/newsfirstlive-kannada/media/post_attachments/wp-content/uploads/2024/10/BSNL-1-1.jpg)
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇದೀಗ ಹೊಸ ಲೋಗೋ ಪರಿಚಯಿಸಿದೆ. ಕಂಪನಿ ಈಗಾಗಲೇ 5G ಸೇವೆಯ ತಯಾರಿಯಲ್ಲಿದ್ದು, ಈ ಸಮಯದಲ್ಲಿ ನೂತನ ಲೋಗೋವನ್ನು ಅನಾವರಣಗೊಳಿಸಿದೆ. ಸದ್ಯದಲ್ಲೇ 5G ಸೇವೆಯನ್ನು ಭಾರತೀಯರಿಗೆ ಒದಗಿಸಲಿದೆ.
ಬಿಎಸ್ಎನ್ಎಲ್ನ 4G ಸೇವೆ ಪ್ರಸ್ತುತ ಆಯ್ದ ವಲಯಗಳಲ್ಲಿ ಲಭ್ಯವಿದೆ. ಹೀಗಾಗಿ ಕಂಪನಿಯು ದೇಶದಾದ್ಯಂತ ರೋಲ್ಔಟ್ ಪೂರ್ಣಗೊಳಿಸಿದೆ. ಇದರ ಜೊತೆ ಜೊತೆಗೆ ಟೆಲಿಕಾಂ ಕಂಪನಿಯು ಬಳಕೆದಾರರ ಅನುಭವ ಸುಧಾರಿಸುವ ಉದ್ದೇಶದಿಂದ ಹೊಸ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಫೈಬರ್ ಇಂಟರ್ನೆಟ್ ಗ್ರಾಹಕರಿಗಾಗಿ ವೈ-ಫೈ ರೋಮಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ಹೆಚ್ಚಿನ ಶುಲ್ಕವಿಲ್ಲದೆ ಬಿಎಸ್ಎನ್ಎಲ್ ಹಾಟ್ಸ್ಪಾಟ್ಗಳಲ್ಲಿ ವೇಗದ ಇಂಟರ್ನೆಟ್ ಒದಗಿಸುತ್ತದೆ. ಅದರ ಮೂಲಕ ಡೇಟಾ ವೆಚ್ಚ ಕಡಿಮೆ ಮಾಡುತ್ತಿದೆ.
ಬಿಎಸ್ಎನ್ಎಲ್ ಈಗಾಗಲೇ ಹೊಸ ಫೈಬರ್ ಆಧಾರಿತ ಟಿವಿ ಸೇವೆಯನ್ನು ಘೋಷಿಸಿದೆ. 500ಕ್ಕೂ ಹೆಚ್ಚು ಲೈವ್ ಚಾನೆಲ್ಗಳನ್ನು ನೀಡುತ್ತಿದೆ. ಎಲ್ಲಾ ಫೈಬರ್ ಇಂಟರ್ನೆಟ್ ಚಂದಾದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಳಸುವ ಅವಕಾಶ ನೀಡಿದೆ.
ಇದನ್ನೂ ಓದಿ: Cyclone Dana: ಸ್ಮಾರ್ಟ್ಫೋನ್ನಲ್ಲಿ ಚಂಡಮಾರುತ ಚಲನೆಯನ್ನೇ ಟ್ರ್ಯಾಕ್ ಮಾಡಿ! ಹೇಗೆ ಗೊತ್ತಾ?
ಆಟೋಮ್ಯಾಟಿಕ್ ಕಿಯೋಸ್ಕ್ಗಳನ್ನು ಬಿಎಸ್ಎನ್ಎಲ್ ಪರಿಚಯಿಸಿದೆ. ಇದರ ಮೂಲಕ ತಮ್ಮ ಸಿಮ್ ಕಾರ್ಡ್ ಖರೀದಿಸುವುದನ್ನು ಮತ್ತು ಅಪ್ಗ್ರೇಡ್ ಅಥವಾ ಬದಲಾಯಿಸುವುದನ್ನು ಸುಲಭಗೊಳಿಸಿದೆ.
ಬಿಎಸ್ಎನ್ಎಲ್ 5ಜಿ ನೆಟ್ವರ್ಕ್ ಅನ್ನು ಒದಗಿಸಲು C-DACನೊಂದಿಗೆ ಕೈಜೋಡಿಸಿದೆ. ಇದು ಹೊಸ ಸ್ವದೇಶಿ ತಂತ್ರಜ್ಞಾನ ಮತ್ತು ಸುಧಾರಿತ ನೆಟ್ವರ್ಕ್ ಒದಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಬೀಬಿ.. ಉಬರ್ನಲ್ಲಿ ಇನ್ಮುಂದೆ ಒಂಟೆ ರೈಡ್ ಮಾಡ್ಬೋದು!
ಇದಲ್ಲದೆ ಬಿಎಸ್ಎನ್ಎಲ್ ಭಾರತದ ಮೊದಲ ಡೈರೆಕ್ಟ್-ಟು-ಡಿವೈಸ್ ಸಂಪರ್ಕವನ್ನು ಪ್ರಾರಂಭಿಸಿದೆ. ಇದು ಮೊಬೈಲ್ ನೆಟ್ವರ್ಕ್ ಮತ್ತು ಉಪಗ್ರಹದ ಸಂಯೋಜಿಸಿ ಕಾರ್ಯನಿರ್ಮಹಿಸುತ್ತದೆ. ಡಿಜಿಟಲ್ ಪಾವತಿಯಂತಹ ಸೇವೆಯನ್ನು ಒದಗಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ