/newsfirstlive-kannada/media/post_attachments/wp-content/uploads/2024/07/BSNL-1.jpg)
ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು ತಮ್ಮ ದಿಕ್ಕನ್ನು ಬಿಎಸ್​ಎನ್​ಎಲ್​ನತ್ತ ನೆಟ್ಟಿದ್ದಾರೆ. ಜಿಯೋ, ವೊಡಾಫೋನ್​ ಐಡಿಯಾ, ಏರ್​ಟೆಲ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯನತ್ತ ಮುಖ ಮಾಡಿದ್ದಾರೆ.
ಖಾಸಗಿ ಕಂಪನಿಗಳ ಯೋಜನೆಗಳು ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್​​ಎನ್​ಎಲ್​​ನ ಬೆಲೆ ಹೋಲಿಕೆ ಮಾಡಿಕೊಂಡು ಬೆಸ್ಟ್​ ಪ್ಲಾನ್​ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಇದೀಗ ಬಿಎಸ್​​ಎನ್​​ಎಲ್​ ಪ್ರಿಪೇಯ್ಡ್​ ಪ್ಲಾನ್​ವೊಂದರ ಜನಪ್ರಿಯತೆಗೆ ಕಾರಣವಾಗಿದ್ದು, ಅನೇಕರು ಅದರ ಮೊರೆ ಹೋಗುತ್ತಿದ್ದಾರೆ.
ಬಿಎಸ್​​ಎನ್​​ಎಲ್​ 666 ರೂಪಾಯಿಯ ಪ್ರಿಪೇಯ್ಡ್​​ ಪ್ಲಾನ್​​ ಸದ್ಯ ಸಖತ್​ ಫೇಮಸ್​​ ಆಗುತ್ತಿದೆ. ಪ್ರತಿದಿನ 2ಜಿಬಿ ಡೇಟಾ ಜೊತೆಗೆ ದೀರ್ಘಾವದಿಯ ವ್ಯಾಲಿಡಿಟಿಯನ್ನು ಈ ಪ್ಲಾನ್​ ಹೊಂದಿದೆ.
666 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​​ ಅನ್​ಲಿಮಿಟೆಡ್​​ ಕರೆ, ಡೇಟಾ, ಎಸ್​ಎಮ್​ಎಸ್​ ಅನ್ನು ಉಚಿತವಾಗಿ ನೀಡುತ್ತಿದೆ. 105 ದಿನಗಳ ವ್ಯಾಲಿಟಿಡಿಯನ್ನು ಈ ಪ್ಲಾನ್​ ಹೊಂದಿದೆ.
ಸದ್ಯ ಏರ್​ಟೆಲ್​​, ಜಿಯೋ, ವಿಐ ಕಂಪನಿಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಬಿಎಸ್​​ಎನ್​​ಎಲ್​ ಬೆಸ್ಟ್​ ಎಂದು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಯ ವರ್ಕ್​ಫ್ರಂ ಹೋಮ್​ ಮತ್ತು ಇಂಟರ್​ನೆಟ್​​ನಲ್ಲಿ ಅತಿ ಹೆಚ್ಚು ಕಾಲ ಕಳೆಯುವವರಿಗೆ ಈ ಪ್ಲಾನ್​ ಬೆಸ್ಟ್​ ಎಂದೆನಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us