newsfirstkannada.com

IPL ಬೆಟ್ಟಿಂಗ್​ನಿಂದಾಗಿ 10 ಲಕ್ಷ ರೂಪಾಯಿ ಸಾಲ.. ಬಿಟೆಕ್​ ವಿದ್ಯಾರ್ಥಿ ಆತ್ಮಹತ್ಯೆ

Share :

Published April 28, 2024 at 2:27pm

    ಲೋನ್​ ಆ್ಯಪ್​ ಮೂಲಕ 10 ಲಕ್ಷ ರೂಪಾಯಿ ಸಾಲ

    ಯಾವ ತಂಡದ ಪರವಾಗಿ ಬೆಟ್ಟಿಂಗ್​ ಆಡಿದ್ದನು ಗೊತ್ತಾ?

    ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ

IPL ಬೆಟ್ಟಿಂಗ್​ನಿಂದಾಗಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ವಿನೀತ್​ ಎಂದು ಗುರುತಿಸಲಾಗಿದೆ.

ವಿನೀತ್​ ಬಿಟೆಕ್​ ವಿದ್ಯಾರ್ಥಿಯಾಗಿದ್ದು, ಸದಾಶಿವಪೇಟೆಯ ಸಂಗರೆಡ್ಡಿ ಜಿಲ್ಲೆಯವನಾಗಿದ್ದಾನೆ. ಈತ ಆನ್​​ಲೈನ್​ ಐಪಿಎಲ್​ ಬೆಟ್ಟಿಂಗ್​ನಲ್ಲಿ 10 ಲಕ್ಷ ಕಳೆದುಕೊಂಡಿದ್ದನು.

ಅಚ್ಚರಿ ಸಂಗತಿ ಎಂದರೆ ಐಪಿಎಲ್​ ಬೆಟ್ಟಿಂಗ್​ಗಾಗಿ ವಿನೀತ್​ ಲೋನ್​ ಆ್ಯಪ್​ ಮೂಲಕ ಸಾಲ ಪಡೆದುಕೊಂಡಿದ್ದನು. ಆದರೆ ಐಪಿಎಲ್​ ಗೋಜಿಗೆ ಬಿದ್ದು ಬೆಟ್ಟಿಂಗ್​ ಮೇಲೆ ಬೆಟ್ಟಿಂಗ್​ ಕಟ್ಟುತ್ತಾ ಕೊನೆಗೆ 10 ಲಕ್ಷದವರೆಗೆ ಸಾಲ ಮಾಡಿದ್ದಾನೆ.

ಇದನ್ನೂ ಓದಿ: ಒಂದೇ ದಿನ ತಂದೆ-ಮಗ ಸಾವು.. ಅಪ್ಪನ ಸಾವಿನ ನೋವಿನಲ್ಲಿ ಕಣ್ಣು ಮುಚ್ಚಿದ ಪುತ್ರ 

ಕೊನೆಗೆ ಸಾಲ ತೀರಿಸಲು ಹಣವಿಲ್ಲದೆ ವಿನೀತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಈತನ ಸಾವಿಗೆ ಆತನ ಪೋಷಕರು ಕಣ್ಣಿರು ಹಾಕುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ಬೆಟ್ಟಿಂಗ್​ನಿಂದಾಗಿ 10 ಲಕ್ಷ ರೂಪಾಯಿ ಸಾಲ.. ಬಿಟೆಕ್​ ವಿದ್ಯಾರ್ಥಿ ಆತ್ಮಹತ್ಯೆ

https://newsfirstlive.com/wp-content/uploads/2024/04/Telangana-1-1.jpg

Load More