newsfirstkannada.com

ಇನ್ನೂ ಕಣ್ಣೇ ಬಿಡದ ಏಳು ಮಕ್ಕಳ ಉಸಿರು ನಿಲ್ಲಿಸಿದ್ದ ಹಂತಕಿ; ಈಕೆಯನ್ನು ಹಿಡಿದುಕೊಟ್ಟಿದ್ದೇ ಭಾರತದ ಡಾಕ್ಟರ್​​

Share :

Published August 19, 2023 at 9:17pm

Update August 19, 2023 at 9:22pm

    ಆಗಷ್ಟೆ ಹುಟ್ಟಿದ್ದ ಮಕ್ಕಳು ಜಗತ್ತು ನೋಡಬೇಕಿತ್ತು!

    ಮಕ್ಕಳು ಕಣ್ಣು ತೆರೆಯುವ ಮುನ್ನವೇ ಕೊಂದಳು!

    ಯಾವ ಹೆತ್ತ ತಾಯಿಗೂ ಬೇಡ ಈ ನರಕಯಾತನೆ

ಲಂಡನ್​​: ಆಸ್ಪತ್ರೆಯೊಂದರಲ್ಲಿ ಬ್ರಿಟನ್​​ ನರ್ಸ್​​ ಲೂಸಿ ಲೆಟ್ಟಿ ಎಂಬಾಕೆ ಬರೋಬ್ಬರಿ 7 ನವಜಾತ ಶಿಶುಗಳನ್ನ ಕೊಂದು ವಿಕೃತಿ ಮೆರೆದಿದ್ದ ಘಟನೆ ಭಾರೀ ಸದ್ದು ಮಾಡಿತ್ತು. ಈ ಕೇಸ್​ ತನಿಖೆಯನ್ನು ತೀವ್ರಗೊಳಿಸಿದ್ದ ಬ್ರಿಟನ್​ ಪೊಲೀಸರು ಕೊನೆಗೂ ಲೂಸಿ ಶೆಟ್ಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ ಲೂಸಿ ಶೆಟ್ಟಿಯನ್ನು ಹಿಡಿಯಲು ಬ್ರಿಟನ್​ ಪೊಲೀಸರಿಗೆ ಸಹಾಯ ಮಾಡಿದ್ದು ಭಾರತ ಮೂಲದ ಮಕ್ಕಳ ವೈದ್ಯ ಡಾ. ರವಿ ಜಯರಾಮ್ ಎಂಬುವವರು ಎಂದು ತಿಳಿದು ಬಂದಿದೆ.

ಇದನ್ನು ಓದಿ: ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿ ಈ ನರ್ಸ್​.. 7 ಮುಗ್ಧ ಕಂದಮ್ಮಗಳ ಹಿಸುಕಿ ಕೊಂದ ಪಾಪಿ ಈಕೆ..!

ಡಾ. ರವಿ ಜಯರಾಮ್​​ ಹುಟ್ಟಿದ್ದು ಬ್ರಿಟನ್​ನಲ್ಲೇ ಆದರೂ ತನ್ನ ತಂದೆ ತಾಯಿ ಮೂಲತಃ ಭಾರತದವರು. ಹೀಗಾಗಿ ಇವರನ್ನು ಯುಕೆ ಬಾರ್ನ್ ಇಂಡಿಯನ್​ ಆರಿಜಿನ್​​ ಪ್ರಜೆ ಎಂದು ಕರೆಯಲಾಗುತ್ತದೆ. ಇಂಗ್ಲೆಂಡ್​​ನ ಪ್ರತಿಷ್ಠಿತ ​​ಹೆರಿಗೆ ಆಸ್ಪತ್ರೆಯಲ್ಲಿ ಲೂಸಿ ಲೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಳು. ಹಲವು ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದ ಲೂಸಿ ಆ ಒಂದು ಕ್ಷಣಕ್ಕಾಗಿ ಕಾಯುತ್ತಿದ್ದಳು. ಯಾವಾಗ ತಾಯಿ ಆಗಷ್ಟೇ ಹುಟ್ಟಿರೋ ತನ್ನ ಮಗುವನ್ನು ಬಿಟ್ಟು ಹೊರಗೆ ಹೋಗುತ್ತಾರೋ ಆಗ ಯಾರಿಗೂ ಗೊತ್ತಿಲ್ಲದೆ ನವಜಾತ ಶಿಶುವಿನ ಉಸಿರು ನಿಲ್ಲಿಸುತ್ತಿದ್ದಳು. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 7 ಮಕ್ಕಳನ್ನು ಬಲಿ ಪಡೆದ ಕೆಟ್ಟ ಇತಿಹಾಸ ಈಕೆಯದ್ದು.

ಪೊಲೀಸರು ಈ ಕೇಸ್​ ಭೇದಿಸಿದ್ದೇ ರೋಚಕ!

ಕೇಸ್​ ತನಿಖೆ ಮಾಡಲು ಎಂದು ಬ್ರಿಟನ್​ ಪೊಲೀಸರು ಲೂಸಿ ಮನೆಗೆ ಭೇಟಿ ನೀಡಿದ್ದರು. ಆಗ ಆಕೆ ತನ್ನ ಕೈಯ್ಯಾರೆ ಬರೆದಿದ್ದ ಕೆಲವು ಪತ್ರಗಳು ಪೊಲೀಸರಿಗೆ ಸಿಕ್ಕಿವೆ. ನಾನು ರಾಕ್ಷಸಿ, ನನ್ನ ಕೈಯಲ್ಲಿ ಮಕ್ಕಳನ್ನು ಆರೈಕೆ ಮಾಡಲು ಆಗುತ್ತಿರಲಿಲ್ಲ. ನಾನು ತುಂಬಾ ಕೆಟ್ಟವಳು, ನಾನು ಆರೈಕೆ ಮಾಡಿದ ಮಕ್ಕಳು ಬದುಕಬಾರದು ಎಂದು ಉದ್ದೇಶಪೂರ್ವಕವಾಗಿ ಕೊಂದಿದ್ದೇನೆ ಎಂದು ಬರೆದಿದ್ದಳು. ಈ ಪತ್ರಗಳನ್ನೇ ಸಾಕ್ಷಿಯಾಗಿಟ್ಟು ಪೊಲೀಸರು ಲೂಸಿಯನ್ನು ಬಂಧಿಸಿದ್ದಾರೆ. ಇದಕ್ಕೆ ಭಾರತ ಮೂಲದ ವೈದ್ಯರು ಸಹಾಯ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ಕಣ್ಣೇ ಬಿಡದ ಏಳು ಮಕ್ಕಳ ಉಸಿರು ನಿಲ್ಲಿಸಿದ್ದ ಹಂತಕಿ; ಈಕೆಯನ್ನು ಹಿಡಿದುಕೊಟ್ಟಿದ್ದೇ ಭಾರತದ ಡಾಕ್ಟರ್​​

https://newsfirstlive.com/wp-content/uploads/2023/08/death-1-2.jpg

Load More