ಹುಡುಗರ ಹಾರ್ಟ್​ಗೆ ಸಂಚಕಾರ.. ಯುವಕರೇ ‘ಬ್ರೋಕನ್​ ಹಾರ್ಟ್​​ ಸಿಂಡ್ರೋಮ್’ ಬಗ್ಗೆ ಇರಲಿ ಎಚ್ಚರ..!

author-image
Ganesh
Updated On
ಹುಡುಗರ ಹಾರ್ಟ್​ಗೆ ಸಂಚಕಾರ.. ಯುವಕರೇ ‘ಬ್ರೋಕನ್​ ಹಾರ್ಟ್​​ ಸಿಂಡ್ರೋಮ್’ ಬಗ್ಗೆ ಇರಲಿ ಎಚ್ಚರ..!
Advertisment
  • ಮಹಿಳೆಯರಿಗಿಂತ ಗಂಡಸರನ್ನೇ ಕಾಡ್ತಿದೆ ಈ ಕಾಯಿಲೆ
  • ಅಮೆರಿಕ ಆರೋಗ್ಯ ತಜ್ಞರಿಂದ ಬೆಚ್ಚಿ ಬೀಳಿಸೋ ರಿಪೋರ್ಟ್
  • 2016ರಿಂದ ಈ ಸಿಂಡ್ರೋಮ್​ನ ಪ್ರಭಾವ ಹೆಚ್ಚಾಗಿದೆಯಂತೆ!

ಇತ್ತೀಚಿನ ದಿನಗಳಲ್ಲಿ ಯುವ ಜನತೆ, ಮೇಲ್ನೋಟಕ್ಕೆ ಆರೋಗ್ಯವಾಗಿ ಕಾಣುತ್ತಿದ್ದರೂ ಇದ್ದಕ್ಕಿದ್ದ ಹಾಗೆ ಜೀವ ಕಳೆದುಕೊಳ್ತಿದ್ದಾರೆ. ಹಾರ್ಟ್ ಅಟ್ಯಾಕ್​ ಅಂದರೆ ದೊಡ್ಡ ವಯಸ್ಸಿನವರ ಖಾಯಿಲೆ ಅನ್ನೋ ಒಂದು ಕಲ್ಪನೆಯಿಂದ, ಸಣ್ಣ ಸಣ್ಣವರ ಖಾಯಿಲೆಯೂ ಸಹ ಅನ್ನುವ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಈ ಆತಂಕದ ಬೆನ್ನಲ್ಲೇ ಆರೋಗ್ಯ ತಜ್ಞರು ಮತ್ತೊಂದು ಆಘಾತಕಾರಿ ವಿಷಯ ಒಂದನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ಮೊಸರು ತಿಂದ ತಕ್ಷಣ ಯಾಕೆ ನೀರು ಕುಡಿಯಬಾರದು..? ರಾತ್ರಿ ವೇಳೆ ಇದನ್ನು ತಿನ್ನೋದ್ರಿಂದ ಆಗುವ ಸಮಸ್ಯೆ ಏನು?

publive-image

ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ​​ ಒಂದು ಅಧ್ಯಯನವನ್ನ ನಡೆಸಿತ್ತು. ಆ ಅಧ್ಯಯನದಲ್ಲಿ ಸುಮಾರು 2 ಲಕ್ಷ ಮಂದಿ ಗಂಡಸರಲ್ಲಿ ‘ಬ್ರೋಕೆನ್​ ಹಾರ್ಟ್​​ ಸಿಂಡ್ರೋಮ್’ (Broken heart syndrome) ಎಂಬ ಖಿನ್ನತೆ ಕಾಣಿಸಿದೆಯಂತೆ. ಈ ಸಿಂಡ್ರೋಮ್​ನ ಲಕ್ಷಣಗಳು ಹಾರ್ಟ್​ಗೆ ಸಂಬಂಧಿಸಿವೆ.

ಉದಾಹರಣೆಗೆ ಒಂದು ಸಣ್ಣ ವಿಷಯಕ್ಕೂ ಬೇಸರ, ಕಣ್ಣೀರಿಗೆ ತುತ್ತಾಗುತ್ತಿದ್ದವರು ಮಹಿಳೆಯರೇ ಹೆಚ್ಚು ಅನ್ನೋ ಮಾತಿತ್ತು. ಈಗ ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರೇ ‘ಬ್ರೋಕೆನ್​ ಹಾರ್ಟ್​​ ಸಿಂಡ್ರೋಮ್’ಗೆ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದು ಆಘಾತಕಾರಿ ವಿಷಯವೇನಂದರೆ, ಈ ಸಿಂಡ್ರೋಮ್​ನಿಂದ ಸಾಯುವ ಸಾಧ್ಯತೆಯನ್ನ ಮಹಿಳೆಯರಿಗೆ ಹೋಲಿಸಿದರೆ. ಅದಕ್ಕಿಂತ ಎರಡು ಪಟ್ಟು ಹೆಚ್ಚು ಪುರುಷರಿದ್ದಾರೆ ಎನ್ನಲಾಗ್ತಿದೆ. ದೈಹಿಕವಾಗಿ ಆಗಲೀ ಅಥವಾ ಮಾನಸಿಕವಾಗಿ ಆಗಲೀ, ತೀವ್ರ ಒತ್ತಡದಿಂದ ಉಂಟಾಗುವ ಈ ‘ಬ್ರೋಕೆನ್​ ಹಾರ್ಟ್​​ ಸಿಂಡ್ರೋಮ್’ ಈಗ ಪುರುಷರಲ್ಲಿ 11.2% ಇದ್ದರೆ, ಮಹಿಳೆಯರಲ್ಲಿ 5.5% ರಷ್ಟು ಸಾವನ್ನು ಹೃದ್ರೋಗ ತಜ್ಞರು ಗುರುತಿಸಿದ್ದಾರೆ.

ಇದನ್ನೂ ಓದಿ: Health warning: ಮತ್ತೆ ಜಗತ್ತಿಗೆ ಎಚ್ಚರಿಕೆ ಕೊಟ್ಟ ಹೊಸ ಅಲೆ.. ಹೋದ್ಯಾ ಪಿಶಾಚಿ ಅಂದ್ರೆ..

publive-image

ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಇನ್ನೂ ಅನೇಕ ಹೃದಯ ಸಂಬಂಧಿ ಗಂಭೀರ ತೊಂದರೆಗಳನ್ನು ಈ ಸಿಂಡ್ರೋಮ್​ನಿಂದ ಸಂಶೋಧಕರು ಗಮನಿಸಿದ್ದಾರೆ. ಈ ಸಿಂಡ್ರೋಮ್​ಗೆ ವಯಸ್ಸಿನ ಅಗತ್ಯವಿಲ್ಲ. 61 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಈ ಸಿಂಡ್ರೋಮ್​ನಿಂದ ಹೆಚ್ಚು ಅಪಾಯದಲ್ಲಿದ್ದಾರೆ. 31 ರಿಂದ 45 ವರ್ಷ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ.

2016ರಿಂದ ಈ ಸಿಂಡ್ರೋಮ್​ನ ಪ್ರಭಾವ ಹೆಚ್ಚಾಗಿದ್ದು, ಐದು ವರ್ಷಗಳ ಅವಧಿಗೆ ಬಂದಿದ್ದರೂ ಸಹ, ಪುರುಷರ ಮರಣ ಪ್ರಮಾಣದಲ್ಲಿ ಸುಧಾರಣೆಯಾಗದೆ ಇರುವುದು ಅತ್ಯಂತ ಕಳವಳ ಮೂಡಿಸಿದೆ. ಈ ರೋಗಕ್ಕೆ ಚಿಕಿತ್ಸೆ ವಿಧಾನಗಳು ಸಾಕಷ್ಟಿಲ್ಲ ಎಂದು ಹೇಳುತ್ತಿದ್ದಾರೆ. ಒತ್ತಡಕ್ಕೆ ಒಳಗಾಗಿದೆ. ಲವ್​ ಫೇಲ್ಯೂಯರ್​​, ಬಿಸ್ನೆಸ್​​ ಲಾಸ್, ಕೌಟುಂಬಿಕ ಒತ್ತಡಗಳನ್ನ ನಿಯಂತ್ರಿಸಿದರೆ ಗಂಡಸರ ಜೀವ ಉಳಿಸಿಕೊಳ್ಳಬಹುದು.

ಇದನ್ನೂ ಓದಿ: ಬೆಂಗಳೂರಿಗರೇ ನಿರ್ಲಕ್ಷ್ಯ ಬೇಡ ಎಚ್ಚರ, ಎಚ್ಚರ.. ಸಿಲಿಕಾನ್ ಸಿಟಿ ಜನರಿಗೆ ಆಘಾತಕಾರಿ ಸುದ್ದಿ ಇದು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment