newsfirstkannada.com

ಈ ಸಲ ಏನೂ ಇಲ್ಲ ಅಂತ ಹೇಳಂಗೇ ಇಲ್ಲ.. 2019 ಮಧ್ಯಂತರ ಬಜೆಟ್​ನಲ್ಲಿ ಆಗಿದ್ದವು 5 ದೊಡ್ಡ ಘೋಷಣೆಗಳು..!

Share :

Published February 1, 2024 at 8:42am

Update February 1, 2024 at 8:44am

    ಸಂಸತ್​ನಲ್ಲಿ ಇವತ್ತು 2024ನೇ ಸಾಲಿನ ಬಜೆಟ್ ಮಂಡನೆ

    ಸಚಿವೆ ನಿರ್ಮಲಾ ಸೀತಾರಾಮನ್​​ರಿಂದ ಬಜೆಟ್ ಮಂಡನೆ

    ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಲಾಗಿದೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇವತ್ತು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಲೆಕ್ಕದ ಮೇಲೆ ಹಲವು ನಿರೀಕ್ಷೆಗಳಿವೆ. ಇದರ ಮಧ್ಯೆ, ಈ ಬಾರಿಯ ಬಜೆಟ್​ ಮೇಲೆ ದೊಡ್ಡ ದೊಡ್ಡ ಘೋಷಣೆಗಳು ಇಲ್ಲ. ಜೂನ್​ನಲ್ಲಿ ನಡೆಯಲಿರುವ ಪೂರ್ಣಾವಧಿ ಬಜೆಟ್​ನಲ್ಲಿ ಅವೆಲ್ಲ ಇರಲಿವೆ ಎನ್ನಲಾಗುತ್ತಿದೆ. ಚುನಾವಣಾ ಕಾಲದಲ್ಲಿ ಮಂಡನೆಯಾಗುವ ಮಧ್ಯಂತರ ಬಜೆಟ್​​ನಲ್ಲೂ ಈ ಹಿಂದೆ ಮಹತ್ವದ ಯೋಜನೆಗಳು ಘೋಷಣೆಯಾಗಿವೆ. ಹೀಗಾಗಿ ಇವತ್ತಿನ ಬಜೆಟ್​​ ಈಜಿಯಾಗಿ ನೋಡುವಂತಿಲ್ಲ. ಹ್ಯಾಟ್ರಿಕ್ ಗೆಲುವು ಸಾಧಿಸುವ ಕನಸ್ಸಿನಲ್ಲಿರುವ ಮೋದಿ ಟೀಂ, ದೇಶದ ಜನರಿಗೆ ಬಿಗ್​ ಸರ್ಪ್ರೈಸ್ ನೀಡಿದರೂ ಅಚ್ಚರಿ ಇಲ್ಲ!

ಹಾಗೆ ನೋಡಿದರೆ ಮಧ್ಯಂತರ ಬಜೆಟ್​ನಲ್ಲಿ ದೊಡ್ಡ ದೊಡ್ದ ಘೋಷಣೆಗಳು ಇರುವುದಿಲ್ಲ ಎಂದು ಹೇಳೋದು ಕಷ್ಟ. 2019ರಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್​ನಲ್ಲಿ ನಿರೀಕ್ಷೆಗೂ ಮೀರಿ ಯೋಜನೆಗಳು ಘೋಷಣೆಯಾಗಿದ್ದವು, ಪಿಎಂ ಕಿಸಾನ್​ನಿಂದ ಹಿಡಿದು ತೆರಿಗೆಯವರೆಗೆ ಅನೇಕ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಲಾಗಿತ್ತು. 2019ರಲ್ಲಿ ಮಾಡಿದ್ದ ಐದು ಪ್ರಮುಖ ಘೋಷಣೆಗಳು ಇಲ್ಲಿವೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಕೊಡುಗೆ
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಹಣಕಾಸು ಸಚಿವರು 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯಡಿ ರೈತರ ಕೃಷಿ ಚಟುವಟಿಕೆಗೆ ಸಹಾಯ ಮಾಡಲು ವರ್ಷದಲ್ಲಿ ಮೂರು ಕಂತುಗಳಲ್ಲಿ 2000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಅಂದರೆ ರೈತರು ವರ್ಷಕ್ಕೆ 6 ಸಾವಿರ ರೂಪಾಯಿ ಪಡೆಯಲಿದ್ದಾರೆ. ಸುಮಾರು 12 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 2019-20 ಸಾಲಿನಲ್ಲಿ 75 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು.

ಪ್ರಧಾನಮಂತ್ರಿ ಶ್ರಮ ಯೋಗಿ ಮನ್ಧನ್ ಯೋಜನೆ
ಪಿಎಂ-ಎಸ್​ವೈಎಂ (Pradhan Mantri Shram Yogi Maan-dhan) ಯೋಜನೆಯನ್ನು ಪ್ರಧಾನಿ ಮೋದಿ ಅಸಂಘಟಿತ ಕಾರ್ಮಿಕರ ಏಳಿಗೆ ದೃಷ್ಟಿಯಿಂದ ಜಾರಿಗೆ ತಂದರು. ಇದು ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಂಚಣಿಯನ್ನು ನೀಡುತ್ತಿದೆ. ತಿಂಗಳಿಗೆ 100 ರೂಪಾಯಿ ಅಥವಾ 55 ರೂಪಾಯಿ ಆಧಾರದ ಮೇಲೆ 60 ವರ್ಷಗಳ ನಂತರ ತಿಂಗಳಿಗೆ ಮೂರು ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ. 2019 ಫೆಬ್ರವರಿ 15 ರಂದು ಈ ಯೋಜನೆಯನ್ನು ಜಾರಿಗೆ ಗೊಳಿಸಲಾಗಿದ್ದು, 18 ರಿಂದ 40 ವರ್ಷದೊಳಗಿನ ಕಾರ್ಮಿಕರು PMSYM ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು.

ತೆರಿಗೆಯಲ್ಲಿ ಬದಲಾವಣೆ
20019ರ ಮಧ್ಯಂತರ ಬಜೆಟ್​​ ಮಧ್ಯಮ ವರ್ಗದ ತೆರಿಗೆದಾರರಿಗೆ ರಿಲೀಫ್ ನೀಡಿತ್ತು. ಸ್ಯಾಂಡರ್ಡ್​ ಡಿಡಕ್ಷನ್ ಮಿತಿಯನ್ನು ಬರೋಬ್ಬರಿ 10 ಸಾವಿರ ರೂಪಾಯಿಗಳಷ್ಟು ಹೆಚ್ಚಿಸಿತ್ತು. ಈ ಹಿಂದೆ ಇದ್ದ ಸ್ಯಾಂಡರ್ಡ್ ಡಿಡಕ್ಷನ್ 40 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿಗೆ ಏರಿಕೆ ಮಾಡಿತ್ತು.

ಡಿಡಿಎಸ್​​ ಮಿತಿಯಲ್ಲಿ ಹೆಚ್ಚಳ..!
ಬ್ಯಾಂಕ್​ಗಳು ಮತ್ತು ಅಂಚೆ ಕಚೇರಿಗಳಿಂದ ಬರುವ ಉಳಿತಾಯದ ಮೇಲಿನ ಬಡ್ಡಿಯ ಮೇಲೆ ಟಿಡಿಎಸ್​ ಮಿತಿಯನ್ನು ಹೆಚ್ಚಿಸಿತ್ತು. 10 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿಗೆ ಟಿಡಿಎಸ್​ ಅನ್ನು ಏರಿಕೆ ಮಾಡಲಾಗಿತ್ತು. ಬಾಡಿಗೆ ಆದಾಯದ ಮಿತಿಯನ್ನು 1,80,000ನಿಂದ 2,40,000 ರೂಪಾಯಿಗೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಅಂದು ಪ್ರಕಟಿಸಿತ್ತು.

ಉದ್ಯೋಗಕ್ಕೆ ವಿಶೇಷ ಘೋಷಣೆ
ಬಡ ಕುಟುಂಬಗಳ ಅಭ್ಯುದಯಕ್ಕಾಗಿ ಶೇಕಡಾ 10 ರಷ್ಟು ಮೀಸಲಾತಿಯನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 25 ರಷ್ಟು ಸೀಟುಗಳನ್ನು ಮೀಸಲಿಡುವುದಾಗಿ ಘೋಷಣೆ ಮಾಡಲಾಗಿತ್ತು. ದೇಶದ ಬಜೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣೆಗೆ 3 ಲಕ್ಷ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು. 1,58, 658 ಕೋಟಿ ರೂಪಾಯಿ ಹಣವನ್ನು ರೈಲ್ವೇ ಇಲಾಖೆಗೆ ಘೋಷಣೆ ಮಾಡಲಾಗಿತ್ತು.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಸಲ ಏನೂ ಇಲ್ಲ ಅಂತ ಹೇಳಂಗೇ ಇಲ್ಲ.. 2019 ಮಧ್ಯಂತರ ಬಜೆಟ್​ನಲ್ಲಿ ಆಗಿದ್ದವು 5 ದೊಡ್ಡ ಘೋಷಣೆಗಳು..!

https://newsfirstlive.com/wp-content/uploads/2024/02/PM-MODI-6.jpg

Load More