newsfirstkannada.com

ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

Share :

Published June 1, 2024 at 6:08am

    ಮೊದಲ ಸ್ಥಾನ ಪಡೆದವರಿಗೆ ಎಷ್ಟು ಹಣ ಕೊಡಲಾಗುತ್ತದೆ ಗೊತ್ತಾ..?

    7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಬೃಹತ್​ ಸೋಮ

    ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಒಟ್ಟು 8 ಸ್ಪರ್ಧಿಗಳು ಫೈನಲ್‌ಗೆ ಬಂದಿದ್ದರು

ಆಗಾಗ ಭಾರತೀಯರ ಸಾಧನೆ ಇಡೀ ವಿಶ್ವದ ಗಮನ ಸೆಳೆಯುತ್ತಿರುತ್ತದೆ. ಸದ್ಯ ಇಂತಹದ್ದೆ ಒಂದು ಮಹತ್ತರವಾದ ಸಾಧನೆಯನ್ನು ಭಾರತೀಯ ಮೂಲದ ಅಮೆರಿಕದ 12 ವರ್ಷದ ಬಾಲಕನೋರ್ವ ಮಾಡಿದ್ದಾನೆ. ಸದ್ಯ ಪ್ರಪಂಚದ್ಯಾಂತ ಈ ಬಾಲಕ ಯಾರು ಎಂಬುದು ಹುಡುಕಾಟ ಶುರುವಾಗಿದೆ. ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಬೃಹತ್​ ಸೋಮ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾನೆ.

ಬೃಹತ್​ ಸೋಮನ ಪೋಷಕರು ಭಾರತದ ತೆಲಂಗಾಣ ಮೂಲದವರಾದರು ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ. 2024ರ ಸ್ಕ್ರಿಪ್ಸ್‌ ರಾಷ್ಟ್ರೀಯ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಒಟ್ಟು 8 ಸ್ಪರ್ಧಿಗಳು ಫೈನಲ್‌ಗೆ ಹೋಗಿದ್ದರು. ಇದರಲ್ಲಿ ಬೃಹತ್ ಸೋಮ ಕೂಡ ಒಬ್ಬರಾಗಿದ್ದರು. ಬೃಹತ್ ಸೋಮ ಕೇವಲ 90 ಸೆಕೆಂಡ್ಸ್​​ನಲ್ಲಿ 29 ಪದಗಳ ಸ್ಪೆಲಿಂಗ್‌ ಅನ್ನು ತಪ್ಪಾಗದಂತೆ ನಿಖರವಾಗಿ ಹೇಳಿದ್ದಾನೆ. ಸೋಮನ ಪ್ರತಿಸ್ಪರ್ಧಿ ಫೈಜನ್ ಝಾಕಿ 90 ಸೆಕೆಂಡ್ಸ್​​ನಲ್ಲಿ 20 ಪದಗಳಿಗಷ್ಟೇ ತಪ್ಪಿಲ್ಲದೇ ಹೇಳಿದ್ದಾನೆ. ಹೀಗಾಗಿ ಬೃಹತ್ ಸೋಮ ಮೊದಲ ಸ್ಥಾನವನ್ನು ಪಡೆದು ಸಂಭ್ರಮಿಸಿದರು.

ಇನ್ನು ಪ್ರಥಮ ಸ್ಥಾನ ಪಡೆದ ಬೃಹತ್ ಸೋಮನಿಗೆ ₹41,69,500 (50000 USD) ಬಹುಮಾನವಾಗಿ ಪ್ರಶಸ್ತಿಯೊಂದಿಗೆ ನೀಡಲಾಗಿದೆ. 2ನೇ ಸ್ಥಾನ ಗಳಿಸಿದ ಫೈಜನ್ ಝಾಕಿಗೆ ₹20,82,499 ಬಹುಮಾನದ ಜೊತೆಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಇಬ್ಬರು ಆಡುವಾಗ ಟೈ ಬ್ರೇಕರ್ ಹಂತ ತಲುಪಿದ್ದ ಹಿನ್ನೆಲೆಯಲ್ಲಿ ಪಂದ್ಯ ರೋಚಕ ಹಂತ ತಲುಪಿ ಕೊನೆಗೆ ಬೃಹತ್ ಸೋಮ ಗೆಲುವಿನ ನಗಾರಿ ಬಾರಿಸಿದನು. 2024ರ ಸ್ಕ್ರಿಪ್ಸ್‌ ರಾಷ್ಟ್ರೀಯ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಒಟ್ಟು 8 ಸ್ಪರ್ಧಿಗಳು ಫೈನಲ್‌ಗೆ ಬಂದಿದ್ದರು. ಇದರಲ್ಲಿ 5 ಜನ ಭಾರತೀಯ ಮೂಲದ ಅಮೆರಿಕ ನಿವಾಸಿಗಳು ಎನ್ನುವುದು ವಿಶೇಷವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

https://newsfirstlive.com/wp-content/uploads/2024/05/BRUHAT_SOMA.jpg

Load More