newsfirstkannada.com

BREAKING: ಸಿಬಿಐನಿಂದ ತಿಹಾರ್ ಜೈಲು ಹಕ್ಕಿ, ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಬಂಧನ

Share :

Published April 11, 2024 at 3:58pm

Update April 11, 2024 at 3:59pm

    ದೆಹಲಿ ಸರ್ಕಾರಕ್ಕೆ 100 ಕೋಟಿ ರೂಪಾಯಿಯ ಕಿಕ್‌ಬ್ಯಾಕ್ ಆರೋಪ

    ತಿಹಾರ್ ಜೈಲಿನಲ್ಲಿರುವ ಬಿಆರ್‌ಎಸ್‌ ನಾಯಕಿಗೆ ಬಿಗ್‌ಶಾಕ್ ಕೊಟ್ಟ CBI

    ಆರೋಪಿ ಬುಚ್ಚಿ ಬಾಬು ಜೊತೆ ವಾಟ್ಸ್‌ಆ್ಯಪ್‌ನಲ್ಲಿ ಸಿಕ್ಕ ಮಹತ್ವದ ಸಾಕ್ಷಿ!

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ಬಿಆರ್‌ಎಸ್ ನಾಯಕಿ, ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಮಗಳಿಗೆ ಸಂಕಷ್ಟ ಎದುರಾಗಿದೆ. ಜೈಲು ಪಾಲಾಗಿರುವ ಕೆ.ಕವಿತಾ ಅವರನ್ನು ಇಂದು ಸಿಬಿಐ ಬಂಧನ ಮಾಡಿದೆ.

ಕಳೆದ ಮಾರ್ಚ್‌ 15ರಂದು ಕೆ. ಕವಿತಾ ಅವರನ್ನ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ED (ಜಾರಿ ನಿರ್ದೇಶನಾಲಯ) ಹೈದರಾಬಾದ್‌ ನಿವಾಸದಿಂದ ಬಂಧಿಸಲಾಗಿತ್ತು. ಏಪ್ರಿಲ್‌ 23ರವರೆಗೂ ನ್ಯಾಯಾಂಗ ವಶದಲ್ಲಿದ್ದ ಕೆ. ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಕಳೆದ ಏಪ್ರಿಲ್ 6ರಂದು ಕೋರ್ಟ್‌ ಅನುಮತಿ ಪಡೆದ ಸಿಬಿಐ ಅಧಿಕಾರಿಗಳು ಜೈಲಿನಲ್ಲೇ ಕವಿತಾ ಅವರನ್ನು ವಿಚಾರಣೆ ನಡೆಸಿತ್ತು.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ 100 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಇದೀಗ ಸಿಬಿಐ ಕವಿತಾ ಅವರನ್ನು ತಿಹಾರ್‌ ಜೈಲಿನಲ್ಲೇ ಅರೆಸ್ಟ್ ಮಾಡಿದೆ. ಸಿಬಿಐ ವಿಚಾರಣೆ ಬಗ್ಗೆ ಮಾತನಾಡಿದ್ದ ಕವಿತಾ ಅವರು ಜೈಲಿನಲ್ಲಿ ತನ್ನ ಹೇಳಿಕೆಯನ್ನು ಪಡೆದಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಜೈಲಿನಲ್ಲೇ ನನ್ನ ಹೇಳಿಕೆ ಪಡೆದಿದ್ದರೂ ಬಂಧಿಸಿರೋದು ರಾಜಕೀಯ ದುರುದ್ದೇಶದಿಂದ ಎಂದು ಆರೋಪ ಮಾಡಿದ್ದಾರೆ.

ಬಿಆರ್‌ಎಸ್ ನಾಯಕಿ ಕವಿತಾ ಅವರು ಇದೇ ಪ್ರಕರಣ ಸಹ-ಆರೋಪಿ ಬುಚ್ಚಿ ಬಾಬು ಅವರ ಜೊತೆ ನಡೆಸಿರೋ ಫೋನ್ ಸಂಭಾಷಣೆ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳನ್ನು ತನಿಖಾ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಬಿಆರ್‌ಎಸ್‌ ನಾಯಕಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಂಚದಲ್ಲಿ ಭಾಗಿ ಎಂದ ಹೈಕೋರ್ಟ್‌; ಮಹತ್ವದ ಆದೇಶ

ದೆಹಲಿಯ ಸರ್ಕಾರ ಅಬಕಾರಿ ಲೈಸೆನ್ಸ್‌ಗಳಲ್ಲಿ ಕೆ.ಕವಿತಾ ಅವರ ಸೌಥ್ ಗ್ರೂಪ್‌ಗೆ ಪರವಾನಗಿ ನೀಡಿತ್ತು. ಈ ಲೈಸೆನ್ಸ್ ಪಡೆಯಲು ದೆಹಲಿ ಸರ್ಕಾರಕ್ಕೆ 100 ಕೋಟಿ ರೂಪಾಯಿಯ ಕಿಕ್‌ಬ್ಯಾಕ್ ನೀಡಿದೆ ಅನ್ನೋ ಆರೋಪ ಕೇಳಿ ಬಂದಿದೆ. ED ಅಧಿಕಾರಿಗಳ ವಿಚಾರಣೆ ಬಳಿಕ ಸಿಬಿಐ ಬಂಧಿಸಿರುವುದು ಬಿಆರ್‌ಎಸ್ ನಾಯಕಿ ಕವಿತಾ ಅವರಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸಿಬಿಐನಿಂದ ತಿಹಾರ್ ಜೈಲು ಹಕ್ಕಿ, ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಬಂಧನ

https://newsfirstlive.com/wp-content/uploads/2024/03/K-Kavitha.jpg

Load More