.. ಇಲ್ಲಿ ಇಳಿದರೆ ನೀವು ಮೂರು ದೇಶದೊಳಗೆ ಕಾಲಿಡಬಹುದು
ಆದ್ರೆ ಒಂದು ಆಶ್ಚರ್ಯವೆನೇಂದರೆ. ಜಗತ್ತಿನಲ್ಲಿ ಇಂದಿಗೂ ಕೂಡ ಅನೇಕ ರಾಷ್ಟ್ರಗಳು ಬ್ರಿಟನ್ ಸಾಮ್ರಾಜ್ಯವನ್ನೇ ತಮ್ಮ ರಾಷ್ಟ್ರಪ್ರಮುಖರೆಂದು ಘೋಷಿಸಿಕೊಂಡಿವೆ. ಅವುಗಳ ಮೇಲಿನ ಹಿಡಿತವನ್ನು ಬಿಟ್ಟು ಹಲವು ದಶಕಗಳು ಕಳೆದರೂ ಕೂಡ ಇಂದಿಗೂ ಈ ಕೆಲವು ದೇಶಗಳು ಬ್ರಿಟನ್​ನ ರಾಜಮನೆತನವೇ ತಮ್ಮ ದೇಶದ ರಾಷ್ಟ್ರಪ್ರಮುಖರು ಎಂದು ಹೇಳಿಕೊಂಡು ಬಂದಿವೆ.
/newsfirstlive-kannada/media/post_attachments/wp-content/uploads/2025/03/Jamaica.jpg)
ಜಮೈಕಾ
ಜಮೈಕಾ ಅಮೆರಿಕಾದ ಪಕ್ಕದಲ್ಲಿಯೇ ಇರುವ ಒಂದು ಮಹಾದ್ವೀಪ. ಈ ದ್ವೀಪರಾಷ್ಟ್ರ ಇಂದಿಗೂ ಕೂಡ ಬ್ರಿಟಿಷ್ ರಾಜಮನೆತನವನ್ನು ತನ್ನ ದೇಶದ ಮುಖ್ಯಸ್ಥ ಎಂದು ಭಾವಿಸುತ್ತದೆ. ಅಸಲಿಗೆ ಜಮೈಕಾ ಒಂದು ಸಾಂವಿಧಾನಿಕವಾಗಿ ಸ್ವತಂತ್ರವಾಗಿರುವ ರಾಜಪ್ರಭುತ್ವವನ್ನು ಹೊಂದಿರುವ ದೇಶ. ಈ ದೇಶದ ಆಡಳಿತ ಪ್ರಾತನಿಧ್ಯವನ್ನು ಜನರಲ್ ಗವರ್ನರ್ ನೋಡಿಕೊಳ್ಳುತ್ತಾರೆ ಆದರೂ ಕೂಡ ಬ್ರಿಟಿಷ್ ರಾಜಮನೆತನ ಹಾಗೂ ಅಲ್ಲಿನ ಪ್ರಧಾನ ಮಂತ್ರಿಗಳೇ ತಮ್ಮ ದೇಶದ ಮಖ್ಯಸ್ಥ ಎಂದು ಘೋಷಿಸಿಕೊಂಡಿದೆ.
/newsfirstlive-kannada/media/post_attachments/wp-content/uploads/2025/03/THE-BAHUMAS.jpg)
ಬಹಾಮಾಸ್
ಸಮುದ್ರದಿಂದ ಸುತ್ತುವರಿದಿರುವ ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿರುವ ಕೆರಿಬಿಯನ್ ರಾಷ್ಟ್ರವಾದ ಬಹಾಮಾಸ್​ ಕೂಡ ಇಂದಿಗೂ ಬ್ರಿಟನ್​ನ ರಾಜನೇ ನಮ್ಮ ದೇಶದ ಮುಖ್ಯಸ್ಥ ಎಂದು ಘೋಷಿಸಿಕೊಂಡಿದೆ. ಈ ದೇಶದ ಆಳ್ವಿಕೆಯನ್ನು ಕೂಡ ಗವರ್ನರ್ ಜನರಲ್ ಪ್ರಾತಿನಿಧ್ಯದಲ್ಲಿ ನಡೆಸಲಾಗುತ್ತದೆ. ಆದರೂ ಇವರಿಗೆ ಸುಪ್ರೀಂ ನಾಯಕ ಎಂದರೆ ಅದು ಬ್ರಿಟನ್​ನ ರಾಜನೇ.
/newsfirstlive-kannada/media/post_attachments/wp-content/uploads/2025/03/saint-lucia.jpg)
ಸೇಂಟ್​ ಲೂಯಿಸ್
ಈ ದೇಶವೂ ಕೂಡ ಬ್ರಿಟೀಷ್​​ ರಾಜರ ಕಿರೀಟದ ಅಧೀನದಲ್ಲಿಯೇ ಇಂದಿಗೂ ಇದೆ. ಈ ದೇಶದಲ್ಲಿಯೂ ಒಂದು ಸಾಂವಿಧಾನನಿಕ ರಾಜಪ್ರಭುತ್ವ ಅಸ್ತಿತ್ವದಲ್ಲಿದೆ. ಗವರ್ನರ್ ಜನರಲ್ ಈ ದೇಶದ ಆಡಳಿತನ್ನು ಮುನ್ನಡೆಸುತ್ತಾನೆ. ಆದ್ರೆ ಈ ದೇಶಕ್ಕೆ ರಾಷ್ಟ್ರ ಮುಖ್ಯಸ್ಥ ಮಾತ್ರ ಬ್ರಿಟನ್​ನ ರಾಜಮನೆತನ ಅಥವಾ ಬ್ರಿಟನ್​ನ ರಾಜ.
/newsfirstlive-kannada/media/post_attachments/wp-content/uploads/2025/03/Grenada.jpg)
ಗ್ರೆನಡಾ
ಹೀಗೆ ಬ್ರಿಟನ್ ರಾಜಮನೆತನವನ್ನು ತನ್ನ ದೇಶದ ಪ್ರಮುಖ ದೊರೆ ಎಂದು ಮಾನ್ಯ ಮಾಡುವ ಮತ್ತೊಂದು ದೇಶವೆಂದರೆ ಅದು ಗ್ರೆನಡಾ. ಇದು ಕೂಡ ಕೆರಿಬಿಯನ್​ ರಾಷ್ಟ್ರಗಳಲ್ಲಿ ಒಂದು. 1.17 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ರಾಷ್ಟ್ರ ಬ್ರಿಟನ್​ನ ರಾಜನನ್ನು ತನ್ನ ದೇಶದ ರಾಷ್ಟ್ರಪಿತ ಎಂದು ಘೋಷಿಸಿಕೊಂಡಿದೆ.
/newsfirstlive-kannada/media/post_attachments/wp-content/uploads/2025/03/TUVALU-1.jpg)
ತುವಾಲು
ದಕ್ಷಿಣ ಪೆಸಿಫಿಕ್​ ಸಾಗರದಲ್ಲಿರುವ ದ್ವೀಪ ರಾಷ್ಟ್ರ ತುವಾಲು. ಈ ದೇಶವೂ ಕೂಡ ಇಂದಿಗೂ ಬ್ರಿಟನ್ ರಾಜನೇ ನಮ್ಮ ದೇಶದ ರಾಷ್ಟ್ರಪಿತ ಎಂದು ರಾಜತಾಂತ್ರಿಕವಾಗಿ ಘೋಷಿಸಿಕೊಂಡಿದೆ. ಈ ದೇಶಕ್ಕೆ ಬ್ರಿಟನ್​ 1978ರಲ್ಲಿಯೇ ಸ್ವಾತಂತ್ರ್ಯವನ್ನು ನೀಡಿತ್ತು. ತನ್ನದೇ ಆದ ರಾಜಪ್ರಭುತ್ವ ಹೊಂದಿದ್ದರೂ ಕೂಡ ಈ ರಾಷ್ಟ್ರ ಬ್ರಿಟನ್ ರಾಜನನ್ನು ತನ್ನ ರಾಷ್ಟ್ರಾಧ್ಯಕ್ಷ ಎಂದು ಘೋಷಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us