/newsfirstlive-kannada/media/post_attachments/wp-content/uploads/2025/01/IND-vs-ENG.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡ ಈಗಾಗಲೇ ಸೆಮಿಫೈನಲ್ಗೆ ಎಂಟ್ರಿ ಆಗಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ವಿರುದ್ಧ ಸೋತಿರೋ ಇಂಗ್ಲೆಂಡ್ ತಂಡ ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಮುಂದಿನ 2 ಪಂದ್ಯಗಳು ಗೆಲ್ಲಲೇಬೇಕಿದೆ. ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಹೇಗೆ ಸೋಲಿಸಬೇಕು ಎಂದು ಪ್ಲಾನ್ ಮಾಡುತ್ತಿರೋ ಹೊತ್ತಲ್ಲೇ ಇಂಗ್ಲೆಂಡ್ ಶಾಕಿಂಗ್ ನ್ಯೂಸ್ ಒಂದಿದೆ.
ಇಂಗ್ಲೆಂಡ್ ತಂಡದ ಸ್ಟಾರ್ ವೇಗಿ ಬ್ರೈಡನ್ ಕಾರ್ಸ್. ಇವರು ಕಾಲು ಬೆರಳಿಗೆ ತೀವ್ರ ಗಾಯ ಆಗಿದೆ. ಸದ್ಯ ಬ್ರೈಡನ್ ಕಾರ್ಸ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಔಟ್ ಆಗಿದ್ದಾರೆ. ಇವರ ಸ್ಥಾನಕ್ಕೆ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಸಿಬಿ ಹೇಳಿದ್ದೇನು?
ಇನ್ನು, ಈ ಬಗ್ಗೆ ಸ್ಪಷ್ಟನೆ ನೀಡಿರೋ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬೌಲಿಂಗ್ ಆಲ್‌ರೌಂಡರ್ ಬ್ರೈಡನ್ ಕಾರ್ಸ್ ಎಡಗಾಲಿನ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದಿದೆ.
ಅಸಲಿಗೆ ಆಗಿದ್ದೇನು?
ಶನಿವಾರ ಲಾಹೋರ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮಧ್ಯೆ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯ ನಡೆಯಿತು. ಪಂದ್ಯದ ವೇಳೆ ಕಾರ್ಸ್ ಗಾಯಗೊಂಡಿದ್ದರು. ಕಾಲ್ಬೆರಳಿನ ಗಾಯದಿಂದಾಗಿ ಇವರು ಇಂಗ್ಲೆಂಡ್‌ನ ತರಬೇತಿ ಅವಧಿಗೆ ಸೇರಲು ಆಗಿರಲಿಲ್ಲ.
ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಿತ್ತು. ಆಗಲೇ ಕಾರ್ಸೆ ಕಾಲ್ಬೆರಳಿನ ಗುಳ್ಳೆಯ ರೂಪದಲ್ಲಿ ಗಾಯದ ಸಮಸ್ಯೆ ಎದುರಾಗಿತ್ತು. ಇದಕ್ಕಾಗಿ ಹೊಲಿಗೆ ಕೂಡ ಹಾಕಲಾಗಿತ್ತು. ಗಾಯದ ತೀವ್ರತೆ ಹೆಚ್ಚಾದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ತಂಡ ಹೀಗಿದೆ!
ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್, ರೆಹಾನ್ ಅಹ್ಮದ್.
ಇದನ್ನೂ ಓದಿ:ಕೂಲ್ ಡ್ರಿಂಕ್ಸ್ ಕುಡಿಯೋರಿಗೆ ಬಿಗ್ ಶಾಕ್; ಕ್ಯಾನ್ಸರ್ ಎಚ್ಚರಿಕೆ ಕೊಟ್ಟ WHO; ಓದಲೇಬೇಕಾದ ಸ್ಟೋರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ