/newsfirstlive-kannada/media/post_attachments/wp-content/uploads/2024/07/BSNL-1.jpg)
ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ರೀಚಾರ್ಜ್ ಪ್ಲಾನ್ಗಳ ಬೆಲೆಯನ್ನು ಏರಿಸಿಕೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು ಅತ್ತ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ನತ್ತ ಮುಖ ಮಾಡುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಆಂಧ್ರಪ್ರದೇಶದಲ್ಲಿ ಕಳೆದ 23 ದಿನಗಳಲ್ಲಿ 1 ಲಕ್ಷದಷ್ಟು ಸಿಮ್ ಆ್ಯಕ್ಟಿವೇಶನ್ ಆಗಿದೆ.
ಖಾಸಗಿ ಟೆಲಿಕಾಂ ಆಪರೇಟರ್ಗಳ ಸುಂಕ ಶೇ.15ರಷ್ಟು ಹೆಚ್ಚಾಗಿದೆ. ಇದರಿಂದ ಕಂಗೆಟ್ಟ ಗ್ರಾಹಕರು ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಗಳತ್ತ ಮೊರೆ ಹೋಗುತ್ತಿದ್ದಾರೆ. ಅದರಂತೆಯೇ ಬಿಎಸ್ಎನ್ಎಲ್ನತ್ತ ಹಲವು ಗ್ರಾಹಕರು ದಿಕ್ಕು ಬದಲಾಯಿಸಿದ್ದಾರೆ. ಇನ್ನು ಹಲವರು ಪೋರ್ಟ್ ಮಾಡುತ್ತಿದ್ದಾರೆ.
BSNLಗೆ ಪೋರ್ಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಹಂತ 1: ಪೋರ್ಟ್ ಮಾಡಲು ಬಯಸಿದರೆ, ಮೊದಲಿಗೆ 1900ಗೆ SMS ಕಳುಹಿಸಬೇಕು. ಕಳುಹಿಸುವ ಮುನ್ನ ಪೋರ್ಟಿಂಗ್ ಕೋಡ್ (UPC) ಪಡೆದು 10 ಅಂಕಿಗಳ ಮೊಬೈಲ್ ಸಂಖ್ಯೆ ನಮೂದಿಸಬೇಕು.
ಉದಾಹರಣೆಗೆ: PORT 8888888888 ಎಂದು ಬರೆಯುವ ಮೂಲಕ SMS ಕಳುಹಿಸಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್ ಮೊಬೈಲ್ ಚಂದಾದಾರರಾಗಿದ್ದರೆ, 1900 ಗೆ ಕರೆ ಮಾಡಿ. ಗ್ರಾಹಕರು ಸ್ವೀಕರಿಸುವ UPC ಕೋಡ್ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ಪರವಾನಗಿ ಪ್ರದೇಶಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರದೇಶಗಳಲ್ಲಿ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಳಿದೆಡೆ ಮೂವತ್ತು ದಿನಗಳವರೆಗೆ ಮಾನ್ಯವಾಗಿರುತ್ತದೆ.
ಇದನ್ನೂ ಓದಿ: ಕಾವೇರಿಗೇಕೆ ಬಾಗಿನ? ಒಡಲು ತುಂಬಿದ ಜೀವನದಿಗೆ ಮನದಿಂದ ಅರ್ಪಣೆ
ಹಂತ 2: ಬಿಎಸ್ಎನ್ಎಲ್ ಸಿಮ್ ಪೋರ್ಟ್ ಮಾಡಲು BSNL CSC (ಗ್ರಾಹಕ ಸೇವಾ ಕೇಂದ್ರ) / ಅಧಿಕೃತ ಫ್ರ್ಯಾಂಚೈಸಿ/ಚಿಲ್ಲರೆ ವ್ಯಾಪಾರಿಗಳನ್ನು ಭೇಟಿ ಮಾಡಬೇಕು.
ಹಂತ 3: ಗ್ರಾಹಕರ ಅರ್ಜಿ ನಮೂನೆಯನ್ನು (CAF) ಪೂರ್ಣಗೊಳಿಸಬೇಕು. ನಂತರ ಅಗತ್ಯ ಪೋರ್ಟಿಂಗ್ ಶುಲ್ಕವನ್ನು ಪಾವತಿಸಬೇಕು. ಪ್ರಸ್ತುತ, BSNL ತಮ್ಮ ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ
ಹಂತ 4: ಪೋರ್ಟ್ ಪ್ರಕ್ರಿಯೆ ಅರ್ಜಿ ಸಲ್ಲಿಸಿದ ಬಳಿಕ ಹೊಸ BSNL ಸಿಮ್ ಕಾರ್ಡ್ ಸ್ವೀಕರಿಸುತ್ತೀರಿ. ಈ ವೇಳೆ BSNL ನಿಮಗೆ ಪೋರ್ಟ್ ಮಾಡುವ ದಿನಾಂಕ ಮತ್ತು ಸಮಯವನ್ನು ತಿಳಿಸುತ್ತದೆ. ನೀವು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಸಿಮ್ ಕಾರ್ಡ್ ಅನ್ನು ಬದಲಾಯಿಸಬೇಕು.
ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಅಡಚಣೆ ಯಾದರೆ ಟೋಲ್-ಫ್ರೀ ಸಂಖ್ಯೆ 1800-180-1503ಗೆ ಸಂಪರ್ಕಿಸಿ ಅಥವಾ 1503 ಗೆ ಕರೆ ಮಾಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ