ರಕ್ತ ಬರುವಂತೆ ಬಿಗ್​ಬಾಸ್​ ಸ್ಪರ್ಧಿ ಲಾಯರ್​​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ

author-image
Ganesh Nachikethu
Updated On
ಎಲ್ಲೆಲ್ಲೂ ಲಾಯರ್ ಜಗದೀಶ್ ಬಗ್ಗೆ ಮಾತುಕಥೆ; ಕಿಚ್ಚನ ಪಂಚಾಯ್ತಿಯಲ್ಲಿ ಕಾದಿದ್ಯಾ ಮಾರಿಹಬ್ಬ
Advertisment
  • ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಿರೋ ಲಾಯರ್​ ಜಗದೀಶ್
  • ಲಾಯರ್​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಅನ್ನೋ ಮಾಹಿತಿ
  • ಮೂಗಲ್ಲಿ ರಕ್ತ ಬರುವಂತೆ ಲಾಯರ್ ಜಗದೀಶ್​ ಮೇಲೆ ಹಲ್ಲೆ ನಡೆಸಲಾಗಿದೆ

ಬೆಂಗಳೂರು: ಇತ್ತೀಚೆಗೆ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಿರೋ ಲಾಯರ್​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಅಣ್ಣಮ್ಮ ಕೂರಿಸಿ ರಸ್ತೆ ಬ್ಲಾಕ್ ಮಾಡಿದ್ದನ್ನು ಲಾಯರ್​​ ಜಗದೀಶ್​ ಪ್ರಶ್ನಿಸಿದ್ದರು. ಹೀಗಾಗಿ ಇವರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಬೆನ್ನಲ್ಲೀಗ ಮತ್ತೆ ಕಿಡಿಗೇಡಿಗಳು ಲಾಯರ್ ಜಗದೀಶ್​ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.

ಲಾಯರ್​ ಜಗದೀಶ್​ ಅವರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಜಗದೀಶ್ ಮುಖದಲ್ಲಿ ರಕ್ತ ಸುರಿಯುತ್ತಿದ್ದು, ಕಿಡಿಗೇಡಿಗಳ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

publive-image

ಬೆಳಗ್ಗೆಯಷ್ಟೇ ಲೈವ್​ ಬಂದು ದರ್ಶನ್ ಫ್ಯಾನ್ಸ್​ಗೆ ಲಾಯರ್​ ಜಗದೀಶ್ ವಾರ್ನಿಂಗ್ ಕೊಟ್ಟಿದ್ರು. ಸಂಜೆ ವೇಳೆಗೆ ಜಗದೀಶ್ ಮೇಲೆ ಕೆಲ ಪುಂಡರು ಅಟ್ಯಾಕ್ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ ಜಗದೀಶ್​, ಲಾಂಗು, ದೊಣ್ಣೆಯಿಂದ ಹೊಡೆದಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:BBK11: ರಜತ್​ಗಾಗಿ ಬಿಗ್​ಬಾಸ್​ ಮನೆಗೆ ಬಂತು ಭರ್ಜರಿ ಗಿಫ್ಟ್​; ಕಿಚ್ಚ ಸುದೀಪ್​ಗೆ ಧನ್ಯವಾದ ಹೇಳಿದ್ದೇಕೆ? ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment