ದಂಡಪಿಂಡ ಅಂತ ಕರೆದಿದ್ದಕ್ಕೆ ಚಾಕು ಎಸೆದ ಅಣ್ಣ.. ತಮ್ಮನ ಎದೆಗೆ ಬಂದು ಚುಚ್ಚಿದ ಚೂರಿ.. ಅಲ್ಲೇ ಸಾವು

author-image
AS Harshith
Updated On
ದಂಡಪಿಂಡ ಅಂತ ಕರೆದಿದ್ದಕ್ಕೆ ಚಾಕು ಎಸೆದ ಅಣ್ಣ.. ತಮ್ಮನ ಎದೆಗೆ ಬಂದು ಚುಚ್ಚಿದ ಚೂರಿ.. ಅಲ್ಲೇ ಸಾವು
Advertisment
  • ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಅಣ್ಣ
  • ಅಣ್ಣ ಮನೆಯಲ್ಲಿ ಇರೋದನ್ನು ಕಂಡು ದಂಡಪಿಂಡ ಎಂದ ತಮ್ಮ
  • ತಮ್ಮ ಮಾತು ಕೇಳಿ ಜಗಳವೆತ್ತಿದ ಅಣ್ಣ.. ಚೂರಿ ಎಸೆತಕ್ಕೆ ಪ್ರಾಣ ಬಿಟ್ಟ ತಮ್ಮ

ದಂಡಪಿಂಡ ಎಂದು ಕರೆದಿದ್ದಕ್ಕೆ ತಮ್ಮನನ್ನೇ ಅಣ್ಣ ಕೊಲೆ ಮಾಡಿದ ಘಟನೆ ಗಾರ್ವೇಬಾವಿ ಪಾಳ್ಯದ ಹೊಂಗಸಂದ್ರದ ಲಕ್ಷ್ಮೀ ‌ಪುರದಲ್ಲಿ ನಡೆದಿದೆ. ಪ್ರಕಾಶ್( 18 ) ಸಾವನ್ನಪ್ಪಿದ ಮೃತ ಸಹೋದರ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದಾಗಿದ್ದು, ತಾಯಿಯ ಮುಂದೆಯೇ ಮಗ ಸಾವನ್ನಪ್ಪಿದ್ದಾನೆ. ರಜನಿ (28) ಕೈಯಾರೆ ತಮ್ಮ ಪ್ರಕಾಶ್ ಕೊಲೆಯಾಗಿದ್ದಾನೆ.

ರಜನಿ ಆರೋಗ್ಯ ಸರಿಯಿಲ್ಲದೇ ಮನೆಯಲ್ಲಿಯೇ ಇದ್ದನು. ಇದನ್ನು ಕಂಡು ತಮ್ಮ ಪ್ರಕಾಶ್​​​​ ಆತನನ್ನು ದಂಡಪಿಂಡ ಎಂದು ಕರೆದಿದ್ದಾನೆ. ಕೋಪಗೊಂಡ ರಜನಿ ಅಡುಗೆ ಕೋಣೆಯಿಂದ ತಮ್ಮನ ಮೇಲೆ ಚಾಕು ಎಸೆದಿದ್ದಾನೆ. ಅಣ್ಣ ಎಸೆದ ಚಾಕು  ನೇರವಾಗಿ ಬಂದು ಪ್ರಕಾಶ್​​ ಎದೆಗೆ ಇರಿದಿದೆ.

publive-image

ಪ್ರಕಾಶ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ರಜನಿ ಹುಷಾರಿಲ್ಲದ ಕಾರಣಕ್ಕೆ ಕೆಲಸಕ್ಕೆ ಹೋಗ್ತಿರಲಿಲ್ಲ. ರಜನಿ ಕೆಲಸಕ್ಕೆ ಹೋಗದ ವಿಚಾರಕ್ಕೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಸಹೋದರ ನಡುವೆ ಹಲ್ಲೆ ನಡೆದಿದೆ. ತಾಯಿ ಬಿಡಿಸಲು ಬಂದಾಗ ರಜನಿ ಅಡುಗೆ ಮನೆಗೆ ತೆರಳಿ ಚಾಕು ಎಸೆದಿದ್ದಾನೆ. ಎಸೆದ ಚಾಕು ಪ್ರಕಾಶನ ಎದೆಗೆ ಇರಿದಿದೆ. ಪರಿಣಾಮ ತೀವ್ರ ರಕ್ತಸ್ರಾವ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಪ್ರಕಾಶ್​ ಸಾವನಪ್ಪಿದ್ದಾನೆ.

ಘಟನೆ ಬಳಿಕ ಅಣ್ಣ ರಜಿನಿ ನಾಪತ್ತೆಯಾಗಿದ್ದು, ಬಳಿಕ ಬೇಗೂರು ಪೊಲೀಸರ ಕೈಗೆ ಸಿಕ್ಕಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment