newsfirstkannada.com

ಭೀಕರ ರಸ್ತೆ ಅಪಘಾತ.. MLA ಲಾಸ್ಯ ನಂದಿತಾ ಸ್ಥಳದಲ್ಲೇ ಸಾವು

Share :

Published February 23, 2024 at 8:56am

Update February 23, 2024 at 1:55pm

  ಭೀಕರ ಅಪಘಾತದಲ್ಲಿ ಡ್ರೈವರ್ ಸ್ಥಿತಿ ಕೂಡ ಗಂಭೀರ ಆಸ್ಪತ್ರೆಗೆ ದಾಖಲು

  ಬೆಳಗ್ಗೆ 6.30ಕ್ಕೆ ಪತನ್ಚೇರು ಬಳಿಯ ಔಟರ್ ರಿಂಗ್​ ರೋಡ್​ನಲ್ಲಿ ಘಟನೆ

  ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿ

ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕಿ ಜಿ ಲಾಸ್ಯ ನಂದಿತಾ (37) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪತನ್ಚೇರು ಬಳಿಯ ಔಟರ್ ರಿಂಗ್​ ರೋಡ್​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.

ಇಂದು ಬೆಳಗ್ಗೆ 6.30ಕ್ಕೆ ದುರ್ಘಟನೆ ಸಂಭವಿಸಿದೆ. ನಂದಿತಾ ಅವರು ನಿವಾಸದಿಂದ ನಗರದ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಪೋರ್ಟ್ಸ್​ ಯುಟಿಲಿಟಿ ವೆಹಿಕಲ್ ಮಾರುತಿ XL6ನಲ್ಲಿ ನಂದಿತಾ ಪ್ರಯಾಣಿಸುತ್ತಿದ್ದರು. ನಿಯಂತ್ರಣ ಕಳೆದಕೊಂಡ ವಾಹನವು ಲೋಹದ ತಡೆಗೋಡೆಗೆ ಗುದ್ದಿದೆ. ಪರಿಣಾಮ ಅವರು ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಡ್ರೈವರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡ್ರೈವರ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ನಂದಿತಾ ಅವರು ಬಿಆರ್​​ಎಸ್ ಪಕ್ಷದ ಮಾಜಿ ಶಾಸಕ ಜಿ ಸಯಣ್ಣ ಅವರು ಮಗಳಾಗಿದ್ದರು. ಸೆಕುಂದರ್​ಬಾದ್​ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಜಿ ವೆಣ್ಣೆಲ್ಲರನ್ನು ಸೋಲಿಸಿ ಶಾಸಕರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ರಸ್ತೆ ಅಪಘಾತ.. MLA ಲಾಸ್ಯ ನಂದಿತಾ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/LASYA-NANDITA-2.jpg

Load More