newsfirstkannada.com

ಕೈಯಿಂದ ನೇಯ್ದ ವಿಶೇಷ ಸಾರಿ.. ನಿರ್ಮಲಾ ಸೀತಾರಾಮನ್​ ಧರಿಸಿರೋ ಸೀರೆ ವಿಶೇಷತೆ ಏನ್​ ಗೊತ್ತಾ?

Share :

Published July 23, 2024 at 12:01pm

Update July 23, 2024 at 12:13pm

    ಕಳೆದ ವರ್ಷ ಕೆಂಪು ಬಣ್ಣ ಸೀರೆಯಲ್ಲಿ ಕಂಗೊಳಿಸಿದ ಹಣಕಾಸು ಸಚಿವೆ

    ಈ ಬಾರಿ ಬಿಳಿಯ ಬಣ್ಣದ ಸೀರೆ ಧರಿಸಿ ಬಜೆಟ್​ ಮಂಡಿಸುತ್ತಿದ್ದಾರೆ ನಿರ್ಮಲಾ ಸೀತಾರಾಮನ್

    7ನೇ ಬಾರಿಗೆ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್, ದಾಖಲೆ ಬರೆದ ಹಣಕಾಸು ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 7ನೇ ಬಾರಿಗೆ ಬಜೆಟ್​ ಮಂಡಿಸುತ್ತಿದ್ದಾರೆ. ಕೈಯಿಂದ ನೇಯ್ದ ವಿಶೇಷ ಸಾರಿ ಧರಿಸಿಕೊಂಡು ಬಂದ ಅವರು 2024-25ರ ಬಜೆಟ್​ ಮಂಡಿಸುತ್ತಿದ್ದಾರೆ. ಅಂದಹಾಗೆಯೇ ನಿರ್ಮಲಾ ಅವರು ಧರಿಸಿರುವ ಸೀರೆಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

ನಿರ್ಮಲಾ ಸೀತಾರಾಮನ್ ಬಿಳಿಯ ಬಣ್ಣದ ಮತ್ತು ನೇರಳೆ ಬಣ್ಣದ ಪಟ್ಟಿಯಿರುವ ಸೀರೆಯನ್ನು ಧರಿಸಿದ್ದಾರೆ. ಬಿಳಿಯ ಬಣ್ಣದ ಸೀರೆಯ ಮೇಲೆ ಸಣ್ಣ ಗೋಲ್ಡ್ ಪಟ್ಟಿಯನ್ನು ಕಾಣಬಹುದಾಗಿದೆ.

ಇದನ್ನೂ ಓದಿ: BUDGET 2024: ಬಜೆಟ್​​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಗೊತ್ತಾ? ರೈತರಿಗೆ ಸಿಹಿ ಸುದ್ದಿ ಪಕ್ಕಾ!

ನಿರ್ಮಲಾ ಸೀತಾರಾಮನ್​​ರವರು 7ನೇ ಬಾರಿಗೆ ಬಜೆಟ್​ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿವರು ಬರೆದ ದಾಖಲೆಯನ್ನು ಮುರಿದಿದ್ದಾರೆ. ಪ್ರತಿ ಬಜೆಟ್​ಗೂ ವಿಶೇಷ ಸೀರೆಯನ್ನು ಧರಿಸಿಕೊಂಡು ಬಂದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. 2019 ರಲ್ಲಿ ಸೀತಾರಾಮನ್​ರವರು ಬಜೆಟ್ ಮಂಡನೆಗೆ ಗುಲಾಬಿ, ಚಿನ್ನದ ಬಾರ್ಡರ್​​ ಇರುವ ಮಂಗಳಗಿರಿ ಸೀರೆಯಲ್ಲಿ ಧರಿಸಿದ್ದರು.

2020ರಲ್ಲಿ ಹಳದಿ- ಗೋಲ್ಡ್​ ರೇಷ್ಮೆ ಸೀರೆಯನ್ನು ಧರಿಸಿ ಬಂದಿದ್ದರು. ಹಳದಿ ಬಣ್ಣ ಸಮೃದ್ಧಿ ಸಂಕೇತವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ದೇಶದ ಸಂಕೇತವಾಗಿ ಸೀತಾರಾಮನ್​ರವರು ಈ ಸೀರೆ ಧರಿಸಿ ಕಂಗೊಳಿಸಿದ್ದರು.

ಇದನ್ನೂ ಓದಿ: Budget2024: ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್​ಗಳು; ಬಜೆಟ್‌ ಹೈಲೈಟ್ಸ್ ಇಲ್ಲಿದೆ

2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ತೆಲಂಗಾಣದಲ್ಲಿ ತಯಾರಿಸಿದ ಸೀರೆಯನ್ನು ಸೀರೆ ಇದಾಗಿತ್ತು.

2022 ರಲ್ಲಿ ಒಡಿಶಾದ ಬೊಮ್ಕೈ ಸೀರೆಯನ್ನು ಧರಿಸಿ ಬಜೆಟ್​ ಮಂಡನೆ ಮಾಡಿದ್ದರು. ಸೀರೆಯು ಕಂದು ಬಣ್ಣವನ್ನು ಒಳಗೊಂಡಿತ್ತು. ಕಂದು ಮತ್ತು ಕೆಂಪು ಬಣ್ಣವನ್ನು ಸಂಯೋಜಿಸಿ ಈ ಸೀರೆಯನ್ನು ತಯಾರಿಸಲಾಗಿತ್ತು.

ಇದನ್ನೂ ಓದಿ: ಬಜೆಟ್ ಅಷ್ಟೊಂದು ಗೌಪ್ಯವಾಗಿರುವುದು ಹೇಗೆ: ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು ಯಾವುವು..?

ಇನ್ನು ಕಳೆದ ವರ್ಷ ನಿರ್ಮಲಾ ಸೀತಾರಾಮನ್​ರವರು ಕೆಂಪು ಸೀರೆಯನ್ನು ಧರಿಸಿದ್ದರು. ಕಪ್ಪು ಬಾರ್ಡರ್​ ಇರುವ ಚಿನ್ನದ ಬಣ್ಣದ ಸಾರಿಯನ್ನು ಆರಿಸಿಕೊಂಡು ಕಂಗೊಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಯಿಂದ ನೇಯ್ದ ವಿಶೇಷ ಸಾರಿ.. ನಿರ್ಮಲಾ ಸೀತಾರಾಮನ್​ ಧರಿಸಿರೋ ಸೀರೆ ವಿಶೇಷತೆ ಏನ್​ ಗೊತ್ತಾ?

https://newsfirstlive.com/wp-content/uploads/2024/07/Nirmala-Seetharaman-2.jpg

Load More