BSNL ಮತ್ತಷ್ಟು ಗ್ರಾಹಕರ ಸ್ನೇಹಿ.. Jio, Airtelನಲ್ಲಿ ಇಲ್ಲದ ವಿಶೇಷ ಸೌಲಭ್ಯ, ದುಸ್ರಾ ಮಾತಾಡಂಗೇ ಇಲ್ಲ!

author-image
Ganesh
Updated On
BSNL ಮತ್ತಷ್ಟು ಗ್ರಾಹಕರ ಸ್ನೇಹಿ.. Jio, Airtelನಲ್ಲಿ ಇಲ್ಲದ ವಿಶೇಷ ಸೌಲಭ್ಯ, ದುಸ್ರಾ ಮಾತಾಡಂಗೇ ಇಲ್ಲ!
Advertisment
  • ಜನರಿಗೆ ಶುರುವಾಗಿದೆ ಬಿಎಸ್​ಎನ್​ಎಲ್ ಮೇಲೆ ಪ್ರೀತಿ
  • ದಿನೇ ದಿನೆ ಹೊಸ ಯೋಜನೆ ಪರಿಚಯಿಸ್ತಿರುವ BSNL
  • ಇನ್ಮುಂದೆ ಸ್ಪ್ಯಾಂ ಕರೆ ಮಾಡೋರಿಗೆ ಇದೆ ಹಬ್ಬ

Jio, Airtel ಮತ್ತು Vodafone Idea ರೀಚಾರ್ಜ್ ಯೋಜನೆ ಹೆಚ್ಚಿಸಿದ ನಂತರ ಜನರು BSNL ಕಡೆಗೆ ಅಟ್ರ್ಯಾಕ್ಟ್​ ಆಗ್ತಿದ್ದಾರೆ. ಲಕ್ಷಾಂತರ ಬಳಕೆದಾರರು ಬೇರೆ ಕಂಪನಿಗಳ ಸಿಮ್​ಗಳನ್ನು ಬಿಎಸ್​ಎನ್​ಎಲ್​ಗೆ ಪೋರ್ಟ್ ಮಾಡ್ತಿದ್ದಾರೆ. ಕಾರಣ ಇಷ್ಟೇ, BSNL ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ಅದಕ್ಕಾಗಿ ಬಳಕೆದಾರರಿಗೆ ನಿರಂತರವಾಗಿ ಹೊಸ, ಹೊಸ ಪ್ಲಾನ್​ಗಳನ್ನು ನೀಡುತ್ತಿದೆ.

BSNL 4G ನೆಟ್‌ವರ್ಕ್​ಗಾಗಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಹಲವು ಭಾಗಗಳಲ್ಲಿ BSNL 4G ಸಂಪರ್ಕ ಲಭ್ಯವಾಗಬಹುದು. ಇದೀಗ ಬಿಎಸ್​ಎನ್​ಎಲ್, ಸ್ಪ್ಯಾಮ್ ಕರೆಗಳನ್ನು ತಡೆಯಲು ಹೊಸ ಸೇವೆಯನ್ನು ಪ್ರಾರಂಭಿಸುತ್ತದೆ. ನಿಮ್ಮ BSNL ಸಂಖ್ಯೆಗೆ ಸ್ಪ್ಯಾಮ್ ಸಂದೇಶಗಳ ಬಗ್ಗೆ ನೀವು ತಕ್ಷಣ ದೂರು ನೀಡಬಹುದು. ಈ ದೂರುಗಳನ್ನು BSNL Selfcare ಅಪ್ಲಿಕೇಶನ್ ಮೂಲಕ ಮಾಡಬಹುದು.

ಇದನ್ನೂ ಓದಿ:Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

ಅದು ಹೆಂಗೆ..?

  • ಮೊದಲು ಫೋನ್‌ನಲ್ಲಿ BSNL ಸೆಲ್ಫ್‌ಕೇರ್ ಅಪ್ಲಿಕೇಶನ್ ಓಪನ್ ಮಾಡಬೇಕು
  • ನಂತರ ಲೆಫ್ಟ್​ಸೈಡ್​ನಲ್ಲಿರುವ ಮೂರು ಐಕಾನ್ ಮೇಲೆ ಕ್ಲಿಕ್ ಮಾಡಬೇಕು
  • ನಂತರ ಕೆಳಗೆ ಸ್ಕ್ರಾಲ್ ಮಾಡಬೇಕು, ದೂರು ಸಂಬಂಧಿತ ಆಯ್ಕೆಯನ್ನು ಆರಿಸಬೇಕು
  • ನಂತರ ರೈಟ್​ ಸೈಡ್​​ನಲ್ಲಿರುವ ಮೂರು ಸಾಲಿನ ಮೆನುವಿನಲ್ಲಿ ಟ್ಯಾಪ್ ಮಾಡಬೇಕು
  • ನಂತರ ಹೊಸ ದೂರಿನ ಮೇಲೆ ಕ್ಲಿಕ್ ಮಾಡಬೇಕು
  • ನೀವು SMS ಅಥವಾ ಧ್ವನಿ ಕರೆಗಳ ನಡುವೆ ಆಯ್ಕೆ ಮಾಡಬೇಕು. ಸಂಪೂರ್ಣ ಮಾಹಿತಿ ನೀಡಬೇಕು.
  • ಅಂತಿಮವಾಗಿ ವಿವರಗಳನ್ನು ದಾಖಲಿಸಿದ ನಂತರ ದೂರು ನೀಡಬೇಕು.

BSNL ಬಳಕೆದಾರರು ಕಂಪನಿಯ ಸೆಲ್ಫ್‌ಕೇರ್ ಅಪ್ಲಿಕೇಶನ್‌ನ ಸಹಾಯದಿಂದ ಸುಲಭವಾಗಿ ದೂರುಗಳನ್ನು ಸಲ್ಲಿಸಬಹುದು. ಪ್ರಸ್ತುತ ಯಾವುದೇ ಕಂಪನಿಯು ಅಂತಹ ಸೌಲಭ್ಯವನ್ನು ಹೊಂದಿಲ್ಲ. ಸೆಲ್ಫ್‌ಕೇರ್ ಅಪ್ಲಿಕೇಶನ್‌ನ ಸಹಾಯದಿಂದ ನೀವು ಸ್ಪ್ಯಾಮ್ ಸಂದೇಶಗಳನ್ನು ತಪ್ಪಿಸಬಹುದು.

ಇದನ್ನೂ ಓದಿ:Jio, Airtel, Vi, BSNL ಗ್ರಾಹಕರಿಗೆ ಬಿಗ್ ಶಾಕ್.. 1.7 ಕೋಟಿ ಸಿಮ್ ಬ್ಯಾನ್, ಈಗಲೇ ಚೆಕ್ ಮಾಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment