newsfirstkannada.com

Budget-2024: ಕೃಷಿ ಮೇಲೂ ಬಜೆಟ್​​ನಲ್ಲಿ ಒತ್ತು.. ರೈತರಿಗಾಗಿ ಈ ಘೋಷಣೆಗಳನ್ನು ಮಾಡಲಾಗಿದೆ

Share :

Published February 1, 2024 at 12:32pm

    ಹೈನುಗಾರರಿಗೆ ಸಮಗ್ರ ಕಾರ್ಯಕ್ರಮ ರೂಪಿಸುವ ಬಗ್ಗೆ ಘೋಷಣೆ

    11.8 ಕೋಟಿ ರೈತರಿಗೆ ಸರ್ಕಾರದಿಂದ ಆರ್ಥಿಕ ನೆರವು

    ನಾಲ್ಕು ಕೋಟಿ ರೈತರಿಗೆ ಫಸಲ್ ಯೋಜನೆಯ ಲಾಭ

ಪ್ರಧಾನಿ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಮಂಡಿಸಿದರು. ಇದರಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಎಲ್ಲರಿಗೂ ಕಾಳಜಿ ವಹಿಸುವ ಪ್ರಯತ್ನ ಮಾಡಲಾಗಿದೆ.

ಹೈನುಗಾರರಿಗೆ ಸಮಗ್ರ ಕಾರ್ಯಕ್ರಮ

ಕೃಷಿ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಹೈನುಗಾರರಿಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 11.8 ಕೋಟಿ ರೈತರಿಗೆ ಸರ್ಕಾರದ ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಕಿಸಾನ್ ಸಂಪದದಿಂದ 38 ಲಕ್ಷ ರೈತರಿಗೆ ಲಾಭ ಆಗಲಿದೆ. ಆತ್ಮನಿರ್ಭರ ಯೋಜನೆ ಗುರಿ ಅಡಿಯಲ್ಲಿ ಎಣ್ಣೆ ಕಾಳು ಉತ್ಪಾದನೆ ಹೆಚ್ಚಿಸಲಾಗುವುದು ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಕೋಟ್ಯಂತರ ರೈತರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ದೇಶದಾದ್ಯಂತ ಆಹಾರ ಪೂರೈಕೆದಾರರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಯೋಜನೆಯ ಲಾಭವನ್ನು ನಾಲ್ಕು ಕೋಟಿ ರೈತರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget-2024: ಕೃಷಿ ಮೇಲೂ ಬಜೆಟ್​​ನಲ್ಲಿ ಒತ್ತು.. ರೈತರಿಗಾಗಿ ಈ ಘೋಷಣೆಗಳನ್ನು ಮಾಡಲಾಗಿದೆ

https://newsfirstlive.com/wp-content/uploads/2024/02/AGRI.jpg

Load More