/newsfirstlive-kannada/media/post_attachments/wp-content/uploads/2024/11/JOBS_SSLC.jpg)
ಸ್ಪೋರ್ಟ್ಸ್ ಕೋಟಾದಡಿ ಖಾಲಿ ಇರುವಂತ ಹುದ್ದೆಗಳನ್ನು ನೇಮಕ ಮಾಡಲು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) ಅಧಿಕೃತವಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಭಾರತದ ಪ್ರಧಾನ ಅರೆಸೇನಾ ಪಡೆಗಳಲ್ಲಿ ಒಂದಾಗಿರುವ ಈ ಬಿಎಸ್ಎಫ್ಗೆ ಸೇರಲು ಪ್ರತಿಭಾವಂತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಆಸಕ್ತರು ಈ ಕೆಲಸಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಇದಕ್ಕೆ ಅವಕಾಶ ಇಲ್ಲ. ಕೇವಲ ಸ್ಪೋರ್ಟ್ಸ್ನಲ್ಲಿ ಪ್ರಾವೀಣ್ಯತೆ ಹೊಂದಿರುವ ಸ್ಪರ್ಧಿಗಳಿಗೆ ಇದು ಗೋಲ್ಡನ್ ಚಾನ್ಸ್ ಆಗಿದೆ. ಅರ್ಹ ಎನಿಸಿರುವ ಅಭ್ಯರ್ಥಿಗಳು ಬಿಎಸ್ಎಫ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಇನ್ನುಳಿದಂತೆ ಈ ಉದ್ಯೋಗಗಳಿಗೆ ಬೇಕಾದ ಅರ್ಹತೆ, ಶುಲ್ಕ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಎಷ್ಟು ಉದ್ಯೋಗಗಳು ಎನ್ನುವ ಎಲ್ಲ ಮಾಹಿತಿ ಇಲ್ಲಿದೆ. ಹೀಗಾಗಿ ಅಭ್ಯರ್ಥಿಗಳು ಇದನ್ನು ಗಮನವಿಟ್ಟು ಓದಿಕೊಳ್ಳಬೇಕು.
ವಿದ್ಯಾರ್ಹತೆ ಏನು ಕೇಳಿದ್ದಾರೆ?
10ನೇ ತರಗತಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಇದಕ್ಕೆ ಸಮವಾದ ವಿದ್ಯಾರ್ಹತೆ
ಕಳೆದ ಎರಡು ವರ್ಷಗಳಲ್ಲಿ ಅಂತರಾಷ್ಟ್ರೀಯ ಅಥವಾ ರಾಷ್ಟ್ರೀಯ ಸ್ಪೋರ್ಟ್ಸ್ ಇವೆಂಟ್ಗಳಲ್ಲಿ ಅಭ್ಯರ್ಥಿಗಳು ಭಾಗವಹಿಸಿರಬೇಕು ಅಥವಾ ಪದಕಗಳನ್ನು ಗೆದ್ದಿರಬೇಕು.
ಇದನ್ನೂ ಓದಿ:SSLC, PUC ಆದವರಿಗೆ ಯುಸಿಐಎಲ್ನಲ್ಲಿ ಉದ್ಯೋಗ ಅವಕಾಶ.. ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ
ಉದ್ಯೋಗದ ಹೆಸರು- ಕಾನ್ಸ್ಟೆಬಲ್ (ಸಾಮಾನ್ಯ ಕರ್ತವ್ಯ)
ಒಟ್ಟು ಕೆಲಸಗಳು- 275
ವಯಸ್ಸಿನ ಮಿತಿ
18 ರಿಂದ 23
ವಯೋಮಿತಿ ಸಡಿಲಿಕೆ
ಎಸ್ಸಿ ಎಸ್ಟಿ- 5 ವರ್ಷಗಳು
ಒಬಿಸಿ ಅಭ್ಯರ್ಥಿಗಳು–3 ವರ್ಷಗಳು
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ
ಜನರಲ್, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 147 ರೂಪಾಯಿ
ಇಂಪಾರ್ಟೆಂಟ್ ದಿನಾಂಕ
ನೋಟಿಫಿಕೇಶನ್ ರಿಲೀಸ್ ದಿನಾಂಕ- 21 ನವೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 01 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನ- 31 ಡಿಸೆಂಬರ್ 2024
ಆಯ್ಕೆ ಪ್ರಕ್ರಿಯೆ:
- ದಾಖಲೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ
- ದೈಹಿಕ ದಕ್ಷತೆಯ ಪರೀಕ್ಷೆ (ಪಿಇಟಿ)
- ವೈದ್ಯಕೀಯ ಪರೀಕ್ಷೆ
- ಕ್ರೀಡಾ ಕಾರ್ಯಕ್ಷಮತೆಯ ಮೌಲ್ಯಮಾಪನ
- ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಹೋಮ್ ಪೇಜ್ ಓಪನ್ ಆದ ಮೇಲೆ ನೇಮಕಾತಿ ವಿಭಾಗವನ್ನ ಕ್ಲಿಕ್ ಮಾಡಬೇಕು. ಬಳಿಕ ಸ್ವವಿವರ ನಮೂದಿಸಿ ಅಪ್ಲೇ ಲಿಂಕ್ ಅನ್ನು ಕ್ಲಿನ್ ಮಾಡಬೇಕು. ಬೇಕಾದ ಎಲ್ಲ ಮಾಹಿತಿ ಸಂಪೂರ್ಣವಾಗಿ ಭರ್ತಿ ಮಾಡಬೇಕು. ನಂತರ ಸಬ್ಮೀಟ್ ಮಾಡಬೇಕು. ಪ್ರಿಂಟ್ಔಟ್ ಅನ್ನು ತೆಗೆದುಕೊಂಡಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ