/newsfirstlive-kannada/media/post_attachments/wp-content/uploads/2024/12/JOBS_50_YEARS.jpg)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನುರಿತ ಹಾಗೂ ಉದ್ಯೋಗದಲ್ಲಿ ಅನುಭವವುಳ್ಳ ಕಾನೂನು ತಜ್ಞರಿಂದ ಅರ್ಜಿ ಆಹ್ವಾನ ಮಾಡಿದೆ. ಬಿಬಿಎಂಪಿ 8 ಕ್ಷೇತ್ರಗಳಲ್ಲಿ ಈ ಉದ್ಯೋಗಗಳು ಖಾಲಿ ಇದ್ದು ಆಸಕ್ತರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಕೆಲಸಗಳಿಗೆ ಬೇಕಾದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಕಾಂಕ್ಷಿಗಳು ಎಲ್ಲವನ್ನು ಪರೀಕ್ಷಿಸಿ ಬಳಿಕ ಅಪ್ಲೇ ಮಾಡಬೇಕು.
ಕಾನೂನು ಅಧಿಕಾರಿ ಹುದ್ದೆಗಳನ್ನು (Law Officer Posts) ಬಿಬಿಎಂಪಿ ಭರ್ತಿ ಮಾಡುತ್ತಿದೆ. ಈ ಸಂಬಂಧ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇವುಗಳಿಗೆ ಆನ್ಲೈನ್ ಅಲ್ಲ, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅರ್ಜಿ.. ಯುವಕ, ಯುವತಿಯರಿಗೆ ಸುವರ್ಣಾವಕಾಶ
ಲಾ ಆಫೀಸರ್ ಕೆಲಸಗಳು ಒಟ್ಟು 8 ಇದ್ದು 65 ವರ್ಷದ ಒಳಗಿನ ಆಕಾಂಕ್ಷಿಗಳು ಹುದ್ದೆಗೆ ಅರ್ಹರು ಆಗಿರುತ್ತಾರೆ. ಇದು ಕೇವಲ 1 ವರ್ಷದ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಮಾಸಿಕ ವೇತನ ಶ್ರೇಣಿ 80 ಸಾವಿರ ರೂಪಾಯಿಗಳು ಆಗಿರುತ್ತವೆ. ಆಕಾಂಕ್ಷಿಗಳ ಬಯೋಡೇಟಾ, ಶೈಕ್ಷಣಿಕ ಅರ್ಹತೆ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಿವೃತ್ತಿ ಹೊಂದಿದ ದಾಖಲೆ ಸೇರಿ ಇತರೆ ದಾಖಲಾತಿಗಳನ್ನು ಅರ್ಜಿ ಜೊತೆ ಇರಬೇಕು. ಲಕೋಟೆ ಮೇಲೆ ವಲಯ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಎಂದು ಬರೆದು ಪೋಸ್ಟ್ ಮಾಡಬೇಕು. ಡಿಸೆಂಬರ್ 31ರ ಒಳಗಾಗಿ ಕಚೇರಿಗೆ ತಲುಪಬೇಕು.
ಪೋಸ್ಟ್ ವಿಳಾಸ:-
ಮಾನ್ಯ ಮುಖ್ಯ ಆಯುಕ್ತರು,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,
ಎನ್.ಆರ್ ಚೌಕ, ಬೆಂಗಳೂರು- 560 002
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ