ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

author-image
Bheemappa
Updated On
ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?
Advertisment
  • ಸ್ವಂತ ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ
  • ಅಕ್ಕನ ಕಾಲುಗಳನ್ನು ಕಡಿಯಲು ಮುಂದಾಗಿದ್ದ ಸಹೋದರ
  • ಗಲಾಟೆಯಲ್ಲಿ ಅಕ್ಕ, ಅಕ್ಕನ ಮಗಳ ಮೇಲೆ ಸಹೋದರ ಹಲ್ಲೆ

ಹೈದರಾಬಾದ್: ಮನೆಯ ಜಾಗದ ವಿಷಯಕ್ಕೆ ಸಂಬಂಧ ಪಟ್ಟಂತೆ ಸ್ವಂತ ಅಕ್ಕನ ಮೇಲೆ ತಮ್ಮ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನಿ ಮಂಡಲಂನ ಪೆನಕಚರ್ಲ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

ಆಂಧ್ರದ ಪೆನಕಚರ್ಲ ಗ್ರಾಮದ ನಿವಾಸಿ ಮಹೆಬೂಬಿ ಎನ್ನುವರು ತಮ್ಮನಿಂದ ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗಳ ಮೇಲೂ ದಾಳಿ ಮಾಡಲಾಗಿದೆ. ಕಿರಿಯ ಸಹೋದರ ಜಿಲಾನಿ ಬಾಷಾ ಹಲ್ಲೆ ಮಾಡಿದ ವ್ಯಕ್ತಿ. ಮನೆಯ ಸ್ಥಳದ ವರ್ಗಾವಣೆ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಆದರೆ ಇದರಿಂದ ಕುಪಿತಗೊಂಡ ಆರೋಪಿ ಏಕಾಏಕಿ ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?


">July 10, 2024

ದಾಳಿ ವೇಳೆ ತಪ್ಪಿಸಿಕೊಳ್ಳಲು ಹೋದರು ಆಕೆಯ ಕಾಲುಗಳನ್ನ ಕಡಿಯಲು ಹೋಗಿದ್ದಾನೆ. ಈ ವೇಳೆ ಬಲವಾದ ಪೆಟ್ಟುಗಳು ಮಹಿಳೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಹಿಳೆ ಹಾಗೂ ಆಕೆಯ ಮಗಳನ್ನು ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಜಿಲಾನಿ ಬಾಷಾನನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment