ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟ BSNL.. ಕೇವಲ ₹999 ರೀಚಾರ್ಜ್ ಮಾಡಿಸಿದ್ರೆ ಏನೆಲ್ಲಾ ಸಿಗುತ್ತೆ ಗೊತ್ತಾ?

author-image
Bheemappa
Updated On
ಗ್ರಾಹಕರಿಗೆ ಗುಡ್​ನ್ಯೂಸ್​; ಕಡಿಮೆ ದರದಲ್ಲಿ ಹಲವು ಬೆನಿಫಿಟ್ಸ್​​; ಏನಿದು BSNL ಹೊಸ ಪ್ಲಾನ್​​?
Advertisment
  • ಬೇರೆ ಬೇರೆ ನೆಟ್​ವರ್ಕ್​ ಗ್ರಾಹಕರು ಬಿಎಸ್​ಎನ್​​ಎಲ್​​ಗೆ ಶಿಫ್ಟ್
  • ಗ್ರಾಹಕರನ್ನು ಸೆಳೆಯಲು ಬಿಎಸ್​ಎನ್​ಎಲ್​​ನಿಂದ ಬಿಗ್ ಆಫರ್
  • ಏರ್​ಟೆಲ್, ಜಿಯೋಗೆ ಟಕ್ಕರ್ ಕೊಡಲು BSNL ಬಿಗ್ ಪ್ಲಾನ್

ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್​ಎನ್​ಎಲ್) ಇತ್ತೀಚೆಗೆ ಚಂದಾದಾರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾದ ಇದು ಏರ್​ಟೆಲ್, ಜಿಯೋ ಗ್ರಾಹಕರನ್ನು ತನ್ನಡೆಗೆ ಬರಮಾಡಿಕೊಳ್ಳಲು ಹಲವಾರು ಹೊಸ ಹೊಸ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಪ್ಲಾನ್ ಪರಿಚಯ ಮಾಡಿದೆ.

ಇಂಟರ್ನೆಟ್ ಉಪಯೋಗಿಸುವರಿಗಾಗಿ ಬಿಎಸ್​ಎನ್​ಎಲ್ 999 ರೂಪಾಯಿಯ ಹೊಸ ಪ್ಲಾನ್ ಪರಿಚಯಿಸಿದೆ. ಇದನ್ನು ಗ್ರಾಹಕರು ರಿಚಾರ್ಜ್ ಮಾಡಿಕೊಂಡರೇ 3 ತಿಂಗಳವರೆಗೆ ಇಂಟರ್ನೆಟ್ ಸಿಗುತ್ತದೆ. ಇದು ಒಟ್ಟು 3600 GB ಡೇಟಾವನ್ನು ಒಳಗೊಂಡಿರುತ್ತದೆ, ಅಂದರೆ ನೀವು ಪ್ರತಿ ತಿಂಗಳು 1200 GB ಡೇಟಾವನ್ನು ಬಳಕೆ ಮಾಡಬಹುದು. ಈ ಇಂಟರ್ನೆಟ್ 25 ಎಂಬಿಪಿಎಸ್ ವೇಗದಲ್ಲಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಆನಂದಿಸಬಹುದು.

ಇದನ್ನೂ ಓದಿ: 90 ಸಾವಿರ ಕಾರುಗಳನ್ನು ಹಿಂಪಡೆಯಲು ಮುಂದಾದ ಹೋಂಡಾ ಕಂಪನಿ? ಇದರಲ್ಲಿ ನಿಮ್ಮ ಕಾರು ಇದೆಯಾ? ಪರಿಶೀಲಿಸಿ

publive-image

ತಿಂಗಳಿಗೆ 1200 GB ಡೇಟಾ ಬಳಸಿದರೆ ಡೇಟಾ ವೇಗ 4 ಎಂಬಿಪಿಎಸ್​ಗೆ ಕಡಿಮೆ ಆಗುತ್ತದೆ. ಈ ಹೊಸ ಬ್ರಾಡ್‌ಬ್ಯಾಂಡ್ ಡೀಲ್ ಈಗ ಎಲ್ಲೆಡೆಯು ಬಳಕೆಯಲ್ಲಿದೆ. ನೀವು ಬಿಎಸ್​ಎನ್​ಎಲ್ ಗ್ರಾಹಕರು ಆಗಿದ್ದರೇ ಇದನ್ನು ಉಪಯೋಗಿಸಿಕೊಳ್ಳಬಹುದು. ಆ್ಯಪ್​ನಲ್ಲೂ ಈ ಆಫರ್ ಲಭ್ಯ ಇದೆ. ಇದು ಅಲ್ಲದೇ 1800-4444ಗೆ ಕರೆ ಮಾಡುವ ಮೂಲಕ ಲಾಭ ಪಡೆಯಬಹುದು.

ಬಿಎಸ್​ಎನ್​ಎಲ್ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದು ಇದಕ್ಕಾಗಿ ಇತ್ತೀಚೆಗೆ, ಸುಮಾರು 51,000 ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದ್ದಾರೆ. ಇದು ಅವರ ಬಳಕೆದಾರರಿಗೆ ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸಲು ಸಹಾಯವಾಗುತ್ತಿದೆ. ಹೀಗಾಗಿ ಹೆಚ್ಚಿನವರು ಬಿಎಸ್​​ಎನ್​​ಎಲ್​ ಕಡೆಗೆ ಹೋಗುತ್ತಿದ್ದಾರೆ.


">December 6, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment