/newsfirstlive-kannada/media/post_attachments/wp-content/uploads/2024/07/Nirmala-Seetharaman-4.jpg)
2025ರ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್ ಮೇಲೆ ತೆರಿಗೆದಾರರು ಸಾಕಷ್ಟು ನಿರೀಕ್ಷೆಯನ್ನಿಟ್ಟುಜಕೊಂಡು ಕುಳಿತಿದ್ದಾರೆ. ಈ ಬಾರಿ ಟ್ಯಾಕ್ಸ್ ಸ್ಲ್ಯಾಬ್ಗಳಲ್ಲಿ ಇತಿ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಬೆಲೆ ಏರಿಕೆ, ವೈದ್ಯಕೀಯ ಖರ್ಚುಗಳಲ್ಲಿ ಏರಿಕೆ, ಆಹಾರ ಬೆಲೆ ಏರಿಕೆ ಹೀಗೆ ಹಲವು ರೀತಿಯ ಏರಿಕೆಗಳು ಜನರನ್ನು ಅದರಲ್ಲೂ ಹಿರಿಯ ನಾಗರಿಕರನ್ನು ಹೈರಾಣು ಮಾಡಿ ಹಾಕಿವೆ. ಹೀಗಾಗಿ ಈ ಬಾರಿ ಹಿರಿಯ ನಾಗರಿಕರು ಕೇಂದ್ರ ಸರ್ಕಾರದಿಂದ ಒಂದಿಷ್ಟು ನಿರಾಳತೆಯನ್ನು ಬೇಡುತ್ತಿವ. ಅದರಲ್ಲಿ ಪ್ರಮುಖವಾಗಿ 5 ನಿರೀಕ್ಷೆಗಳು ಅವರಲ್ಲಿದೆ/
1. ತೆರಿಗೆ ತುಂಬುವ ವ್ಯವಸ್ಥೆಯಲ್ಲಿ ಸರಳೀಕರಣ
ಈಗಾಗಲೇ 75 ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ವಿಚಾರದಲ್ಲಿ ಹಲವು ವಿನಾಯಿತಿಯನ್ನು ನೀಡಲಾಗಿದೆ. ಒಂದು ವೇಳೆ ಅರಿಗೆ ಪೆನ್ಷನ್ ಹಣದಿಂದ ಮಾತ್ರ ಬಡ್ಡಿ ಬರುವ ಆದಾಯವಿದ್ದರೆ ಅವರಿಗೆ ಟ್ಯಾಕ್ಸ್ ರಿಟರ್ನ್ ತುಂಬುವುದಿರಿಂದ ವಿನಾಯಿತಿ ನೀಡಲಾಗಿದೆ. ಆದರೆ ಕಡಿಮೆ ಅದಕ್ಕಿಂತ ಕಡಿಮೆ ವಯಸ್ಸಿನವರು ಈ ಟ್ಯಾಕ್ಸ್ ತುಂಬುವ ಪ್ರಕ್ರಿಯೆಯನ್ನ ಇನ್ನುಷ್ಟು ಸರಳ ಮಾಡಬೇಕು ಎಂದು ಬಯಸುತ್ತಿದ್ದಾರೆ.
2. ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ
ಸದ್ಯ ಹಿರಿಯ ನಾಗರಿಕರಿಗೆ ನೀಡಲಾಗಿರುವ ಮೂಲ ವಿನಾಯತಿಯನ್ನು ಬದದಲು ಮಾಡಬೇಖಿದೆ. ಹೊಸ ಟ್ಯಾಕ್ಸ್ ರಜಿಮ್ನಲ್ಲಿ ಆದಾಯ ತೆರಿಗೆಯ ಮೇಲಿನ ವಿನಾಯಿತಿಯ ಮಿತಿಯ್ನು ಹೆಚ್ಚಿಸಬೇಕು ಎಂದು ಬೇಡಿಕೆ ಬರುತ್ತಿವೆ.
3. ಉಳಿತಾಯದ ಸ್ಕೀಮ್ ಮೇಲೆ ಹೆಚ್ಚು ಪ್ರಯೋಜನ ನೀಡಬೇಕು
ಹಿರಿಯ ನಾಗರಿಕರು ತಮ್ಮ ಉಳಿತಾಯದಲ್ಲಿ ಪಡೆಯುತ್ತಿರುವ ಆದಾಯ ಅದರಲ್ಲೂ ಪೋಸ್ಟ್ ಆಫೀಸ್ನಲ್ಲಿರುವ ಉಳಿತಾಯ ಖಾತೆಯಲ್ಲಿ ಅವರು ಹೆಚ್ಚು ಉಳಿತಾಯ ಪ್ರಮುಖ ಭಾಗ. ಈ ಉಳಿತಾಯದ ಮೇಲೆ ಹೆಚ್ಚು ವಿನಾಯಿತಿಯ್ನು ನೀಡವು ಮೂಲಕ ಅವರ ಹಣಕಾಸಿನ ಒತ್ತಡಗಳಿಗೆ ರಿಲೀಫ್ ನೀಡಬೇಕು ಎಂಬುದು ಅವರ ಬಯಕೆ
4. ಟಿಡಿಎಸ್ ಸರಿಹೊಂದಿಸಬೇಕು
ಉಳಿತಾಯದ ಹಣದ ಮೇಲೆ ಬರುವ ಬಡ್ಡಿಯ ಮೇಲೆ ಹಲವು ಬ್ಯಾಂಕ್ಗಳು ಟಿಡಿಎಸ್ ನೆಪದಲ್ಲಿ ಹಣವನ್ನು ಕಡಿತ ಮಾಡುತ್ತಿವೆ. ಈ ಬಾರಿಯ ಬಜೆಟ್ನಲ್ಲಿ ಇದರ ಮಿತಿಯನ್ನು ಹೆಚ್ಚಿಸಬೇಕು ಎಂಬುದು ಹಿರಿಯ ನಾಗರಿಕರ ಬೇಡಿಕೆ ಇದೆ. ಸದ್ಯ ಇದರ ಮಿತಿ 50 ಸಾವಿರ ರೂಪಾಯಿಗಳಷ್ಟಿದ್ದು ಅದನ್ನು ಇನ್ನೂ ಹೆಚ್ಚಿಗೆ ಏರಿಸಬೇಕು ಎಂಬುದು ಅವರ ಬೇಡಿಕೆ
5. ವೈದ್ಯಕೀಯ ಖರ್ಚುಗಳ ಮೇಲೆ ಕಡಿತ
ಹಿರಿಯ ನಾಗರಿಕರು ಅತಿಹೆಚ್ಚು ಖರ್ಚು ಮಾಡುವುದೇ ವೈದ್ಯಕೀಯ ಸೇವೆಗಳಿಗಾಗಿ ಅವರ ಇನ್ಶೂರೆನ್ಸ್ ಪ್ರಿಮಿಯಮ್ ಹಾಗೂ ನಿತ್ಯ ವೈದ್ಯಕೀಯರ ಖರ್ಚುಗಳು ಇವುಗಳ ಮೇಲೆ ಈ ಬಾರಿಯ ಬಜೆಟ್ ಹೆಚ್ಚು ಕಾಳಜಿವಹಿಸಬೇಕು ಎಂದು ಅವರ ಬೇಡಿಕೆಯಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ