ಚಿತ್ರದುರ್ಗದಲ್ಲಿ ದಾರುಣ ಘಟನೆ.. ಹಾಸ್ಟೆಲ್​​ನಲ್ಲಿದ್ದ ಮಗನ ನೋಡಲು ಹೋಗಿದ್ದ ಅಮ್ಮ, ಮಾವ ದುರಂತ ಅಂತ್ಯ

author-image
Ganesh
Updated On
ಚಿತ್ರದುರ್ಗದಲ್ಲಿ ದಾರುಣ ಘಟನೆ.. ಹಾಸ್ಟೆಲ್​​ನಲ್ಲಿದ್ದ ಮಗನ ನೋಡಲು ಹೋಗಿದ್ದ ಅಮ್ಮ, ಮಾವ ದುರಂತ ಅಂತ್ಯ
Advertisment
  • ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಪ್ರಾಣ ಕಳ್ಕೊಂಡಿದ್ದಾರೆ
  • ವೇಗವಾಗಿ ಬಂದ ಕಾರು ಚಾಲಕ, ಬೈಕ್​ಗೆ ಡಿಕ್ಕಿ ಹೊಡೆದಿದೆ
  • ಚಳ್ಳಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗನನ್ನು ಭೇಟಿ ಮಾಡಲು ಹೊರಟಿದ್ದ ತಾಯಿ ಹಾಗೂ ಆಕೆ ತಮ್ಮ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ: ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

publive-image

ವೇಗವಾಗಿ ಬಂದ ಕಾರು ಚಾಲಕ, ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಅಭಿಷೇಕ ಹಾಗೂ ಮಂಜುಳ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ದೇವರಿಕೊಟ್ಟ ಗ್ರಾಮದ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗನನ್ನು ನೋಡಲು ಬೈಕ್​ನಲ್ಲಿ ಮಂಜುಳಾ ತಮ್ಮ ಸಹೋದರನ ಜೊತೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

ಅಪಘಾತದಲ್ಲಿ ಕಾರು ಬೈಕ್​​ಗೆ ಡಿಕ್ಕಿ ಹೊಡೆದು ಸುಮಾರು ದೂರಕ್ಕೆ ಬೈಕ್ ಎಳೆದೊಯ್ದಿದೆ. ಘಟನೆಗೆ ಕಾರು ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಚಳ್ಳಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇವತ್ತು ಪ್ರಜ್ವಲ್ ರೇವಣ್ಣ ಭವಿಷ್ಯ ತೀರ್ಮಾನ.. ಅಪರಾಧಿ ಎಂದು ತೀರ್ಪು ಬಂದ್ರೆ ರಾಜಕೀಯ ಭವಿಷ್ಯ ಖತಂ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment