newsfirstkannada.com

ಗೌಡ್ರ ಕುಟುಂಬವನ್ನೇ ಟಾರ್ಗೆಟ್​ ಮಾಡುತ್ತಿದ್ದ ಬಿಜೆಪಿ ನಾಯಕ; ಪ್ರೀತಮ್​ ಗೌಡಗೆ BSY ಫುಲ್​​ ಕ್ಲಾಸ್​..​!

Share :

Published March 26, 2024 at 6:25am

    ಕೇಸರಿ ನಾಯಕರಿಗೆ ಬಂಡಾಯಗಾರರದ್ದೇ ತಲೆ ನೋವು

    ಯುದ್ಧ ಶಸ್ತ್ರಾಭ್ಯಾಸ ಬಿಟ್ಟು ಬಂಡಾಯ ಶಮನಕ್ಕೆ ಒದ್ದಾಟ

    ‘ಹಾಸನದಲ್ಲಿ ಅಭ್ಯರ್ಥಿ ಗೆಲ್ಲಿಸೋದಕ್ಕೆ ಬೆಂಬಲ ಕೊಡು’

ಲೋಕಸಭೆ ಸಮೀಪಿಸುತ್ತಿದ್ರೂ ಬಿಜೆಪಿ ನಾಯಕರಿಗೆ ಈ ಬಂಡಾಯಗಾರರದ್ದೇ ದೊಡ್ಡ ತಲೆ ನೋವಾಗಿದೆ. ರಣರಂಗದಲ್ಲಿ ವಿರೋಧಿಗಳನ್ನು ಸೋಲಿಸಲು ತಂತ್ರ ಹೆಣೆಯಬೇಕಾದವರು ತಮ್ಮೊಳಗಿನ ಬಂಡಾಯಗಾರರ ಶಮನ ಬಗೆಹರಿಸಲು ಒದ್ದಾಡುತ್ತಿದ್ದಾರೆ. ಅದರಲ್ಲೂ ಹಾಸನದಲ್ಲಿ ಪ್ರೀತಂ ಗೌಡ ವಿರುದ್ಧ ಬಿಎಸ್​ವೈ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪ್ರೀತಂ ಗೌಡಗೆ ಕ್ಲಾಸ್​ ಜೊತೆಗೆ ಕಿವಿಮಾತು ಹೇಳಿದ ಬಿಎಸ್​ವೈ

ಮೈತ್ರಿಯಾದ ಬೆನ್ನಲ್ಲೇ ಹಾಸನ ಕ್ಷೇತ್ರವನ್ನ ಬಿಜೆಪಿ ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಆದ್ರೆ ಕಳೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರೀತಂ ಗೌಡರನ್ನ ಕಿತ್ತು ಹಾಕಿ ಸ್ವರೂಪ್ ಗೆಲ್ಲಿಸಿ ಅಂತ ದೇವೇಗೌಡರು ಹೇಳಿದ್ದರು. ಮಾತ್ರವಲ್ಲದೆ ಪಣ ತೊಟ್ಟು ತನ್ನನ್ನು ಸೋಲಿಸಿದ್ದಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ದೇವೇಗೌಡರ ಕುಟುಂಬದ ವಿರುದ್ಧ ನಿಗಿ ನಿಗಿಯಾಗಿದ್ದಾರೆ. ನಮ್ಮ ಬೆಂಬಲ ಬೇಕಾದ್ರೆ ಇಡೀ ಕುಟುಂಬದ ಸದಸ್ಯರು ಮನೆಗೆ ಬಂದು ತಮ್ಮ ಬೆಂಬಲ ಕೋರಲಿ ಅಂತ ಪಟ್ಟು ಹಿಡಿದಿದ್ದಾರೆ. ಈ ನಡುವೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಪ್ರೀತಂ ಗೌಡಗೆ ಕರೆ ಮಾಡಿ ಕಿವಿಮಾತಿನ ಜೊತೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಪ್ರೀತಂ ಗೌಡ ಆಪ್ತ ಕಿರಣ್ ಕುಮಾರ್ ಸ್ಪರ್ಧೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಗರಂ ಆಗಿದ್ದಾರೆ. ಪ್ರಧಾನಿ ಮೋದಿ 3 ನೇ ಬಾರಿ ಪ್ರಧಾನಿ ಆಗಬೇಕು, ಅಮಿತ್​ ಶಾ, ಮೋದಿಯವರೇ ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಹಾಸನದಲ್ಲಿ ಎನ್​ಡಿಎ ಅಭ್ಯರ್ಥಿಯನ್ನ ಗೆಲ್ಲಿಸೋದಕ್ಕೆ ಬೆಂಬಲ ಕೊಡು ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾಜಾ ಅಮರೇಶ್ವರ ನಾಯಕ್​ರನ್ನು ಕತ್ತೆಗೆ ಹೋಲಿಸಿದ ಬಿವಿ ನಾಯಕ್

ಇನ್ನು, ರಾಯಚೂರು ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಸಂಸದ ಬಿ.ವಿ ನಾಯಕ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಟಿಕೆಟ್ ಕೊಡುತ್ತೇನೆ ಎಂದು ಆಸೆ ತೋರಿಸಿದ್ದಾರೆ. ಆದ್ರೆ ಹಿತಶತ್ರುಗಳ ಷಡ್ಯಂತ್ರದಿಂದ ಟಿಕೆಟ್ ಕೈ ತಪ್ಪಿದೆ. ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ. ಯಾರ ಪರ ವಿರೋಧವೂ ಕೆಲಸ ಮಾಡಲ್ಲ ಎಂದಿದ್ದಾರೆ. ಮಾತ್ರವಲ್ಲದೆ ಇಂದಿರಾ ಗಾಂಧಿ ಕಾಲದಲ್ಲಿ ಕತ್ತೆ ಬಿ‌ಫಾರಂ ತಗೊಂಡ್ರು ಗೆಲ್ತಿತ್ತು. ಸದ್ಯ ಮೋದಿ ಅಲ್ಲೆಯಲ್ಲೂ ಇದೇ ರೀತಿ ವಾತಾವರಣ ಇದೆ ಅಂತ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ರನ್ನು ಕತ್ತೆಗೆ ಹೋಲಿಸಿದ್ದಾರೆ.

ಇದನ್ನೂ ಓದಿ: ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?

ಬಿಎಸ್​ವೈ ಸಂಗಣ್ಣ ಕರಡಿ ಮನವೊಲಿಕೆ ಸರ್ಕಸ್

ಬಿಜೆಪಿ ಟಿಕೆಟ್ ಮಿಸ್ ಹಿನ್ನೆಲೆ ಸಂಗಣ್ಣ ಕರಡಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ನಿನ್ನೆ ಬೆಂಗಳೂರಿನ‌ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಸಂಗಣ್ಣ ಜೊತೆ ಸಂಧಾನ ಸಭೆ ನಡೆಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅರವಿಂದ್ ಬೆಲ್ಲದ್ ಸಂಗಣ್ಣ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೊಪ್ಪಳ ಅಂದ್ರೆ ಕರಡಿ ಸಂಗಣ್ಣ, ಸಂಗಣ್ಣ ಅಂದ್ರೆ ಕೊಪ್ಪಳ. ನನ್ನನ್ನು ಬಿಟ್ಟು ಹೊಸಬರನ್ನು ಅದೇಗೆ ಗೆಲ್ಲಿಸಿಕೊಂಡು ಬರ್ತಿರಿ ಅಂತ ಸಂಗಣ್ಣ ಗರಂ ಆಗಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಸಂಗಣ್ಣ ಕರಡಿ

ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸಂಸದ ಕರಡಿ ಸಂಗಣ್ಣ, ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕರಡಿ ಸಂಗಣ್ಣ, ಜೆಡಿಎಸ್​​ ಸೇರ್ಪಡೆ ವಿಚಾರ ನನ್ನ ಮುಂದಿಲ್ಲ ಅಂತ ಸ್ಪಷ್ಟನೆ ಕೊಟ್ರು. ಅಲ್ಲದೆ ಮತ್ತೊಂದ್ಕಡೆ ಆರ್​ಟಿ‌ ನಗರದ ಮಾಜಿ ಸಿಎಂ ಬೊಮ್ಮಾಯಿ ನಿವಾಸಕ್ಕೂ ಬೆಂಬಲಿಗರ ಜೊತೆ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರೆ. ಒಟ್ಟಾರೆ ಬಿಜೆಪಿ ನಾಯಕರು ಯುದ್ಧಕ್ಕೆ ಶಸ್ತ್ರಾಭ್ಯಾಸ ಮಾಡಬೇಕಾದ ಸಮಯದಲ್ಲಿ ತಮ್ಮ ನಾಯಕರ ಸಿಟ್ಟು-ಸೆಡವನ್ನು ಶಮನಗೊಳಿಸಲು ಹರಸಾಹಸ ಪಡ್ತಿದ್ದಾರೆ. ಈ ಮನವೊಲಿಕೆ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌಡ್ರ ಕುಟುಂಬವನ್ನೇ ಟಾರ್ಗೆಟ್​ ಮಾಡುತ್ತಿದ್ದ ಬಿಜೆಪಿ ನಾಯಕ; ಪ್ರೀತಮ್​ ಗೌಡಗೆ BSY ಫುಲ್​​ ಕ್ಲಾಸ್​..​!

https://newsfirstlive.com/wp-content/uploads/2024/03/pritam.jpg

Load More