/newsfirstlive-kannada/media/post_attachments/wp-content/uploads/2024/08/BSNL-2.jpg)
ಇತ್ತೀಚೆಗೆ ಜಿಯೋ, ಏರ್​ಟೆಲ್​​ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ವಾರ್ಷಿಕ ಪ್ಲಾನ್ ಮೊತ್ತವನ್ನು ಗಗನಕ್ಕೇರಿಸಿ ಗ್ರಾಹಕರಿಗೆ ಶಾಕ್​ ನೀಡಿವೆ. ಇದರ ಮಧ್ಯೆ ಬಿಎಸ್​ಎನ್​​ಎಲ್ ಸಂಸ್ಥೆಯೂ ಕಡಿಮೆ ಮೊತ್ತದ ವಾರ್ಷಿಕ ಪ್ಲಾನ್ ಘೋಷಿಸಿ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಠಕ್ಕರ್​ ಕೊಟ್ಟಿದೆ. ಈ ಮೂಲಕ ಗ್ರಾಹಕರಿಗೆ ಗುಡ್​ನ್ಯೂಸ್​​ ನೀಡಿದೆ.
ಕೈಗೆಟುಕುವ ದರದಲ್ಲಿ ವಾರ್ಷಿಕ ಪ್ಲಾನ್!
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​​​. ಇದು ಬಿಎಸ್​​ಎನ್​ಎಲ್​ ಕಂಪನಿ ಎಂದೇ ಫೇಮಸ್​​. ಈಗ ಬಿಎಸ್​​ಎನ್​​ಎಲ್​ ಕಂಪನಿ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್​ಗಿಂತಲೂ ವಿಭಿನ್ನ ಆಫರ್​ ನೀಡಿದೆ. ತನ್ನ ಅಗ್ಗದ ಮತ್ತು ಕೈಗೆಟುಕುವ ಪ್ಲಾನ್​ ಆಧಾರದ ಮೇಲೆ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ.
ಏನಿದು ಪ್ಲಾನ್​?
ಇದು 1198 ರೂ.ಗಳ ರಿಚಾರ್ಜ್​ ಪ್ಲಾನ್. ಬಿಎಸ್ಎನ್ಎಲ್​ನ ಈ ಪ್ರಿಪೇಯ್ಡ್ ಯೋಜನೆ ವಾರ್ಷಿಕದ್ದು. ಈ ಪ್ಲಾನ್​ ರೀಚಾರ್ಜ್​ ಮಾಡಿದ್ರೆ ಪ್ರತಿ ತಿಂಗಳು 30 SMS ಕಳುಹಿಸುವ ಸೌಲಭ್ಯ ಇದೆ. ಜತೆಗೆ ಸುಮಾರು 300 ನಿಮಿಷಗಳು ಫ್ರೀ ಕಾಲ್​​ ಕೂಡ ಇದೆ. ಈ ಯೋಜನೆ ಉಚಿತ ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ.
ಸೀಮಿತ ಡೇಟಾ ಲಭ್ಯ
ಬಿಎಸ್ಎನ್ಎಲ್​ನ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಡೇಟಾ ಸೌಲಭ್ಯ ಪಡೆಯುತ್ತಾರೆ. ಇದು ಸೀಮಿತ ಡೇಟಾ ಪ್ಲಾನ್​ ಆಗಿದೆ. ನಿಮಗೆ ಒಂದು ತಿಂಗಳಿಗೆ ಕೇವಲ 3GB ಡೇಟಾ ಮಾತ್ರ ನೀಡಲಾಗುತ್ತದೆ. ಈ ರೀತಿಯಾಗಿ ನೀವು 12 ತಿಂಗಳಲ್ಲಿ ಕೇವಲ 36GB ಡೇಟಾ ಮಾತ್ರ ಬಳಸಬಹುದು.
ಇದನ್ನೂ ಓದಿ:ಬೆಂಗಳೂರಿನಲ್ಲೇ ಸರ್ಕಾರಿ ಕೆಲಸ ಹುಡುಕುತ್ತಿರೋರಿಗೆ ಸುವರ್ಣಾವಕಾಶ; ಸಂಬಳ ಎಷ್ಟು? ವಿದ್ಯಾರ್ಹತೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us