Advertisment

ಇವರು ವಿಶ್ವದ ದೀರ್ಘಾಯುಷಿ.. 2ನೇ ವಿಶ್ವಯುದ್ಧ ಕಣ್ಣಾರೆ ಕಂಡ ಏಕೈಕ ವ್ಯಕ್ತಿ, ಅಜ್ಜನ ಲೈಫ್​ಸ್ಟೈಲ್ ರೋಚಕ..!

author-image
Bheemappa
Updated On
ಇವರು ವಿಶ್ವದ ದೀರ್ಘಾಯುಷಿ.. 2ನೇ ವಿಶ್ವಯುದ್ಧ ಕಣ್ಣಾರೆ ಕಂಡ ಏಕೈಕ ವ್ಯಕ್ತಿ, ಅಜ್ಜನ ಲೈಫ್​ಸ್ಟೈಲ್ ರೋಚಕ..!
Advertisment
  • ಪ್ರತಿ ಶುಕ್ರವಾರ ಮನೆಯಲ್ಲಿ ಮಾಡುವ ಫಿಶ್ ಊಟ ಆಯಸ್ಸು ಹೆಚ್ಚಿಸಿತಾ?
  • ಇಂಗ್ಲೆಂಡ್​ನ ರಾಣಿ ಪ್ರತಿ ವರ್ಷ ಗ್ರೀಟಿಂಗ್ ಕಾರ್ಡ್ ಅನ್ನು ಕಳುಹಿಸುತ್ತಾರೆ
  • ವಿಶ್ವದ ಸುದೀರ್ಘವಾದ ದೀರ್ಘಾಯುಷಿ ಮಹಿಳೆ ಯಾರು, ಬದುಕಿದ್ದಾರಾ?

ಅತಿ ಹೆಚ್ಚು ಕಾಲ ಬದುಕಿ ಬಾಳಬೇಕು ಎನ್ನುವುದು ಎಲ್ಲರ ಮನದಲ್ಲೂ ಇರುತ್ತದೆ. ಇದಕ್ಕೆ ಯಾವ ರೀತಿಯ ಜೀವನ ಶೈಲಿ ಇರಬೇಕು ಎನ್ನುವುದು ಗೊತ್ತಿರಲ್ಲ. ಒಂದು ವೇಳೆ ಗೊತ್ತಿದ್ದರೂ ಅದನ್ನು ಪಾಲಿಸದೇ ಸಿಕ್ಕ, ಸಿಕ್ಕ ಆಹಾರ ತಿಂದು ಅನಾರೋಗ್ಯಕ್ಕೆ ಒಳಗಾಗುತ್ತೇವೆ. 100 ವರ್ಷಕ್ಕೂ ಮೀರಿ ಬದುಕಿದವರು ಈಗ ಭಾರತದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಿಗಬಹುದು. ಆದರೆ ಇಲ್ಲೊಬ್ಬ ಹಿರಿಯಜ್ಜ 111 ವರ್ಷಗಳಾದರೂ ಸುಖಕರ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದು ಕೇಳದರೆ, ಸಿಂಪಲ್ ಆಗಿ ‘ಜಸ್ಟ್​ ಲಕ್’ ಎಂದು ಹೇಳಿದ್ದಾರೆ.

Advertisment

ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ವರ್ಷದಿಂದ ಜೀವನ ನಡೆಸುತ್ತಿರುವ ಪಟ್ಟಿಯಲ್ಲಿ ಇಂಗ್ಲೆಂಡ್​ನ ಜಾನ್ ಆಲ್ಫ್ರೆಡ್ ಟಿನ್ನಿಸ್ವುಡ್ ಆಗಿದ್ದಾರೆ. ಇವರು 1912ರಲ್ಲಿ ಉತ್ತರ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿ ಜನಿಸಿದ್ದಾರೆ. ವೃತ್ತಿಯಲ್ಲಿ ಅಕೌಂಟೆಂಟ್ ಆದ ಇವರು ಅಂಚೆ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತಿಯಾಗಿದ್ದಾರೆ. ಇವರು ಉದ್ಯೋಗದಿಂದ ನಿವೃತ್ತಿ ಹೊಂದಿಯೇ ಹಾಫ್​ ಸೆಂಚುರಿಯಾಗಿದೆ ಎಂದರೆ ಇದಕ್ಕಿಂತ ದೊಡ್ಡ ವಿಶೇಷತೆ ಏನು ಇಲ್ಲ. ಏಕೆಂದರೆ ಈಗಿನ ಕಾಲದಲ್ಲಿ 50 ವರ್ಷ ಆಗುವಷ್ಟರಲ್ಲಿ ಕೆಲವೊಬ್ಬರು ಜೀವನ ಸಾಕಾಗಿ ನಾನಾ ರೀತಿಯಲ್ಲಿ ಕೊನೆಯುಸಿರೆಳೆಯುತ್ತಾರೆ. ಆದರೆ ಜಾನ್ ಆಲ್ಫ್ರೆಡ್ ಮಾತ್ರ ದೀರ್ಘಾಯುಷ್ಯ ಪಡೆದು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

publive-image

114 ವರ್ಷ ಬದುಕಿದ್ದ ಜುವಾನ್ ವಿಸೆಂಟೆ ಪೆರೆಜ್ ಮೋರಾ 

ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೋರಾ ಅವರು 114 ವರ್ಷ ಬದುಕಿ ದೀರ್ಘಾಯುಷ್ಯ ಆಗಿದ್ದಕ್ಕೆ ಗಿನ್ನೆಸ್ ದಾಖಲೆಯ ಪ್ರಶಸ್ತಿ ನೀಡಲಾಗಿತ್ತು. ಇತ್ತೀಚೆಗೆ ಇವರು 2024 ಏಪ್ರಿಲ್ 2 ರಂದು ನಿಧನ ಹೊಂದಿದ್ದಾರೆ. ಇವರಲ್ಲದೇ ಜಪಾನ್​ನ ಗಿಸಾಬುರೊ ಸೊನೊಬೆ 112 ವರ್ಷ ಬದುಕಿದ್ದರು. ಇವರು ಇದೇ ವರ್ಷದ ಮಾರ್ಚ್​ 31 ರಂದು ನಿಧನ ಹೊಂದಿದ್ದಾರೆ. ಹೀಗಾಗಿ ಇದೀಗ ವಿಶ್ವದ ದೀರ್ಘಾಯುಷ್ಯ ಎಂಬ ಹೆಗ್ಗಳಿಕೆಗೆ ಜಾನ್ ಆಲ್ಫ್ರೆಡ್ ಅವರು ಪಾತ್ರರಾಗಿದ್ದಾರೆ. ಇವರಿಗೆ ಸದ್ಯಕ್ಕೆ 111 ವರ್ಷಗಳು ತುಂಬಿ 222 ದಿನಗಳು ಆಗಿವೆ. ಜಾನ್ ಆಲ್ಫ್ರೆಡ್ ಅವರು 2020ರಲ್ಲೇ ಇಂಗ್ಲೆಂಡ್​ನ ಹಿರಿ ಅಜ್ಜ ಎಂದು ಖ್ಯಾತಿ ಪಡೆದಿದ್ದರು. ಆದರೆ ಈಗ ವಿಶ್ವಕ್ಕೆ ಹಿರಿ ಅಜ್ಜ ಹೆಗ್ಗಳಿಕೆ ಪಾತ್ರ ಆಗಿರುವುದಕ್ಕೆ ಜಾನ್ ಆಲ್ಫ್ರೆಡ್ ಸಂತಸ ವ್ಯಕ್ತಪಡಿಸಿದ್ದಾರೆ.

ಜಾನ್ ಆಲ್ಫ್ರೆಡ್ ಅವರನ್ನು ಇಷ್ಟೊಂದು ವರ್ಷಗಳು ಸುದೀರ್ಘವಾಗಿ ಬದುಕಿ ಬಾಳಲು ಏನು ಕಾರಣ ಎಂದು ಪ್ರಶ್ನೆ ಮಾಡಲಾಗಿತ್ತು. ಈ ಸಂಬಂಧ ಜಾನ್ ಆಲ್ಫ್ರೆಡ್ ಅವರು ಮಾತನಾಡಿದ್ದಾರೆ.

Advertisment

ನಾವು ದೀರ್ಘಾಕಾಲ ಬದುಕುವುದು ಹಾಗೂ ಕಡಿಮೆ ಅವಧಿಯಲ್ಲೇ ಸಾವನ್ನಪ್ಪುವುದು ಎನ್ನುವುದು ನಮ್ಮ ಕೈಯಲ್ಲಿ ಇಲ್ಲ. ಇದೊಂದು ಜಸ್ಟ್​ ಲಕ್​. ನನಗೆ ಒಲಿದ ಅದೃಷ್ಟ ಅಷ್ಟೇ. ಮನೆಯಲ್ಲಿ ಪ್ರತಿ ಶುಕ್ರವಾರ ಫಿಶ್ ಮಾಡುತ್ತಾರೆ. ನನ್ನ ಫೆವರೀಟ್ ಆಹಾರಗಳಲ್ಲಿ ಫಿಶ್ ಮತ್ತು ಚಿಪ್ಸ್​ ಆಗಿವೆ. ಇವುಗಳನ್ನ ತಿನ್ನುವುದು ಎಂದರೆ ಹೆಚ್ಚು ಇಷ್ಟ. ಮನೆಯಲ್ಲಿ ಎಲ್ಲರಿಗೂ ಏನು ಆಹಾರ ಮಾಡಿರುತ್ತಾರೋ ಅದನ್ನೇ ನಾನು ತಿನ್ನುವುದು. ನಿಯಮಿತವಾಗಿ ಯಾವುದೇ ಆಹಾರ ಪಾಲನೆ ಮಾಡಿಲ್ಲ. ಪ್ರಪಂಚವು ನಿತ್ಯ ನಡೆಯುತ್ತಿರುತ್ತದೆ. ಅದು ಒಂದು ರೀತಿ ಅನುಭವವಾಗಿದೆ. ನನ್ನ ಪತ್ನಿ ಬ್ಲೋಡ್ವೆನ್ ಅವರನ್ನು ಲಿವರ್‌ಪೂಲ್‌ನಲ್ಲಿ ಡ್ಯಾನ್ಸ್​ ಮಾಡುವಾಗ ಇಷ್ಟ ಪಟ್ಟು ಮದುವೆಯಾದೆ. ಬಳಿಕ 44 ವರ್ಷ ಜೊತೆಯಾಗಿ ಇದ್ದೇವು. ಆದರೆ 1986ರಲ್ಲಿ ಅವರು ನಿಧನ ಹೊಂದಿದರು.

ಜಾನ್ ಆಲ್ಫ್ರೆಡ್,ವಿಶ್ವದ ದೀರ್ಘಾಯುಷ್ಯಿ

publive-image

ನಿತ್ಯದ ಕೆಲಸಗಳನ್ನೆಲ್ಲ ಯಾರ ಸಹಾಯವಿಲ್ಲದೇ ಜಾನ್ ಆಲ್ಫ್ರೆಡ್ ಅವರು ಮಾಡಿಕೊಳ್ಳುತ್ತಾರೆ. ಬೆಳಗ್ಗೆ ಬೆಡ್​ನಿಂದ ಎದ್ದ ಬಳಿಕ ಅವರು ರೇಡಿಯೋದಲ್ಲಿ ವಾರ್ತೆಗಳನ್ನು ಕೇಳುತ್ತಾರೆ. ಬಳಿಕ ಅವರ ನಿತ್ಯದ ಖರ್ಚುಗಳನ್ನ ಸರಿದೂಗಿಸಿಕೊಂಡು ವ್ಯವಹಾರ ಮಾಡುತ್ತಾರೆ. ವಿಶ್ವದಲ್ಲಿ ನಡೆದ 2 ವಿಶ್ವ ಯುದ್ಧದ ಸಂದರ್ಭದಲ್ಲಿ ಇದ್ದಂತ ಪ್ರಪಂಚದ ಏಕೈಕ ವ್ಯಕ್ತಿ. 2ನೇ ವಿಶ್ವಯುದ್ಧದಲ್ಲಿ ಆರ್ಮಿ ಪೇ ಕಾರ್ಪ್ಸ್‌ಗೆ ಆಡಳಿತಾತ್ಮಕ ಪಾತ್ರದಲ್ಲಿ ಇವರು ಕೆಲಸ ಮಾಡಿದ್ದರು. ಬ್ರಿಟಿಷ್ ಸೇನೆಯ ಅಕೌಂಟ್​, ಲೆಕ್ಕಪರಿಶೋಧನೆ ನೋಡಿಕೊಳ್ಳುತ್ತಿದ್ದರು. ತಮ್ಮ ಸೈನಿಕರು ಎಲ್ಲಿಯಾದರೂ ಸಿಕ್ಕಿಕೊಂಡಿದ್ದರೆ ಅವರನ್ನು ಪತ್ತೆ ಹಚ್ಚುವುದರ ಜೊತೆಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಸ್ಟಾರ್​ ಚಂದ್ರು ಭರ್ಜರಿ ಸರ್ಕಸ್.. ಮಂಡ್ಯದಲ್ಲಿ ಚುನಾವಣಾ ರಣಕಹಳೆ..!

Advertisment

publive-image

ಇಂಗ್ಲೆಂಡ್​ನ ರಾಣಿ  ಗ್ರೀಟಿಂಗ್ ಕಾರ್ಡ್​ ಕಳುಹಿಸುತ್ತಾರೆ

ಜಾನ್ ಆಲ್ಫ್ರೆಡ್ 2012 ರಲ್ಲಿ 100ನೇ ವರ್ಷಕ್ಕೆ ಕಾಲಿಟ್ಟಾಗ ಇಂಗ್ಲೆಂಡ್​ನ ರಾಣಿ ಎಲಿಜಬೆತ್‌ ಅವರು ಬರ್ತ್​ಡೇಗಾಗಿ ಗ್ರೀಟಿಂಗ್ ಕಾರ್ಡ್​ ಕಳುಹಿಸಿದ್ದರು. ಇದನ್ನು ಈಗಲೂ ಕಂಟಿನ್ಯೂ ಮಾಡಿರುವ ರಾಣಿ ಪ್ರತಿ ವರ್ಷ ಹುಟ್ಟುಹಬ್ಬದಂದು ಅವರಿಗೆ ಗ್ರೀಟಿಂಗ್ ಕಾರ್ಡ್​ ಕಳಿಸುತ್ತಲಿದ್ದಾರೆ. ನೀವು ಇಂದಿನ ಯುವ ಸಮುದಾಯಕ್ಕೆ ಮಾದರಿ. ಅವರಿಗೆ ಸಲಹೆಗಳನ್ನು ನೀಡಬೇಕು. ಸಾಧ್ಯವಾದಷ್ಟು ಯುವಕರಿಗೆ ಏನೇನ್ನದರೂ ಕಲಿಸುತ್ತೀರಿ ಎಂದು ಗ್ರೀಟಿಂಗ್​ನಲ್ಲಿ ರಾಣಿ ಬರೆದಿರುತ್ತಾರೆ ಎಂದು ಹೇಳಲಾಗಿದೆ.

ಜಪಾನ್‌ನ ಜಿರೋಮನ್ ಕಿಮುರಾ ಎನ್ನುವರು 116 ವರ್ಷ 54 ದಿನಗಳು ಬದುಕಿದ್ದರು ದಾಖಲೆ ಮಾಡಿದ್ದರು. ಆದರೆ ಇವರು 2013 ರಲ್ಲಿ ನಿಧನರಾದರು. ಸದ್ಯ ವಿಶ್ವದ ಅತ್ಯಂತ ಹಿರಿಯ ಜೀವಂತ ಮಹಿಳೆ ಸ್ಪೇನ್‌ನ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಇತ್ತೀಚೆಗೆ ತಮ್ಮ 117ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರನ್ನು ಬಿಟ್ಟರೇ ಇಂಗ್ಲೆಂಡ್​ನ ಜಾನ್ ಆಲ್ಫ್ರೆಡ್ ಅವರು 111 ವರ್ಷಗಳಿಂದ ಜೀವಂತವಾಗಿದ್ದಾರೆ.

ವಿಶೇಷ ವರದಿ;ಭೀಮಪ್ಪ,ನ್ಯೂಸ್ ಫಸ್ಟ್​, ಡಿಜಿಟಲ್​ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment