ಯುವತಿ ಖಾಸಗಿ ಅಂಗ ಮುಟ್ಟಿ ಹೋದ ಕಾಮುಕನ ಸುಳಿವು.. ಬಿಟಿಎಂ ಲೇಔಟ್​ ಕೇಸ್‌ಗೆ ರೋಚಕ ಟ್ವಿಸ್ಟ್‌!

author-image
admin
Updated On
ಯುವತಿ ಖಾಸಗಿ ಅಂಗ ಮುಟ್ಟಿ ಹೋದ ಕಾಮುಕನ ಸುಳಿವು.. ಬಿಟಿಎಂ ಲೇಔಟ್​ ಕೇಸ್‌ಗೆ ರೋಚಕ ಟ್ವಿಸ್ಟ್‌!
Advertisment
  • ಯುವತಿ ಖಾಸಗಿ ಅಂಗ ಮುಟ್ಟಿ ಯುವಕನ ವಿಕೃತಿ ಮೆರೆದಿದ್ದ
  • ಬಿಟಿಎಂ ಲೇಔಟ್​ನ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದ್ದ ಘಟನೆ
  • ಪೊಲೀಸರಿಂದ 300ಕ್ಕೂ ಹೆಚ್ಚು CCTV ದೃಶ್ಯಗಳಲ್ಲಿ ಹುಡುಕಾಟ

ಬೆಂಗಳೂರು: ಮೆಲ್ಲಗೆ ಯುವತಿ ಹಿಂದೆ ಬಂದು ಖಾಸಗಿ ಅಂಗ ಮುಟ್ಟಿ ಓಡಿ ಹೋಗಿರುವ ಕಾಮುಕನ ಸೆರೆ ಹಿಡಿಯೋ ಸಾಧ್ಯತೆ ಇದೆ. ಬಿಟಿಎಂ ಲೇಔಟ್​ನ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದ್ದ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂದಿನ ಸಿಸಿಟಿವಿ ವಿಡಿಯೋ ವೈರಲ್ ಮಾಡ್ತಿರೋ ಜನರು ಆರೋಪಿ ಸಿಕ್ಕರೆ ತಕ್ಷಣ ಮಾಹಿತಿ ಕೊಡಲು ಮನವಿ ಮಾಡುತ್ತಿದ್ದಾರೆ.

ಬೆಂಗಳೂರಲ್ಲಿ ಮಧ್ಯರಾತ್ರಿ ಯುವತಿ ಖಾಸಗಿ ಅಂಗ ಮುಟ್ಟಿ ಯುವಕನ ವಿಕೃತಿ ಮೆರೆದ ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ತೀವ್ರ ಚರ್ಚೆಯಾದ ಬಳಿಕ ಸುದ್ದಗುಂಟೆ ಪಾಳ್ಯದಲ್ಲಿ ಆರೋಪಿ ಓಡಾಟದ ಮತ್ತಷ್ಟು ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ.

publive-image

ಘಟನೆ ನಡೆದು ಒಂದು ವಾರವಾದ್ರೂ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ನ್ಯೂಸ್​ ಫಸ್ಟ್​ ಚಾನೆಲ್‌​ಗೆ ಬಿಟಿಎಂ ಲೇಔಟ್​ನ ಎಸ್​.ಜಿ.ಪಾಳ್ಯದ ಸಿಸಿಟಿವಿಯ EXCLUSIVE ದೃಶ್ಯಗಳು ಲಭ್ಯವಾಗಿದೆ. ಕಾಮುಕ ಯುವಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ನಂತರದ ದೃಶ್ಯ ಇದಾಗಿದೆ.

ಇದನ್ನೂ ಓದಿ: ಮಗಳ ಭಾವಿ ಗಂಡನ ಮೇಲೆ ಅಮ್ಮನಿಗೆ ಲವ್​.. ರಾತ್ರೋರಾತ್ರಿ ಅಳಿಯನ ಜೊತೆ ಅತ್ತೆ ಪರಾರಿ..! 

publive-image

ಯುವತಿ ಖಾಸಗಿ ಅಂಗ ಮುಟ್ಟಿದ ಬಳಿಕ ಅವ್ರು ಕಿರುಚಾಡುತ್ತಿದ್ದಂತೆ ಅಲ್ಲಿಂದ ಕಾಲ್ತಿತ್ತಿದ್ದಾನೆ. ಅಲ್ಲಿಂದ ಸ್ವಲ್ಪ ದೂರಕ್ಕೆ ಓಡಿ ಹೋಗಿ ನಂತರ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಬಿಟಿಎಂ ಲೇಔಟ್‌ನ ಎಸ್​.ಜಿ.ಪಾಳ್ಯದಲ್ಲಿರುವ 300ಕ್ಕೂ ಹೆಚ್ಚು CCTV ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

publive-image

ಯುವತಿಯನ್ನು ಬಲವಂತವಾಗಿ ಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡಿರುವ ಯುವಕ ಗಾಬರಿಯಿಂದ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಚಲನವಲನದ ಸಿಸಿಟಿವಿಗಳ ಆಧಾರದ ಮೇಲೆ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment