/newsfirstlive-kannada/media/post_attachments/wp-content/uploads/2024/08/BSNL-3.jpg)
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗ್ರಾಹಕರಿಗಾಗಿ ಬಜೆಟ್ ಬೆಲೆಯ ಪ್ಲಾನ್ ನೀಡುತ್ತಾ ಬಂದಿದೆ. ಅದರಂತೆಯೇ ಕೆಲವರು ಇಂಟರ್ನೆಟ್ ಮತ್ತು ಅನಿಯಮಿತ ಕರೆ ಸೌಲಭ್ಯ ಹೊಂದಲು ಬಯಸುತ್ತಾರೆ. ಹೀಗಾಗಿ ಬೆಸ್ಟ್ ಪ್ಲಾನ್ ಹುಡುಕಾಡುತ್ತಿರುತ್ತಾರೆ. ಇದೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನೂತನ ಗ್ರಾಹಕರಿಗಾಗಿ ಹೊಸ ಪ್ಲಾನ್ ಪರಿಚಯಿಸಿದೆ.
ಬಿಎಸ್ಎನ್ಎಲ್ 108 ರೂಪಾಯಿಯ ಯೋಜನೆ ಬಿಡುಗಡೆ ಮಾಡಿದೆ. ಇದರ ಸಿಂಧುತ್ವ ಮುಗಿಯುವಲ್ಲಿಯವರೆಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಡೇಟಾ ಒದಗಿಸುತ್ತದೆ.
28 ದಿನಗಳ ಮಾನ್ಯತೆ ಹೊಂದಿರುವ ಈ ಪ್ಲಾನ್ ಮೂಲಕ ದಿನಕ್ಕೆ 1GBಯ ಹಾಗೆ ಒಟ್ಟು 28GB ಡೇಟಾ ಒದಗಿಸುತ್ತದೆ. ಇದಲ್ಲದೆ ಎಸ್ಎಮ್ಎಸ್ ಸೇವೆಯನ್ನು ನೀಡುತ್ತಿದೆ.
ಗ್ರಾಹಕರಿಗಾಗಿ 28 ದಿನಗಳ ಕಾಲ ಉಚಿತ ಎಸ್ಎಮ್ಎಸ್ ನೀಡುತ್ತಿದೆ. 500 ಎಸ್ಎಮ್ಎಸ್ ಅನ್ನು ಒದಗಿಸುತ್ತಿದೆ. ಆದರೆ ಬೇಸರದ ಸಂಗತಿ ಎಂದರೆ 108 ರೂಪಾಯಿಯ ಪ್ಲಾನ್ ಮೊದಲ ರೀಚಾರ್ಜ್ ಕೂಪನ್ ಆಗಿದೆ. ವಿಶೇಷವಾಗಿ ಹೊಸ ಗ್ರಾಹಕರಿಗಾಗಿ ಪರಿಚಯಿಸಿದೆ.
ಹೌದು. ಬಿಎಸ್ಎನ್ಎಲ್ ಸಿಮ್ ಕಾರ್ಡ್ ಖರೀದಿಸಿದಾಗ 108 ರೂ. ರೀಚಾರ್ಜ್ ಅಳವಡಿಸಿಕೊಂಡರೆ 28 ದಿನಗಳ ವ್ಯಾಲಿಡಿಟಿ ಜೊತೆ ಈ ಪ್ರಯೋಜನವನ್ನು ಬಳಸಿಕೊಳ್ಳಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ