/newsfirstlive-kannada/media/post_attachments/wp-content/uploads/2024/08/BSNL-2.jpg)
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಗ್ರಾಹಕರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. BSNL ತನ್ನ 9 ಕೋಟಿಗೂ ಹೆಚ್ಚು ಗ್ರಾಹಕರಿಗೆ ಹೋಳಿ ಹಬ್ಬದ ಧಮಾಕಾ ಕೊಡುಗೆ ಪರಿಚಯಿಸಿದೆ. ಈ ಕೊಡುಗೆಯ ಅಡಿಯಲ್ಲಿ ರೀಚಾರ್ಜ್ ಯೋಜನೆಯ ಮಾನ್ಯತೆ ಅವಧಿಯನ್ನೂ ವಿಸ್ತರಿಸಲಾಗುತ್ತಿದೆ.
1499 ರೀಚಾರ್ಜ್ ಪ್ಲಾನ್ನಲ್ಲಿ ವರ್ಷದ 365 ದಿನಗಳವರೆಗೂ ವಿಶೇಷ ಪ್ಯಾಕೇಜ್ ಸಿಗಲಿದೆ. ಅನಿಯಮಿತ ಟಾಕ್‌ಟೈಮ್, ಡೇಟಾ ಪ್ರಯೋಜನ ಸಿಗಲಿದೆ. 29 ದಿನಗಳ ಹೆಚ್ಚುವರಿ ಉಚಿತ ಮಾನ್ಯತೆ ಇದೆ ಎಂದು ಕಂಪನಿಯು X ನಲ್ಲಿ ತಿಳಿಸಿದೆ.
ಏನೆಲ್ಲ ಸಿಗಲಿದೆ..?
- ಗ್ರಾಹಕರು 1499 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು
- ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 ಎಸ್‌ಎಂಎಸ್
- ಜೊತೆಗೆ 24 ಜಿಬಿ ಡೇಟಾ ಸಿಗಲಿದೆ, ಹೆಚ್ಚಿನ ಡೇಟಾ ಸಿಗಲ್ಲ
- ಆದರೆ 365 ದಿನಗಳವರೆಗೆ ಅನಿಯಮಿತ ಕರೆ ಮಾಡಬಹುದು
- ಹಿಂದಿನ ಪ್ಲಾನ್ನಲ್ಲಿ 345 ದಿನಗಳವರೆಗೆ ವ್ಯಾಲಿಡಿಟಿ ಇತ್ತು
ಇದನ್ನೂ ಓದಿ: Jio, Airtel, Vi; ನಿಮ್ಮ ಸಿಮ್ ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಇಷ್ಟು ಮಿನಿಮಮ್ ರೀಚಾರ್ಜ್ ಮಾಡಲೇಬೇಕು!
ಅಂದ್ಹಾಗೆ ಈ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಇರಲಿದೆ. 1499 ರೂಪಾಯಿ ಪ್ಲಾನ್ನಲ್ಲಿ ಬಯಸೋರು ಈಗಲೇ ರೀಚಾರ್ಜ್ ಮಾಡಿಕೊಳ್ಳಬಹುದು. BSNL ವೆಬ್‌ಸೈಟ್ ಮತ್ತು BSNL ಸೆಲ್ಫ್‌ಕೇರ್ ಅಪ್ಲಿಕೇಶನ್‌ನಿಂದ ರೀಚಾರ್ಜ್ ಮಾಡಬಹುದು.
ಇದಲ್ಲದೆ ಮತ್ತೊಂದು ಹೆಚ್ಚುವರಿ ಮಾನ್ಯತೆ ಇರುವ ಪ್ಲಾನ್ ನೀಡುವುದಾಗಿ ಕಂಪನಿ ಘೋಷಿಸಿದೆ. 2,399 ರೂಪಾಯಿಗಳ ರೀಚಾರ್ಜ್ ಮಾಡಿಸಿದ್ರೆ 30 ದಿನಗಳ ಹೆಚ್ಚುವರಿ ಮಾನ್ಯತೆ ಸಿಗಲಿದೆ. ಈ ಹಿಂದೆ ಈ ಯೋಜನೆ 395 ದಿನಗಳವರೆಗೆ ವ್ಯಾಲಿಡಿಟಿ ಹೊಂದಿತ್ತು. ಈಗ ಅದನ್ನು 425 ದಿನಗಳವರೆಗೆ ವಿಸ್ತರಿಸಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ 9 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ.
ಇದನ್ನೂ ಓದಿ: ಮಹತ್ವದ ದಾಖಲೆ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ.. ಚಾಂಪಿಯನ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸ್ತಾರಾ ವಿರಾಟ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ