/newsfirstlive-kannada/media/post_attachments/wp-content/uploads/2024/10/BSNL-1.jpg)
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಭಾರೀ ಬದಲಾವಣೆ ತರುತ್ತಿದೆ. ತ್ರಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿದೆ. ಹೊಸ ಹೊಸ ಆವಿಷ್ಕಾರಗಳನ್ನು ತನ್ನಲ್ಲಿ ಪರಿಚಯಿಸಲು ಮುಂದಾಗಿದೆ. ಅದರಂತೆಯೇ ಇದೀಗ ಸಿಮ್ ಕಾರ್ಡ್ ಇಲ್ಲದೆಯೇ ಕರೆ ಮಾಡುವಷ್ಟು ತಂತ್ರಜ್ಞಾನ ತರುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.
ಭಾರತ್ ಸಂಚಾರ್ ನಿಗಮ ಲಿಮಿಡೆಟ್ ಜಾಗತಿಕ ಉಪಗ್ರಹ ಸಂವಹನ ಸಂಸ್ಥೆಯಾದ ವಿಯಸಾತ್ (Viasat) ಸಹಯೋಗದೊಂದಿಗೆ ಡೈರೆಕ್ಟ್-ಟು-ಡಿವೈಸ್ ತಂತ್ರಜ್ಞಾನದ ಪ್ರಯೋಗವನ್ನು ಪೂರ್ಣಗೊಳಿಸಿದೆ. ಇದರ ಮೂಲಕ ಸಿಮ್ ಕಾರ್ಡ್ ಇಲ್ಲದೆಯೇ ಮತ್ತು ಟ್ರೆಡಿಷನಲ್ ನೆಟ್ವರ್ಕ್ ಇಲ್ಲದೆಯೇ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡುವ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.
ಹೊಸ ತಂತ್ರಜ್ಞಾನವು ಸದ್ಯ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ವಾಚ್ ಇತರ ಸ್ಮಾರ್ಟ್ಸಾಧನಗಳೊಂದಿಗೆ ಮತ್ತು ಆ್ಯಂಡ್ರಾಯ್ಡ್, ಐಒಎಸ್ ಸ್ಮಾರ್ಟ್ಫೊನ್ಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮತ್ತೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಮರಳಲು ಸಜ್ಜಾದ LG.. ಈ ಬಾರಿ ಡಿಫರೆಂಟಾಗಿ ಎಂಟ್ರಿ ಕೊಡುತ್ತೆ ನೋಡಿ
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ನೆಟ್ವರ್ಕ್ ಸ್ಥಗಿತದ ಸಮಯದಲ್ಲೂ ತಡೆರಹಿತ ಸಂಪರ್ಕವನ್ನು ನೀಡುವ ಗುರಿಯನ್ನು ಹೊಂದಿದೆ. ಇದು ನೆಟ್ವರ್ಕ್ ಸಮಸ್ಯೆ ಅನುಭವಿಸುವ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಕ್ಕೆ ಬರಲಿದೆ.
ಇದನ್ನೂ ಓದಿ: ಶತ್ರುಗಳ ಕಾಟ; ಕೌಟುಂಬಿಕ ಸಮಸ್ಯೆ; ಮನೆವರಿಗೆಲ್ಲಾ ಅವಮಾನ; ಇಲ್ಲಿದೆ ಇಂದಿನ ಭವಿಷ್ಯ
ವಯಸಾತ್ ಪ್ರಕಾರ, ಬಿಎಸ್ಎನ್ಎಲ್ನ ಡೈರೆಕ್ಟ್-ಟು-ಡಿವೈಸ್ ಕನೆಕ್ಟಿವಿಟಿ ಎನ್ನುವುಡು ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್, ಕಾರುಗಳನ್ನು ನೇರವಾಗಿ ಉಪಗ್ರಹ ನೆಟ್ವರ್ಕ್ಗೆ ಸಂಪರ್ಕಿಸಲು ಸಾಧ್ಯವಾಗುವ ಕ್ರಾಂತಿಕಾರಿ ತಂತ್ರಜ್ಞನಾವಾಗಿದೆ. ಇದರ ಮೂಲಕ ವೈಯ್ಯಕ್ತಿಕ ಮತ್ತು ಸಾಧನ ಸಂವಹನ ಬೆಳೆಸಲು ವಿನ್ಯಾಸಗೊಳಿಸಲಾಗಿದೆ. ವಿಶ್ವಾಸಾರ್ಹ ಸಂವಹನವನ್ನು ಏರ್ಪಡಿಸುವ ನೀರಿಕ್ಷೆಯಿದೆ’ ಎಂದು ಹೇಳಿದೆ.
ಮೊಬೈಲ್ ಟವರ್ ಬೇಡಾ! ತಂತಿಗಳ ಅವಶ್ಯಕತೆ ಇಲ್ಲ
ಡೈರೆಕ್ಟ್ ಟು ಡಿವೈಸ್ ಸೇವೆ ಉಪಗ್ರಹವನ್ನು ಆಧರಿಸಿದೆ. ಯಾವುದೇ ಮೊಬೈಲ್ ಟವರ್ ನೆಟ್ವರ್ಕ್ ಮತ್ತು ಇತರ ತಂತಿಗಳ ಮೂಲಕ ಸೇವೆಯನ್ನು ಅವಲಂಬಿಸದೆ ಇದು ನೇರವಾಗಿ ಸಂಪರ್ಕಿಸುವಲ್ಲಿ ಕೆಲ ಮಾಡುತ್ತದೆ.
ಬಿಎಸ್ಎನ್ಎಲ್ ಕಂಪನಿ ಈಗಾಗಲೇ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮೂಲಕ ನಾನ್ ಟೆರೆಸ್ಟ್ರಿಯಲ್ ನೆಟ್ವರ್ಕ್ ಸಂಪರ್ಕವನ್ನು ಬಳಸಿಕೊಂಡು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ವಯಸಾತ್ ಸಹಯೋಗದೊಂದಿಗೆ ದ್ವಿಮುಖ ಸಂದೇಶ ಮತ್ತು SOS ಸಂದೇಶ ಕಳುಹಿಸಿದೆ.
ಬಿಎಸ್ಎನ್ಎಲ್ನ ಈಗ ಉಪಗ್ರಹ ಸಂಪರ್ಕ ಸೇವೆಗಳ ಓಟ ನಡೆಸಲು ಮುಂದಾಗಿದೆ. ಇದು ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾಗೆ ಪೈಪೋಟಿ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ