ಭಾರತದಲ್ಲಿ ಮೊದಲ ಬಜೆಟ್ ಮಂಡನೆ ಮಾಡಿದವರು ಭಾರತದವರೇ ಅಲ್ಲ!
ಸ್ವತಂತ್ರ ಭಾರತದ ಮೊಟ್ಟ ಮೊದಲ ಬಜೆಟ್ ಮಂಡನೆ ಮಾಡಿದ್ದು ಯಾರು..?
80 ಬಜೆಟ್ಗಳಲ್ಲಿ ಅತ್ಯಂತ ಪುಟ್ಟದಾದ ಬಜೆಟ್ ಭಾಷಣ ಮಾಡಿದ್ದು ಇವರೇ!
ನವದೆಹಲಿ: ಬಜೆಟ್ ಸಾಮಾನ್ಯರಲ್ಲೂ ಹಾಸುಹೊಕ್ಕಾಗಿರುವ ಪದ. ಮನೆಯಲ್ಲೂ ತಿಂಗಳ ಖರ್ಚು ವೆಚ್ಚಕ್ಕೂ ಈ ತಿಂಗಳ ಬಜೆಟ್ ಎಂದು ಕರೆಯುತ್ತೇವೆ. ಸ್ನೇಹಿತರಿಗೆ ಒಂದು ಟೀ ಕುಡಿಸುವಾಗಲೂ ಕೂಡ ‘ಬಜೆಟ್ ಎಲ್ಲಾ ಖಾಲಿ ಬಿಡಪ್ಪ’ ಅನ್ನೋ ಮಾತುಗಳು ಸಾಮಾನ್ಯವಾಗಿ ಬರುತ್ತವೆ. ಹಾಗಿದ್ರೆ ಏನಿದು ಬಜೆಟ್, ಭಾರತದಲ್ಲಿ ಇದರ ಆರಂಭ ಆಗಿದ್ದು ಹೇಗೆ? ಭಾರತದಲ್ಲಿ ಮೊದಲ ಬಜೆಟ್ ಮಂಡನೆ ಆಗಿದ್ದು ಯಾವಾಗ ಮತ್ತು ಮಂಡಿಸಿದವರು ಯಾರು? ಇದೆಲ್ಲದರ ಇಂಟರೆಸ್ಟಿಂಗ್ ವಿಷಯಗಳ ನಿಮ್ಮ ಮುಂದೆ.
ಬಜೆಟ್ ಅನ್ನುವ ಪದ ಫ್ರೆಂಚ್ನ ಬೌಗೆಟ್ಟೆ (bougette) ಅನ್ನೋ ಪದದಿಂದ ಪ್ರೇರಣೆಯಾಗಿ ಬಂದ ಪದ. ಬೌಗೆಟ್ಟೆ ಅಂದ್ರೆ ಚರ್ಮದ ಚೀಲ ಅಥವಾ ಪೌಚ್ ಎಂದು ಅರ್ಥ. ಅದೇ ಮುಂದೆ ಬಜೆಟ್ ಆಗಿ ಬದಲಾಯ್ತು. ಜನ ಸಾಮಾನ್ಯರಲ್ಲಿ ನಾಲಿಗೆ ತುದಿಯಲ್ಲಿ ಆಡತೊಡಗಿತು. ಬಜೆಟ್ ಪದವನ್ನು ಸಾಮಾನ್ಯವಾಗಿ ಹಣಕಾಸಿನ ವಿಚಾರಕ್ಕೆ ತೆರಿಗೆ ವಿಚಾರದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಕೇಂದ್ರದಲ್ಲಿ ಯಾರು ಹಣಕಾಸು ಸಚಿವರಾಗಿರುತ್ತಾರೋ ಅವರು ಬಜೆಟ್ ಮಂಡಿಸುತ್ತಾರೆ. ರಾಜ್ಯಗಳಲ್ಲಿ ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಸುಪರ್ಧಿಯಲ್ಲಿಯೇ ಹಣಕಾಸು ಇಲಾಖೆ ಇರುವುದರಿಂದ ಅವರೇ ಬಜೆಟ್ ಮಂಡಿಸುತ್ತಾರೆ. ಆದ್ರೆ ಭಾರತದಲ್ಲಿ ಮೊದಲು ಬಜೆಟ್ ಮಂಡಿಸಿದ್ದು ಭಾರತೀಯರೇ ಅಲ್ಲ. ಭಾರತ ಸ್ವಾತಂತ್ರ್ಯ ಪೂರ್ವಕ್ಕೂ ಮೊದಲೇ ಬಜೆಟ್ ಮಂಡನೆ ಎಂಬ ಬೆಳವಣಿಗೆಯನ್ನು ಕಂಡಿತ್ತು.
ಇದನ್ನೂ ಓದಿ: PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?
1860 ರಲ್ಲಿಯೇ ಭಾರತದಲ್ಲಿ ಮೊದಲ ಬಾರಿ ಬಜೆಟ್ ಮಂಡನೆ
ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಅನ್ನೋದು ಪರಿಚಯಕ್ಕೆ ಬಂದಿದ್ದು 7ನೇ ಏಪ್ರಿಲ್ 1860ರಲ್ಲಿ .1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದಾಗಿ ಇಡೀ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕೋಟೆಯ ಕಲ್ಲುಗಳು ಒಂದೊಂದೇ ಕಳಚಿ ಬೀಳಲು ಆರಂಭವಾದವು. ಇಡೀ ಬ್ರಿಟನ್ ವಸಾಹತುಶಾಹಿ ಒಂದು ಬಾರಿ ಅಲ್ಲಾಡಿ ಹೋಗಿತ್ತು. ಇದನ್ನು ನಿಯಂತ್ರಣಕ್ಕೆ ತರಲು ಅಂತ ಬ್ರಿಟನ್ ರಾಣಿ ವಿಕ್ಟೋರಿಯಾ ಭಾರತಕ್ಕೆ ಹೊಸ ಬ್ರಿಟನ್ ಅಧಿಕಾರಿಯೊಬ್ಬರನ್ನು ಕಳುಹಿಸಿದ್ರು. ಅವರ ಹೆಸರೇ ಜೇಮ್ಸ್ ವಿಲ್ಸನ್, ಇಂಗ್ಲೆಂಡಿನ್ ಹೌಸ್ ಆಫ್ ಕಾಮನ್ನಲ್ಲಿ ಎಂಪಿಯಾಗಿದ್ದ ವಿಲ್ಸನ್, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದ. ಭಾರತದಲ್ಲಿ ಹೊಸ ತೆರಿಗೆ ನೀತಿಯನ್ನು ತರುವ ಜವಾಬ್ದಾರಿಯನ್ನು ವಿಲ್ಸನ್ಗೆ ನೀಡಲಾಗಿತ್ತು. ಅದರ ಜೊತೆಗೆ ಕಾಗದದ ಕರೆನ್ಸಿಯನ್ನು ಪರಿಚಯಿಸುವ ಜವಾಬ್ದಾರಿಯನ್ನು ಕೂಡ ವಿಲ್ಸನ್ಗೆ ನೀಡಲಾಗಿತ್ತು. ಏಪ್ರಿಲ್ 7 1860ರಲ್ಲಿ ಮೊದಲ ವಸಾಹತುಶಾಹಿ ಬಜೆಟ್ ಭಾರತದಲ್ಲಿ ಮಂಡನೆಯಾಯ್ತು. ಆದಾಯ ತೆರಿಗೆಯನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದದ್ದೇ ಈ ವಿಲ್ಸನ್. 200 ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿದವರು ತೆರಿಗೆ ಕಟ್ಟುವ ನೀತಿಯನ್ನು ವಿಲ್ಸನ್ ಜಾರಿಗೆ ತಂದ. ಇನ್ನೂ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುವ ಮೊದಲೇ ವಿಲ್ಸನ್ ಸಾವನ್ನಪ್ಪಿದ್ದ.
ಈ ರೀತಿಯಾಗಿ ಭಾರತಕ್ಕೆ ಬಜೆಟ್ ಪರಿಚಯವಾಯ್ತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬಂದ ತೆರಿಗೆ ನೀತಿ ಹಾಗೂ ಬಜೆಟ್ ಸಂಪ್ರದಾಯವನ್ನೇ ಮುಂದೆ ಸ್ವತಂತ್ರ ಭಾರತದಲ್ಲಿ ಮುಂದುವರಿಸಲಾಯ್ತು. ಅಚ್ಚರಿಯಂದ್ರೆ ಭಾರತ ಸ್ವಾತಂತ್ರ್ಯಗೊಂಡ ಅದೆಷ್ಟೋ ವರ್ಷಗಳವರೆಗೂ ಸಂಜೆ 5.30ಕ್ಕೆ ಬಜೆಟ್ ಮಂಡನೆಯಾಗುತ್ತಿತ್ತು. ಅದಕ್ಕೆ ಕಾರಣ ಬ್ರಿಟನ್ನಲ್ಲಿ ಆ ಸಮಯ ಮಧ್ಯಾಹ್ನದ ವೇಳೆ ಆಗಿದ್ದ ಕಾರಣ ಇಲ್ಲಿ ಸಂಜೆ 5.30ಕ್ಕೆ ಬಜೆಟ್ ಮಂಡಿಸಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಕೂಡ ಅನೇಕ ವಸಾಹತುಶಾಹಿ ಗುರುತುಗಳು ಭಾರತದಲ್ಲಿ ಹಲವು ವರ್ಷಗಳ ಕಾಲ ಉಳಿದುಕೊಂಡೇ ಇದ್ದವು.
ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದ ಚೆಟ್ಟಿ
ಭಾರತದ ಮೊದಲ ಹಣಕಾಸು ಮಂತ್ರಿಯಾಗಿ ನೇಮಕಗೊಂಡಿದ್ದು ಉದ್ಯಮಿ, ಅಂದಿನ ಕೊಚ್ಚಿನ್ ರಾಜ್ಯದ ದಿವಾನರಾಗಿ ಹಾಗೂ ಚೇಂಬರ್ ಆಫ್ ಪ್ರಿನ್ಸ್ಗೆ ಸಂವಿಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್ಕೆ ಶಣ್ಮುಖಮ್ ಚೆಟ್ಟಿ. ಶೆಣ್ಮುಖಮ್ ಚೆಟ್ಟಿ ನವೆಂಬರ್ 26 1947ರಲ್ಲಿ ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆ ಮಾಡಿದ್ರು. ಅಲ್ಲಿಂದ ಇಲ್ಲಿಯವರೆಗೂ ಭಾರತ ಒಟ್ಟು 80 ಬಜೆಟ್ಗಳನ್ನು ಕಂಡಿದೆ.
ಭಾರತವೊಂದು ಒಕ್ಕೂಟ ವ್ಯವಸ್ಥೆಗೆ ಬಂದ ಬಳಿಕ, ಗಣರಾಜ್ಯವಾಗಿ ರೂಪಗೊಂಡ ಬಳಿಕ ಚೆಟ್ಟಿ ಸ್ಥಾನಕ್ಕೆ ಜಾಹ್ನ್ ಮೆಥಾಯಿ ಅವರು ಬಂದು ಕುಳಿತರು. 1949-50ರ ಬಜೆಟ್ನ್ನು ಮಂಡಿಸಿದ ಮೆಥಾಯಿ ಅದನ್ನು ಸಂಪೂರ್ಣವಾಗಿ ಲೋಕಸಭೆಯಲ್ಲಿ ಓದುವ ಬದಲು ಬಜೆಟ್ನ ಸಂಪೂರ್ಣ ವಿವರವಿರುವ ಹಾಳೆಗಳನ್ನ ಎಲ್ಲಿರಿಗೂ ನೀಡಿ ಬಳಿಕ ಹಣದುಬ್ಬರ ಹಾಗೂ ಆರ್ಥಿಕ ನೀತಿಯ ಬಗ್ಗೆ ಒಂದಿಷ್ಟು ಭಾಷಣ ಮಾಡಿ ಬಜೆಟ್ ಮಂಡನೆ ಮುಗಿಸಿದ್ದರು.ಮಥಾಯಿ ಬಳಿಕ ಸಿಡಿ ದೇಶಮುಖ, ನಂತರ ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಹೀಗೆ ಸಾಲು ಸಾಲು ಹಣಕಾಸು ಸಚಿವರು ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ಅತಿದೊಡ್ಡ ಚರ್ಚೆಯಾಗಿದ್ದು ಮನಮೋಹನ್ ಸಿಂಗ್ 1991ರಲ್ಲಿ ಮಂಡಿಸಿದ್ದ ಬಜೆಟ್. ಅದೇ ಮೊದಲ ಬಾರಿಗೆ ಭಾರತವು ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣ ನೀತಿಯಿಂದಾಗಿ ಜಗತ್ತಿನೊಂದಿಗೆ ಬೆಸೆದುಕೊಂಡಿತು. ಭಾರತದ ಆರ್ಥಿಕ ಅಭಿವೃದ್ಧಿಗೆ ಮಹಾ ಅಡಿಪಾಯವೊಂದು ಮೊದಲು ಹಾಕಿದ್ದೆ ಮನಮೋಹನ ಸಿಂಗ್.
ಭಾರತದ ಬಜೆಟ್ ವಿಚಾರದಲ್ಲಿ ಇನ್ನೂ ಅನೇಕ ಕುತೂಹಲಕಾರಿ ಸಂಗತಿಗಳು
⦁ ಇಲ್ಲಿಯವರೆಗೂ ಮಂಡನೆಯಾದ ಬಜೆಟ್ಗಳಲ್ಲಿ ಅತ್ಯಂತ ಸುದೀರ್ಘವಾಗಿ ಬಜೆಟ್ ಭಾಷಣ ಮಾಡಿದ ದಾಖಲೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿದೆ. 2020-21ನೇ ಸಾಲಿನ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಬರೋಬ್ಬರಿ 2 ಗಂಟೆ 42 ನಿಮಿಷ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು. 11 ಗಂಟೆಗೆ ಬಜೆಟ್ ಮಂಡನೆ ಮಾಡಲು ಶುರುಮಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಗಿಸಿದ್ದು ಮಧ್ಯಾಹ್ನ 1 ಗಂಟೆ 42 ನಿಮಿಷಕ್ಕೆ
⦁ ಇನ್ನೂ ಪದಗಳ ವಿಚಾರದಲ್ಲಿ ಸುದೀರ್ಘವಾದ ಬಜೆಟ್ ಭಾಷಣ ಮಾಡಿದ ದಾಖಲೆ ಮಾಜಿ ಪ್ರಧಾನಿ ಹಾಗೂ ಮಾಜಿ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರ ಹೆಸರಲ್ಲಿದೆ. 1991ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಮನಮಹೋನ್ ಸಿಂಗ್ ಒಟ್ಟು 18,604 ಪದಗಳ ಭಾಷಣ ಮಾಡಿದ ದಾಖಲೆ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೆಟ್ಲಿಯವರು ಇದ್ದಾರೆ. ಅವರು ಕೂಡ 18,604 ಪದಗಳುಳ್ಳ ಬಜೆಟ್ ಭಾಷಣ ಮಾಡಿದ್ದರು.
⦁ ಇನ್ನೂ ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ಮಾಡಿದ ಕೀರ್ತಿ ಹೀರುಬಾಯಿ ಮುಲ್ಲಿಜಿಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಮೂರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಹಿರುಬಾಯಿ ಕೇವಲ 800 ಶಬ್ದಗಳಲ್ಲಿ ತಮ್ಮ ಬಜೆಟ್ ಭಾಷಣವನ್ನು ಮುಗಿಸಿದ್ದರು. ಭಾರತೀಯ ಇತಿಹಾಸದಲ್ಲಿ ಅತಿಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿ ಮೊರಾರ್ಜಿ ದೇಸಾಯಿಯವರ ಹೆಸರಲ್ಲಿದೆ. 1962 ರಿಂದ 1969ರ ಅವಧಿಯಲ್ಲ ಅವರು ಒಟ್ಟು 10 ಯುನಿಯನ್ ಬಜೆಟ್ ಮಂಡನೆ ಮಾಡಿದ ಕೀರ್ತಿಯನ್ನು ಹೊಂದಿದ್ದಾರೆ. ಇನ್ನುಳಿದಂತೆ ಪಿ ಚಿದಂಬರಂ 9, ಪ್ರಣಬ್ ಮುಖರ್ಜಿ 8 ಹಾಗೂ ಯಶ್ವಂತ್ ಸಿನ್ಹಾ 8 ಬಜೆಟ್ ಮಂಡನೆ ಮಾಡಿದ್ದಾರೆ. ಸದ್ಯ ಮುಂದಿನ ಐದು ವರ್ಷ ನಿರ್ಮಲಾ ಸೀತಾರಾಮನ್ ಅವರೆ ಹಣಕಾಸು ಸಚಿವರಾಗಿ ಮುಂದುವರಿದು ಐದು ವರ್ಷ ಅವರೇ ಬಜೆಟ್ ಮಂಡನೆ ಮಾಡಿದ ಪಕ್ಷದಲ್ಲಿ ಮೊರಾರ್ಜಿ ದೇಸಾಯಿಯವರ ದಾಖಲೆಯನ್ನು ಮುರಿಯಲಿದ್ದಾರೆ. ಯಾಕಂದ್ರೆ ಜುಲೈ 23ರಂದು ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
⦁ 1955ರವರೆಗೂ ಕೇಂದ್ರ ಬಜೆಟ್ ಕೇವಲ ಇಂಗ್ಲಿಷ್ನಲ್ಲಿ ಮಂಡನೆಯಾಗುತ್ತಿತ್ತು. ನಂತರ ಕಾಂಗ್ರೆಸ್ ಸರ್ಕಾರ ಬಜೆಟ್ಗೆ ಸಂಬಂಧಿಸಿದ ದಾಖಲೆಗಳು ಹಿಂದಿ ಹಾಗೂ ಇಂಗ್ಲಿಷ್ ಎರಡರಲ್ಲಿಯೂ ಸಿದ್ಧಗೊಳ್ಳಬೇಕು ಎಂಬ ನಿಯಮ ತಂದಿತು.
ಇದನ್ನೂ ಓದಿ: ಟ್ರಾನ್ಸ್ಫಾರ್ಮರ್ ಹಿಡಿದು ಹೆಸ್ಕಾಂ ನೌಕರ ಆತ್ಮಹ*.. ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾದ ಲೈನ್ಮೆನ್
⦁ 2021-22ರಲ್ಲಿ ಮೊಟ್ಟ ಮೊದಲ ಬಾರಿಗೆ ಬಜೆಟ್ನ್ನು ಸಂಪೂರ್ಣವಾಗಿ ಪೇಪರಲೆಸ್ ಮಾಡಲಾಯ್ತು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಭಾರತದ ಬಜೆಟ್ ಡಿಜಿಟಲೈಸ್ ಆಯ್ತು. ಕಾಗದ ಹಿಡಿದು ಬಜೆಟ್ ಓದುವ ಬದಲು ಟ್ಯಾಬ್ಲೈಡ್ ನಲ್ಲಿ ಬಜೆಟ್ನ ವಿವರವನ್ನು ನೀಡಲಾಯ್ತು . ಅಲ್ಲದೇ ಇಂದಿರಾ ಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಎರಡನೇ ಮಹಿಳಾ ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್ ಗುರುತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ