/newsfirstlive-kannada/media/post_attachments/wp-content/uploads/2024/08/BSNL-1.jpg)
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) 24 ವರ್ಷವನ್ನು ಪೂರ್ಣಗೊಳಿಸಿದೆ. ಹೀಗಾಗಿ ಇದೇ ತಿಂಗಳು ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ಸಂತಸದ ಸಂಭ್ರಮದಲ್ಲಿ ಬಿಎಸ್ಎನ್ಎಲ್ ತನ್ನ ಚಂದಾದಾರರಿಗೆ 24GB ಉಚಿತ ಡೇಟಾ (Data) ನೀಡುತ್ತಿದೆ.
ಬಿಎಸ್ಎನ್ಎಲ್ ಹೆಚ್ಚುವರಿ ಡೇಟಾವಾಗಿ 24GB ನೀಡುತ್ತಿದೆ. ಆದರೆ ಅದಕ್ಕಾಗಿ 500ಕ್ಕಿಂತ ಹೆಚ್ಚುವರಿ ಮೌಲ್ಯದ ರೀಚಾರ್ಜ್ ಮಾಡಿದರೆ ಈ ವೋಚರ್ ಸಿಗಲಿದೆ. ಅಕ್ಟೋಬರ್ 1 ಮತ್ತು ಅಕ್ಟೋಬರ್ 24ರ ನಡುವೆ ಈ ರೀಚಾರ್ಜ್ ಮಾಡಬೇಕು.
ಇದನ್ನೂ ಓದಿ: iPhone: ಅಪ್ಡೇಟ್ ಮಾಡಿದ ಬಳಿಕ ಕಾಣಿಸಿಕೊಂಡ ಬ್ಯಾಟರಿ ಸಮಸ್ಯೆ.. ಐಫೋನ್ ಬಳಕೆದಾರರಿಗೆ ಸಂಕಷ್ಟ
ಗ್ರಾಹಕರಿಗೆ ಈ ಆಫರನ್ನು ಬಿಎಸ್ಎನ್ಎಲ್ ತೆರೆದಿಟ್ಟಿದ್ದು, ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘24 ವರ್ಷಗಳ ನಂಬಿಕೆ, ಸೇವೆ ಮತ್ತು ನಾವೀನ್ಯತೆ. BSNL 24 ವರ್ಷಗಳಿಂದ ಕನೆಕ್ಟಿಂಗ್‌ಇಂಡಿಯಾವನ್ನು ಹೊಂದಿದೆ ಮತ್ತು ನೀವು ಇಲ್ಲದೆ ನಾವು ಏನನ್ನು ಮಾಡಲು ಸಾಧ್ಯವಿಲ್ಲ. ಈ ಮೈಲಿಗಲ್ಲನ್ನು ನಮ್ಮೊಂದಿಗೆ ಆಚರಿಸಿ ಮತ್ತು ₹ 500/- ಕ್ಕಿಂತ ಹೆಚ್ಚಿನ ರೀಚಾರ್ಜ್ ವೋಚರ್‌ಗಳಲ್ಲಿ 24 GB ಹೆಚ್ಚುವರಿ ಡೇಟಾವನ್ನು ಆನಂದಿಸಿ’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 1 ರೂಪಾಯಿಯಲ್ಲಿ ಇಡೀ ಬೆಂಗಳೂರು ಸುತ್ತಬಹುದು! ಫ್ಲಿಪ್ಕಾರ್ಟ್ ನೀಡಿದ ಹೊಸ ಆಫರ್ ಏನು?
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅನ್ನು ಸೆಪ್ಟೆಂಬರ್ 15, 2000 ರಂದು ಸ್ಥಾಪಿಸಲಾಯಿತು. ಸದ್ಯ ಭಾರತದಲ್ಲಿ ಬಹುತೇಕ ಜನರು ಬಿಎಸ್ಎನ್ಎಲ್ ನೆಟ್ವರ್ಕ್ ಬಳಸುತ್ತಿದ್ದಾರೆ. ಮಾತ್ರವಲ್ಲದೆ ಇತ್ತೀಚಿನ ಬೆಲೆ ಏರಿಕೆ ಬಳಸಿ ಖಾಸಗಿ ಕಂಪನಿ ಗ್ರಾಹಕರು ಬಿಎಸ್ಎನ್ಎಲ್ ಮೊರೆ ಹೋಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ