newsfirstkannada.com

ಸಹೋದರ ಮತ್ತು ನಾದಿನಿಯ ಕಿರುಕುಳ; ಬೇಸತ್ತು ಮಗಳನ್ನು ಕೊಂದು ನೇಣು ಹಾಕಿಕೊಂಡ ಮಹಿಳೆ

Share :

11-07-2023

    ಮಹಿಳೆಗೆ ಯೋಧರೊಬ್ಬರ ಜೊತೆ ವಿವಾಹ ಆಗಿತ್ತು

    ಮಗಳೊಂದಿಗೆ ಸಹೋದರನ ಮನೆಯಲ್ಲಿ ವಾಸವಿದ್ದ ಮಹಿಳೆ

    ಸಹೋದರ ಮತ್ತು ನಾದಿನಿಯ ಕಿರುಕುಳಕ್ಕೆ ದಿಕ್ಕು ತೋಚದೆ ಆತ್ಮಹತ್ಯೆ

ಸಹೋದರ ಮತ್ತು ನಾದಿನಿಯ ಕಿರುಕುಳಕ್ಕೆ ಬೇಸತ್ತು ತನ್ನ ಮಗಳನ್ನು ನೇಣು ಬಿಗಿದು ಕೊಂದು ಅದೇ ಹಗ್ಗದಲ್ಲಿ ನೇಣು ಹಾಕಿಕೊಂಡು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಾವಿಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಚಾಂದನಿ ಕೊಲೆಯಾದ ಬಾಲಕಿ ಹಾಗೂ ತಾಯಿ ಮಹಾದೇವಿ ಇಂಚಲ ಆತ್ಮಹತ್ಯೆ ಮಾಡಿಕೊಂಡವರು ಅಂತ ಗುರುತಿಸಲಾಗಿದೆ.

ಯೋಧನ ಜೊತೆ ವಿವಾಹ

ಮಹಾದೇವಿಗೆ ಗೋಕಾಕ್​ನ ಖನಗಾಂವನ ಯೋಧರೊಬ್ಬರ ಜೊತೆ ವಿವಾಹ ಆಗಿತ್ತು. ಆದರೆ ಏಳು ವರ್ಷಗಳ ಹಿಂದೆ ಪತಿ ಅಕಾಲಿಕವಾಗಿ ನಿಧನ ಹೊಂದಿದ್ರು. ನಂತರ ಮಹಾದೇವಿ ಇಂಚಲ ತನ್ನ ಪುತ್ರಿಯೊಂದಿಗೆ ದಿಂಡಲಕೊಪ್ಪದಲ್ಲಿರುವ ತನ್ನ ತವರು ಮನೆ ಸೇರಿದ್ದರು.

ನಿರಂತರ ಕಿರುಕುಳ

ಆದರೆ ಸಹೋದರ ಹಾಗೂ ನಾದಿನಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಹಾದೇವಿ ಸಾಯಲು ತೀರ್ಮಾನಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಹೋದರ ಮತ್ತು ನಾದಿನಿಯ ಕಿರುಕುಳ; ಬೇಸತ್ತು ಮಗಳನ್ನು ಕೊಂದು ನೇಣು ಹಾಕಿಕೊಂಡ ಮಹಿಳೆ

https://newsfirstlive.com/wp-content/uploads/2023/07/Belagavi-Suicide.jpg

Load More