BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್​ಟೆಲ್​ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?

author-image
Ganesh
Updated On
BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್​ಟೆಲ್​ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?
Advertisment
  • ಶೀಘ್ರದಲ್ಲೇ ದೇಶದಲ್ಲಿ BSNL 5G ಸೇವೆ ಆರಂಭ ಆಗಲಿದೆ
  • BSNL 5G ನೆಟ್​​ವರ್ಕ್ ಮೂಲಕ ಮೊದಲ ಕರೆ ಮಾಡಿದ ಸಚಿವ
  • ಎಲ್ಲರ ಕೈಯಲ್ಲೂ BSNL 5G ಸಿಗುವ ದಿನ ದೂರವಿಲ್ಲ ಎಂದ ಸಚಿವ

Jio, Airtel ಮತ್ತು Vodafone Idea ರೀಚಾರ್ಜ್ ಪ್ಲಾನ್ ದರ ಹೆಚ್ಚಿಸಿದ ಬೆನ್ನಲ್ಲೇ ಎಲ್ಲರ ಕಣ್ಣುಗಳು BSNL 5G ಮೇಲೆ ನೆಟ್ಟಿದೆ. ಇನ್ಮುಂದೆ ಬಿಎಸ್​ಎನ್​​ಎಲ್ ಸೇವೆಯಲ್ಲೂ ವೇಗದ ಇಂಟರ್ನೆಟ್ ಪಡೆಯಲಿದ್ದೀರಿ. ಈ ನೆಟ್‌ವರ್ಕ್‌ನಿಂದ ಮೊದಲ ಕರೆ ಮಾಡಲಾಗಿದೆ, ಇದನ್ನು ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪರೀಕ್ಷೆಯ ಸಮಯದಲ್ಲಿ ಮಾಡಲಾಗಿದೆ.

ಈ ಸಂಬಂಧ ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಚಿವರು ಕಾಲ್ ಮಾಡ್ತಿರುವುದು ಕಂಡುಬಂದಿದೆ. ಇಂದು BSNL 5G ಸಕ್ರಿಯಗೊಳಿಸಿದ ಫೋನ್‌ನಲ್ಲಿ ವೀಡಿಯೊ ಕರೆಯನ್ನು ಪ್ರಯತ್ನಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಯನಾಡಿನ ಪ್ರಳಯದ ಭವಿಷ್ಯ ನುಡಿದಿದ್ದ ಗಿಳಿ.. ವರ್ಷದ ಹಿಂದೆ ಪುಟ್ಟ ಹುಡುಗಿ ಬರೆದಿದ್ದ ಕಥೆ ನಿಜವಾಗಿದ್ದೇಗೆ..?

ಬಳಕೆದಾರರಿಗೆ ದೊಡ್ಡ ಪ್ರಯೋಜನ
BSNLನ ರೀಚಾರ್ಜ್ ಯೋಜನೆಗಳು ಈಗಾಗಲೇ ಸಾಕಷ್ಟು ಕಮ್ಮಿ ದರದಲ್ಲಿವೆ. ಅದೇ ರೀತಿ 5G ಸೇವೆಯನ್ನೂ BSNL ಕಡಿಮೆ ದರದಲ್ಲಿ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. Jio, Airtel ಮತ್ತು Vodafone ರೀಚಾರ್ಜ್ ದರ ಹೆಚ್ಚಿಸಿದ ನಂತರ ಬಳಕೆದಾರರು ದೊಡ್ಡ ಪ್ರಯೋಜನ ಪಡೆಯಲಿದ್ದಾರೆ.

ವೀಡಿಯೋ ಕರೆ ಮಾಡಿದ ನಂತರ ಕೇಂದ್ರ ಸಚಿವ ಸಿಂಧಿಯಾ ಟೆಲಿಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. 5G ನೆಟ್‌ವರ್ಕ್ ಆಗಮನದಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಅದನ್ನು ಶೀಘ್ರದಲ್ಲೇ ಜನರಿಗೆ ನೀಡಲಾಗುವುದು. ಎಲ್ಲರ ಕೈಯಲ್ಲೂ BSNL 5G ಸಿಗುವ ದಿನ ದೂರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಸೊನ್ನೆ ಸುತ್ತಿದ ದುಬೆ, ರಾಹುಲ್.. ಹೊಡಿಬಡಿ ಆಟಗಾರನ ಬೆಂಜ್​​ನಲ್ಲಿ ಕೂರಿಸಿ ತಪ್ಪು ಮಾಡಿದ ಗಂಭೀರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment