newsfirstkannada.com

‘ಪಕ್ಷದಲ್ಲಿದ್ದು ಕೆಲ್ಸ ಮಾಡೋದಾದ್ರೆ ಮಾಡು’ ರೇಣುಕಾಚಾರ್ಯಗೆ ಬಿಜೆಪಿಯಿಂದ ಹೊರ ಹಾಕುವ ಎಚ್ಚರಿಕೆ ಕೊಟ್ರಂತೆ BSY

Share :

Published March 20, 2024 at 9:19am

    ರೇಣುಕಾಚಾರ್ಯಗೆ ಎಚ್ಚರಿಕೆಯ ಕರೆ ಮಾಡಿದ ಬಿಎಸ್​ವೈ

    ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ ಹೈಕಮಾಂಡ್​

    ನ್ಯೂಸ್ ಫಸ್ಟ್ ಗೆ ಉನ್ನತ ಮೂಲಗಳಿಂದ ಮಾಹಿತಿ

ದಾವಣಗೆರೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಾಸಕ ರೇಣುಕಾಚಾರ್ಯಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ನ್ಯೂಸ್ ಫಸ್ಟ್ ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಅವರನ್ನು ಪಕ್ಷದಿಂದ ಹೊರ ಹಾಕುವ ಬಿಎಸ್​ವೈ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾಚಾರ್ಯಗೆ ಕರೆ ಮಾಡಿದ ಬಿಎಸ್​​ವೈ, ಪಕ್ಷದಲ್ಲಿ ಇದ್ದು ಕೆಲಸ ಮಾಡುವುದಾದರೆ ಮಾಡು. ಹೈಕಮಾಂಡ್ ನಾಯಕರು ಕೂಡ ಕರೆ ಮಾಡಿ ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ್ದಾರೆ. ಇಲ್ಲ ಬೇರೆ ಯಾವುದಾದರೂ ಪಕ್ಷಕ್ಕೆ ನೀನು ಹೋಗು ಎಂದು ನೇರವಾಗಿ ಎಚ್ಚರಿಕೆ ನೀಡಲಾಗಿದೆ ಎಂಬ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.

ಸಂಸದ ಸಿದ್ದೇಶ್ವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ರೇಣುಕಾಚಾರ್ಯ ಸಿಟ್ಟಾಗಿದ್ದರು. ಬಹಿರಂಗ ಟಿಕೆಟ್ ಬದಲಿಸುವಂತೆ ಅತೃಪ್ತರ ತಂಡ ಕಟ್ಟಿಕೊಂಡು ಸಭೆ ನಡೆಸುತಿದ್ದರು. ಟಿಕೆಟ್ ಘೋಷಣೆಯಾದ ಮೇಲೆ ಹೈಕಮಾಂಡ್ ಗೆ ಟಿಕೆಟ್ ಬದಲಿಸುವಂತೆ ರೇಣುಕಾಚಾರ್ಯ ಟೀಮ್ ಕೇಳಿದ್ದರು.

ಇದೇ ವಿಚಾರವಾಗಿ ರೇಣುಕಾಚಾರ್ಯ ಟೀಮ್ ಸಭೆ ಸೇರಿದ್ದಕ್ಕೆ ಹೈಕಮಾಂಡ್​ಗೂ ದೂರು ಹೋಗಿತ್ತು. ದಾವಣಗೆರೆ ಗೊಂದಲ ಸರಿಪಡಿಸುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಸೂಚನೆ ಬಂದಿತ್ತು.

ಅತ್ತ ದಾವಣಗೆರೆ ಬಿಜೆಪಿ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜಿ ಸಂಧಾನ ಮಾಡಿಸುವಂತೆ ಕೇಳಿಕೊಂಡಿದ್ದರು. ಅವರು ಏನಾದ್ರೂ ಮಾಡಿಕೊಳ್ಳಿ ನಾನು ಬರೋದಿಲ್ಲ. ನೀವು ಚುನಾವಣೆ ಕೆಲಸ ಮಾಡಿ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಸೂಚನೆಯೂ ನೀಡಿದ್ದರು ಎನ್ನಲಾಗುತ್ತಿದೆ. ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಬಿಎಸ್​ವೈ ರೇಣುಕಾಚಾರ್ಯಾಗೆ ಕರೆ ಮಾಡಿ ಕ್ಲಾಸ್​ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಸಿಟ್ಟೇಕೆ?

1) ಸರ್ವೇ ಆಧಾರ ಮೇಲು ಟಿಕೆಟ್ ಘೋಷಣೆ ಮಾಡಿದ್ರು ಟಿಕೆಟ್ ಬದಲಿಸುವಂತೆ ಕೇಳಿದ್ದ ರೇಣುಕಾಚಾರ್ಯ
2) ಅತೃಪ್ತರ ತಂಡ ಕಟ್ಟಿದ್ದೇ ರೇಣುಕಾಚಾರ್ಯ ಅನ್ನೋ ಮಾಹಿತಿ
3) ಕಾಂಗ್ರೆಸ್ ಸೇರಲು ಹೋಗಿದ್ದ ರೇಣುಕಾಚಾರ್ಯ ಶಾಮನೂರು ಮನೆಗೆ ಭೇಟಿ ನೀಡಿದ್ರು ಅವರ ಪರವಾಗಿ ಕೆಲಸ ಮಾಡುತಿದ್ದಾರೆ ಅಂತ ದೂರು
4) ಸಭೆ ಸೇರಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಬಗ್ಗೆ ಗಮನಿಸುತ್ತಿರುವ ಹೈಕಮಾಂಡ್
5) ಯಾವುದೇ ಸಂಧಾನಕ್ಕೆ ಬಗ್ಗದೆ ಸಭೆ ಮುಂದುವರೆಸಿದ್ದಕ್ಕೆ ಸಿಟ್ಟಾಗಿರೋ ಹೈಕಮಾಂಡ್

ಸದ್ಯ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಯು ಹತ್ತಿರ ಬರುತ್ತಿದೆ. ಮತದಾನ ಪ್ರಚಾರ ಶುರುವಾಗಿದೆ. ಹೀಗಿರುವಾಗ ದಾವಣಗೆರೆ ಗೊಂದಲ ಹೈಕಮಾಂಡ್​ಗೆ ಹೋಗಿದ್ದು, ಇದೀಗ ರೇಣುಕಾಚಾರ್ಯಗೆ ಮಾಜಿ ಸಿಎಂ ಬಿಎಸ್​ವೈ ಕ್ಲಾಸ್​ ತೆಗೆದುಕೊಂಡಿದ್ದಾರೆಂದು ನ್ಯೂಸ್​ ಫಸ್ಟ್​ಗೆ ಉನ್ನತ ಮೂಲಗಳಿಂದ ಮಾಹಿತಿ ದೊಡರೆತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಕ್ಷದಲ್ಲಿದ್ದು ಕೆಲ್ಸ ಮಾಡೋದಾದ್ರೆ ಮಾಡು’ ರೇಣುಕಾಚಾರ್ಯಗೆ ಬಿಜೆಪಿಯಿಂದ ಹೊರ ಹಾಕುವ ಎಚ್ಚರಿಕೆ ಕೊಟ್ರಂತೆ BSY

https://newsfirstlive.com/wp-content/uploads/2024/03/BSY-1-1.jpg

Load More