/newsfirstlive-kannada/media/post_attachments/wp-content/uploads/2024/10/BSNL-1.jpg)
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದೆ. 5 ನೆಟ್​​ವರ್ಕ್​​, ಕಡಿಮೆ ಬೆಲೆಗೆ ರೀಚಾರ್ಜ್​ ಪ್ಲಾನ್ ಪರಿಚಯಿಸುತ್ತಿರುವ ಬಿಎಸ್​​ಎನ್​ಎಲ್, ಖಾಸಗಿ ಟೆಲಿಕಾಮ್ ಸಂಸ್ಥೆಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದೀಗ ಅದೇ ಬಿಎಸ್​ಎನ್​​​ಎಲ್ ತನ್ನ ಗ್ರಾಹಕರಿಗೆ ಗುಡ್​​ನ್ಯೂಸ್ ಒಂದನ್ನು ನೀಡಿದೆ.
ಜನವರಿಯಲ್ಲಿ 5G ಸೇವೆ
2025ರ ಜನವರಿಯಲ್ಲಿ BSNL, 5G ಸೇವೆಯನ್ನು ಪ್ರಾರಂಭಿಸಲಿದೆ ಎಂದು ಆಂಧ್ರಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಮಾಹಿತಿ ನೀಡಿದ್ದಾರೆ. 5G ಸೇವೆ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಸಾಧ್ಯವಾದಷ್ಟು ಬೇಗ 5G ರೋಲ್‌ಔಟ್‌ಗೆ ಅನುಕೂಲವಾಗಲು ಕಂಪನಿ ಸಿದ್ಧತೆ ನಡೆಸ್ತಿದೆ. ಅಂದರೆ 5G ಸೇವೆ ಒದಗಿಸಲು ಬೇಕಾದ ಮೂಲ ಸೌಕರ್ಯಗಳತ್ತ ಗಮನ ನೀಡಲಾಗುತ್ತಿದೆ ಎಂದಿದ್ದಾರೆ.
4Gಯಿಂದ 5Gಗೆ ಕನ್ವರ್ಟ್..
BSNL 4G ಸೇವೆಯನ್ನು 5Gಗೆ ಪರಿವರ್ತಿಸುವ ಕೆಲಸ ಆಗುತ್ತಿದೆ. ಇದರರ್ಥ 5G ಸೇವೆಯನ್ನು ಪ್ರಾರಂಭಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. BSNL ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿದ ಪ್ರದೇಶಗಳಲ್ಲಿ 5G ರೋಲ್ಔಟ್ ಪ್ರಾರಂಭವಾಗಲಿದೆ.
ಇದನ್ನೂ ಓದಿ:ಕಂಪ್ಯೂಟರ್​ಗಳಲ್ಲಿ ನಿಮ್ಮ ಕೆಲಸ ಇನ್ನಷ್ಟು ಸುಲಭ.. ನಿಮಗಾಗಿ ಬರ್ತಿದೆ AI ಏಜೆಂಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us