/newsfirstlive-kannada/media/post_attachments/wp-content/uploads/2024/08/BSNL-2.jpg)
ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಪರಿಚಯಿಸುವ ಮೂಲಕ BSNL ಗ್ರಾಹಕರಿಗೆ ಮತ್ತಷ್ಟು ಹತ್ತಿರ ಆಗ್ತಿದೆ. ಇದೀಗ ಐದು ತಿಂಗಳ ಮಾನ್ಯತೆ ಹೊಂದಿರುವ ಅಗ್ಗದ ಯೋಜನೆ ಪರಿಚಯಿಸಿದೆ. 400 ರೂಪಾಯಿಗಿಂತ ಕಡಿಮೆ ವೆಚ್ಚದ ರೀಚಾರ್ಜ್ ಪ್ಲಾನ್ ಇದಾಗಿದೆ. ಇದರ ಅಡಿಯಲ್ಲಿ ಡೇಟಾ, ಅನಿಯಮಿತ ಕರೆ ಮತ್ತು SMS ಸೌಲಭ್ಯ ಇದೆ.
ಹೊಸ ಪ್ಲಾನ್ ಏನು..?
- ಹೊಸ ಪ್ಲಾನ್ ರೀಚಾರ್ಜ್ನ ಒಟ್ಟು ಮೊತ್ತ 397 ರೂ
- ಅದರ ವ್ಯಾಲಿಡಿಟಿ 150 ದಿನ
- ಮೊದಲ 30 ದಿನಗಳವರೆಗೆ ಅನಿಯಮಿತ ಕರೆ
- ಮೊದಲ 30 ದಿನಗಳವರೆಗೆ ಪ್ರತಿದಿನ 2GB ಡೇಟಾ
- ಒಂದು ತಿಂಗಳವರೆಗೆ ಒಟ್ಟು 60GB ಡೇಟಾ ಲಭ್ಯ
- 30 ದಿನಗಳ ನಂತರ ಅವಶ್ಯಕತೆಗೆ ಅನುಗುಣವಾಗಿ ಡೇಟಾ, ಕರೆ ಸೌಲಭ್ಯ
- ಈ ಯೋಜನೆಯಲ್ಲಿ 100 ಉಚಿತ SMS ಸೌಲಭ್ಯ
ಈ ಯೋಜನೆಯನ್ನು ಯಾವುದೇ ಖಾಸಗಿ ಟೆಲಿಕಾಂ ಕಂಪನಿ ನೀಡುತ್ತಿಲ್ಲ. ಗ್ರಾಹಕರ ತನ್ನತ್ತ ಸೆಳೆಯಲು ಕಂಪನಿ ಇಂತಹ ಪ್ಲಾನ್ ರೂಪಿಸ್ತಿದೆ.
ಇದನ್ನೂ ಓದಿ: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಹೇಳಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ