newsfirstkannada.com

ಪಾಕ್​ನಿಂದ ಭಾರತಕ್ಕೆ ನುಸುಳಿದ್ದ ವ್ಯಕ್ತಿ ಅರೆಸ್ಟ್; ಬಿಎಸ್​ಎಫ್​ಗೆ ಸ್ಫೋಟಕ ಮಾಹಿತಿ ಸಿಕ್ಕಿದ್ಯಾ?

Share :

Published February 17, 2024 at 8:23am

  ಗಡಿಯಲ್ಲಿ ನಿಲ್ಲದ ಪಾಕಿಸ್ತಾನಿಯರ ಒಳನುಸುಳುವಿಕೆ

  ಬಿಎಸ್​ಎಫ್​ನಿಂದ ಪಂಜಾಬ್ ಪೊಲೀಸರಿಗೆ ಆರೋಪಿ ಹಸ್ತಾಂತರ

  ತೀವ್ರ ತನಿಖೆಗೆ ಒಳಪಡಿಸಿರುವ ಪಂಜಾಬ್ ಪೊಲೀಸರು

ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನಿಗಳ ಒಳನುಸುಳುವಿಕೆ ಮುಂದುವರಿದಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಠಾಕೂರ್‌ಪುರ ಗ್ರಾಮದಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ ಬಂಧಿಸಿದೆ.

ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಭೂ-ಪ್ರದೇಶ ಪ್ರವೇಶ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನಿ ಪ್ರಜೆಯು ಅರಿವಿಲ್ಲದೆ ಭಾರತವನ್ನು ಪ್ರವೇಶಿಸಿದ್ದಾನೆ ಮತ್ತು ಅವನಿಂದ ಯಾವುದೇ ಪಿತೂರಿ, ಸಂಚು ಸೇರಿದಂತೆ ಯಾವುದೇ ಆಕ್ಷೇಪಾರ್ಹ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಹೆಚ್ಚಿನ ತನಿಖೆಗಾಗಿ ಬಿಎಸ್ಎಫ್ ಪಡೆ ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಿದೆ.

ಫೆಬ್ರವರಿ 6 ರಂದು ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಕ್ರಮ ನುಸುಳುಕೋರರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಂಜಾಬ್‌ನ ಘಜ್ನಿವಾಲಾ ಗ್ರಾಮದಿಂದ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನಿ ಪ್ರಜೆಯನ್ನು ಬಿಎಸ್‌ಎಫ್ ಹಿಡಿದಿತ್ತು. BSF ಸಿಬ್ಬಂದಿ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿ ತರಾಟೆ ತೆಗೆದುಕೊಂಡಿತ್ತು. ಬಂಧಿತ ಪಾಕಿಸ್ತಾನಿ ಪ್ರಜೆಯನ್ನು ನಂತರ ಮಾನವೀಯ ಆಧಾರದ ಮೇಲೆ ಪಾಕಿಸ್ತಾನಕ್ಕೆ ಒಪ್ಪಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​ನಿಂದ ಭಾರತಕ್ಕೆ ನುಸುಳಿದ್ದ ವ್ಯಕ್ತಿ ಅರೆಸ್ಟ್; ಬಿಎಸ್​ಎಫ್​ಗೆ ಸ್ಫೋಟಕ ಮಾಹಿತಿ ಸಿಕ್ಕಿದ್ಯಾ?

https://newsfirstlive.com/wp-content/uploads/2024/02/PAK-5.jpg

Load More