Advertisment

Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

author-image
Ganesh
Updated On
ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!
Advertisment
  • BSNL ಹೊಸ ತಂತ್ರಕ್ಕೆ Jio, Airtelಗೆ ನೆಲಕಚ್ಚುವ ಭಯ
  • BSNL Live TV App ಪರಿಚಯಿಸಿದ ಸರ್ಕಾರಿ ಟೆಲಿಕಾಂ ಕಂಪನಿ
  • 15,000 ಕ್ಕೂ ಹೆಚ್ಚು 4G ಸೈಟ್‌ಗಳನ್ನು 5Gಗೆ ಕನ್ವರ್ಟ್

ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟಿವಿ ಜಗತ್ತಿಗೆ ಪ್ರವೇಶ ಮಾಡಿದೆ. ಬಿಎಸ್​ಎನ್​ಎಲ್ ‘BSNL ಲೈವ್ ಟಿವಿ’ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಆರಂಭದಲ್ಲಿ Android TV ಗಳಿಗೆ ಲಭ್ಯವಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Advertisment

ಮಾಧ್ಯಮ ವರದಿಗಳ ಪ್ರಕಾರ.. ಈ ಅಪ್ಲಿಕೇಶನ್ ಅನ್ನು WeConnect ಪ್ರಕಟಿಸಿದೆ. BSNL ಲೈವ್ ಟಿವಿ ಅಪ್ಲಿಕೇಶನ್ ಇಂಟರ್ನೆಟ್, ಕೇಬಲ್ ಟಿವಿ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಒಂದೇ CPE ಮೂಲಕ ಬಳಸಲಾಗುತ್ತಿದೆ. ಇದನ್ನು ಆಂಡ್ರಾಯ್ಡ್ ಆಧಾರಿತ ಸಿಸ್ಟಮ್ ಮೂಲಕ ಕಾರ್ಯ ನಿರ್ವಹಿಸಲಿದೆ.

ಇದನ್ನೂ ಓದಿ:ಕಡಿಮೆ ಬೆಲೆಗೆ Jio ರೀಚಾರ್ಜ್, ದಿನಕ್ಕೆ 2 GB; ಈ ಪ್ಲಾನ್​ನಲ್ಲೂ ಮೋಸ ಇದೆ ಎಂದು ಆಕ್ರೋಶ

ಕಳೆದ ಫೆಬ್ರವರಿಯಲ್ಲಿ BSNL ಫೈಬರ್ ಮೂಲಕ ಇಂಟರ್ನೆಟ್ ಪ್ರೋಟೋಕಾಲ್ ಟೆಲಿವಿಷನ್ (IPTV) ಸೇವೆಯನ್ನು ಪರಿಚಯಿಸಿತ್ತು. ಇದೀಗ ಅದರ ಬೆಲೆಯನ್ನು ಸಾಕಷ್ಟು ಕಡಿಮೆ ಮಾಡಲಾಗಿದೆ. ಆರಂಭಿಕ ಬೆಲೆ ತಿಂಗಳಿಗೆ 130 ರೂಪಾಯಿ ಆಗಿದೆ. ವಿಶೇಷವೆಂದರೆ ಅಂದ್ರೆ ಆಂಡ್ರಾಯ್ಡ್ ಟಿವಿಗಳಲ್ಲಿ ಈ ಸೇವೆಯು ಸೆಟ್-ಟಾಪ್ ಬಾಕ್ಸ್ ಇಲ್ಲದೆಯೂ ಕೆಲಸ ಮಾಡುತ್ತದೆ. ಈ ಮೂಲಕ ಏರ್‌ಟೆಲ್ ಮತ್ತು ಜಿಯೋಗೆ ತೀವ್ರ ಪೈಪೋಟಿ ನೀಡಲು ಬಿಎಸ್​ಎನ್​​ಎಲ್ ಮೆಗಾ ಪ್ಲಾನ್ ಮಾಡಿದೆ.

Advertisment

5ಜಿ ಸೇವೆ ಗುರಿ
ಮುಂದಿನ ವರ್ಷದ ಮೊದಲಾರ್ಧದಲ್ಲಿ ದೇಶಾದ್ಯಂತ 5G ನೆಟ್‌ವರ್ಕ್ ಪ್ರಾರಂಭಿಸುವ ಗುರಿಯನ್ನು BSNL ಇಟ್ಕೊಂಡಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ‘ಆತ್ಮನಿರ್ಭರ್ ಭಾರತ್’ ಅಭಿಯಾನದ ಅಡಿಯಲ್ಲಿ BSNL 15,000 ಕ್ಕೂ ಹೆಚ್ಚು 4G ಸೈಟ್‌ಗಳನ್ನು ರಚಿಸಿದೆ ಎಂದಿದ್ದಾರೆ. ಈ ಸೈಟ್‌ಗಳನ್ನು ಶೀಘ್ರದಲ್ಲೇ 5G ಗೆ ಪರಿವರ್ತಿಸಲು ಕಂಪನಿ ಸಿದ್ಧವಾಗಿದೆ.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಬೌಲರ್​​ ಸೆನ್ಸೇಷನ್​; ಈತ ಬೆಂಗಳೂರು ತಂಡಕ್ಕೆ ಮತ್ತೆ ಬೇಕೇಬೇಕು ಎಂದ ಫ್ಯಾನ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment