/newsfirstlive-kannada/media/post_attachments/wp-content/uploads/2025/01/Morrocco-1.jpg)
ಶ್ವಾನಗಳು ರಕ್ತದ ಮಡುವಿನಲ್ಲಿ ಬಿದ್ದಿರುತ್ತವೆ, ವಿಷವುಂಡು ಸಹಿಸಲಾರದ ಸಂಕಟದಲ್ಲಿ ಬೀದಿಯಲ್ಲಿ ನರಳಾಡುತ್ತಿರುತ್ತವೆ. ಹೀಗೆ ಅಸಹಾಯಕವಾಗಿ ಬಿದ್ದುಕೊಂಡಿರುವ ಶ್ವಾನಗಳನ್ನು ಟ್ರಕ್ಗಳಲ್ಲಿ ಹೇರಿಕೊಂಡು ಹೋಗಿ ಎಲ್ಲಿಯೋ ಎಸೆದು ಬರಲಾಗುತ್ತದೆ. ಈ ರೀತಿಯ ಹೃದಯ ಹಿಂಡುವ ದೃಶ್ಯಗಳು ಮೊರಾಕೊದ ಬೀದಿ ಬೀದಿಗಳಲ್ಲಿ ಸದ್ಯದಲ್ಲಿಯೇ ಕಾಣಸಿಗುತ್ತಿವೆ. ಇದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ.
ಉತ್ತರ ಆಫ್ರಿಕಾದ ಈ ದೇಶ ಸದ್ಯ ಜಗತ್ತಿನ ಗಮನವನ್ನು ಸೆಳೆದಿದೆ.
ಯಾವಾಗ ಈ ದೇಶ 2030ರ ಫಿಫಾ ವಿಶ್ವಕಪ್ನ್ನು ಸ್ಪೇನ್ ಹಾಗೂ ಪೋರ್ಚಗಲ್ ಜೊತೆಗೆ ತಾನೂ ಆತಿಥ್ಯವಹಿಸುವುದಾಗಿ ಘೋಷಿಸಿಕೊಂಡಿತೊ ಅಂದಿನಿಂದ ಇಂತಹದೊಂದು ದುಷ್ಕೃತ್ಯಕ್ಕೆ ಕೈಹಾಕಿದೆ. ಮೊರಾಕೊದ ಬೀದಿಯನ್ನು ಶ್ವಾನಗಳ ರಹಿತವನ್ನಾಗಿ ಮಾಡುವ ಉದ್ದೇಶದಿಂದ ನಿತ್ಯವೂ ಸಾವಿರಾರು ನಾಯಿಗಳನ್ನು ಸಾಯಿಬಡಿಯಲಾಗುತ್ತಿದೆ. ಇದನ್ನು ಕಂಡು ವಿಶ್ವವೇ ಬೆಚ್ಚಿ ಬಿದ್ದಿದ್ದು ಅಷ್ಟೇ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದೆ.
ಇದನ್ನೂ ಓದಿ:ಗರ್ಭ ಧರಿಸಿದ ಹಸುವಿನ ತಲೆ ಕಡಿದು ವಿಕೃತಿ.. ರಾಜ್ಯದಲ್ಲಿ ಮತ್ತೊಂದು ಗೋಮಾತೆ ಮೇಲೆ ದೌರ್ಜನ್ಯ
ಸಾಕು ಪ್ರಾಣಿಗಳ ಸಂರಕ್ಷಣಾವಾದಿ ಜನೆ ಗೂಡಾಲ್ ಕೂಡ ಈ ಬಗ್ಗೆ ಬೇಸರವ್ಯಕ್ತಪಡಿಸಿದ್ದು. ಮೊರಾಕೊ 30 ಲಕ್ಷ ಶ್ವಾನಗಳನ್ನು ಹತ್ಯೆ ಮಾಡುವ ನಿರರ್ಧಾರ ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ. ಬಹುನಿರೀಕ್ಷಿತ ಫಿಫಾ ವಿಶ್ವಕಪ್ ಪಂದ್ಯಾವಳಿಗೋಸ್ಕರ ಮೊರಾಕೊ ಒಟ್ಟು 30 ಲಕ್ಷ ಶ್ವಾನಗಳನ್ನು ಸರ್ವನಾಶ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ.
ಇನ್ನು ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ಮತ್ತು ರಕ್ಷಣಾ ಒಕ್ಕೂಟವು ಕೂಡ ಮೊರಾಕೊದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಮೊರಾಕೊ ವಿರುದ್ಧ ಈಗಾಗಲೇ ಮೊರಾಕೊ ಕೊಳಕು ಗೌಪ್ಯ ಎಂಬ ಕ್ಯಾಂಪೇನ್ ಶೂರು ಮಾಡಿದೆ. ಈ ಒಂದು ಒಕ್ಕೂಟ ಹೇಳುವ ಪ್ರಕಾರ ಮೊರಾಕೊದಲ್ಲಿ ಬೀದಿ ನಾಯಿಗಳಿವೆ ವಿಷವನ್ನು ಉಣಿಸಲಾಗುತ್ತಿದೆ. ನೇರವಾಗಿ ಇಂಜೆಕ್ಷನ್ ಕೊಟ್ಟು ಅವುಗಳನ್ನು ವಿಲವಿಲವೆನಿಸಿ ಕೊಲ್ಲಲಾಗುತ್ತಿದೆ. ಗನ್ನಿಂದ ಶೂಟ್ ಮಾಡಿ ಕೊಲ್ಲಲಾಗುತ್ತಿದೆ. ಅವುಗಳನ್ನು ಟ್ರಕ್ನಲ್ಲಿ ತುಂಬಿಕೊಂಡು ಹೋಗಿ ಊರಾಚೆ ಎಸೆದು ಬರಲಾಗುತ್ತಿದೆ. ಇದೊಂದು ನಿಜಕ್ಕೂ ಅಮಾನವೀಯತೆಯ ಪರಮಾವಧಿ ಎಂದು ಐಎಡಬ್ಲ್ಯೂಪಿಸಿ ಹೇಳಿದೆ.
ಇದನ್ನೂ ಓದಿ:ಮುಂದಿನ ತಿಂಗಳು ಮದುವೆ ನಿಶ್ಚಯ.. ರಸ್ತೆ ಅಪಘಾತದಲ್ಲಿ ಕಣ್ಮುಚ್ಚಿದ ನರೇಗಾ ಇಂಜಿನಿಯರ್
ಸದ್ಯ ಮೊರಾಕೊದ ಸಿಟಿಗಳ ಬೀದಿ ಬೀದಿಯಲ್ಲಿ ಗನ್ ಮ್ಯಾನ್ಗಳು ಅಲೆದಾಡುತ್ತಿದ್ದಾರೆ. ಬೀದಿ ನಾಯಿಗಳು ಕಂಡರೆ ಅವುಗಳಿಗೆ ಗುರಿಯಿಟ್ಟು ಹೊಡೆಯುತ್ತಿದ್ದಾರೆ. ಕೆಲವೊಂದು ನಾಯಿಗಳಿಗೆ ಇಂಜೆಕ್ಷನ್ ನೀಡುವ ಮೂಲಕ ಮತ್ತು ವಿಷವುಣಿಸುವ ಮೂಲಕ ಅವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಒಟ್ಟು 30 ಲಕ್ಷ ಶ್ವಾನಗಳ ಮಾರಣ ಹೋಮಕ್ಕೆ ಮೊರಾಕೊ ಸರ್ಕಾರ ಸಿದ್ಧವಾಗಿದ್ದು. 2030ರ ವೇಳೆಗೆ ಬೀದಿ ಶ್ವಾನಗಳ ರಹಿತ ಮೊರಾಕೊ ಮಾಡಲು ಸಿದ್ಧತೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ