/newsfirstlive-kannada/media/post_attachments/wp-content/uploads/2025/07/BSNL.jpg)
ಬಿಎಸ್ಎನ್ಎಲ್ (BSNL) ತನ್ನ ಬಳಕೆದಾರರಿಗಾಗಿ ಮತ್ತೊಂದು ಅಗ್ಗದ ಪ್ಲಾನ್ ಪರಿಚಯಿಸಿದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಇತ್ತೀಚೆಗೆ ತನ್ನ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಡೇಟಾ ನೀಡಲು Q-5G ಸೇವೆ ಪ್ರಾರಂಭಿಸಿದೆ.
ಇದನ್ನೂ ಓದಿ: ಅಮೆರಿಕಾದಂತೆ ಭಾರತದಲ್ಲೂ ಬಂಕರ್ ಬಸ್ಟರ್ ಮಿಸೈಲ್ ತಯಾರಿ.. ಇದರ ವಿಶೇಷತೆ ಏನು ಗೊತ್ತಾ..?
BSNL ತನ್ನ ಅಧಿಕೃತ X ಹ್ಯಾಂಡಲ್ನಲ್ಲಿ ಈ ಯೋಜನೆ ಪ್ರಕಟಿಸಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ.. BSNL ಈ ಅಗ್ಗದ ರೀಚಾರ್ಜ್ ಯೋಜನೆ ರೂ. 599 ಗೆ ಬರುತ್ತದೆ. ಈ ಯೋಜನೆಯ ಬೆಲೆ ಈ ವ್ಯಾಲಿಡಿಟಿಯಲ್ಲಿ ದಿನಕ್ಕೆ ಕೇವಲ 7 ರೂ. ಮಾತ್ರ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ದೇಶದಾದ್ಯಂತ ಅನಿಯಮಿತ ಕರೆ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್ ಪ್ರಯೋಜನ ಪಡೆಯಬಹುದು.
ಬಳಕೆದಾರರು ದಿನಕ್ಕೆ 3GB ಹೈ-ಸ್ಪೀಡ್ ಡೇಟಾ ಪ್ರಯೋಜನ ಪಡೆಯುತ್ತಾರೆ. ಬಳಕೆದಾರರು ಒಟ್ಟು 252GB ಡೇಟಾ ಪಡೆಯುತ್ತಾರೆ. ದಿನಕ್ಕೆ 100 ಉಚಿತ SMSಗಳು ಕೂಡ ಇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ