/newsfirstlive-kannada/media/post_attachments/wp-content/uploads/2023/07/Karnataka-Session.jpg)
ಇವತ್ತಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಚಾಲನೆ ಸಿಗಲಿದೆ ಇಂದಿನಿಂದ ಮಾರ್ಚ್ 21, ಅಂದ್ರೆ ಒಟ್ಟು 14 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ. ಇವತ್ತು ಜಂಟಿ ಅಧಿವೇಶವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣ ನಡೆಯಲಿದ್ದು. ನಾಳೆಯಿಂದ ಮಾರ್ಚ್ 6ವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7 ರಂದು ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಂಡಿಸಲಿದ್ದಾರೆ.
ಇತ್ತ ಸರ್ಕಾರವನ್ನು ಕಟ್ಟಿ ಹಾಕೋದಕ್ಕೆ ಬಿಜೆಪಿ ತನ್ನ ಬತ್ತಳಿಕೆಯ ತುಂಬಾ ಅಸ್ತ್ರಗಳನ್ನು ರೆಡಿಮಾಡಿಕೊಂಡು ಬರುತ್ತಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಲು ಆಡಳಿತ ಪಕ್ಷವೂ ಕೂಡ ಸಜ್ಜಾಗಿಯೇ ನಿಂತಿದೆ. ದಾಖಲೆ ಸಮೇತ ಕೌಂಟರ್ ಕೊಡಲು ಸಿದ್ದರಾಮಯ್ಯ ಸರ್ಕಾರ ಸಿದ್ಧಗೊಂಡು ನಿಂತಿವೆ. ಬಿಜೆಪಿ ತನ್ನ ಬಳಿ ಇಟ್ಟುಕೊಂಡಿರುವ ಅಸ್ತ್ರಗಳು ಏನು ಎಂದು ನೋಡುವುದಾದ್ರೆ
ಬಿಜೆಪಿ ಅಸ್ತ್ರಗಳು
1. ಬಡ ಜನರಿಗೆ ಮೈಕ್ರೋ ಫೈನಾನ್ಸ್ನಿಂದ ಆಗ್ತಿರುವ ನಿರಂತರ ಕಿರುಕುಳ
2. ಗ್ಯಾರಂಟಿ ಯೋಜನೆಗಳಿಗೆ ವಿಳಂಬವಾಗುತ್ತಿರುವ ಅನುದಾನ
3. ಶಾಸಕರಿಗೆ ನೀಡುವ ಅನುದಾನದಲ್ಲೂ ಎದುರಾಗ್ತಿರುವ ಕೊರತೆ
4. ಬಸ್, ಮೆಟ್ರೋ ಟಿಕೆಟ್ ದರ, ವಿದ್ಯುತ್, ನೀರು, ಹಾಲಿನ ದರ ಏರಿಕೆ
5. ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣದ ಬಗ್ಗೆಯೂ ಪ್ರಸ್ತಾಪ
6. ರಾಜ್ಯಪಾಲರು, ಸರ್ಕಾರದ ನಡುವಿನ ಜಟಾಪಟಿ ವಿಚಾರ
7. ರಾಜ್ಯ ರಾಜಧಾನಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಕಡೆಗಣನೆ
8. ಬೆಂಗಳೂರು ಅಭಿವೃದ್ಧಿಗೂ ಎದುರಾಗಿರುವ ಅನುದಾನದ ಕೊರತೆ
9.ಎಸ್ಸಿ, ಎಸ್ಟಿ ಸಮುದಾಯದ ಹಣ ಅನ್ಯ ಉದ್ದೇಶಗಳಿಗೆ ಬಳಕೆ
10.ಮುಡಾ ಪ್ರಕರಣದ ವಿಚಾರವನ್ನೂ ಪ್ರಸ್ತಾಪಿಸೋದಕ್ಕೆ ಪ್ಲ್ಯಾನ್
ಸರ್ಕಾರದ ಪ್ರತ್ಯಸ್ತ್ರಗಳು
1. ಕೋವಿಡ್ ಹಗರಣದ ಬಗ್ಗೆ ಕುನ್ಹಾ ಸಮಿತಿಯ ವರದಿ ಪ್ರಸ್ತಾಪ
2. ಹೆಚ್.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳ ಪ್ರಸ್ತಾಪ
3. ಮಹದಾಯಿ, ಕೃಷ್ಣ, ಮೇಲೆದಾಟು ಯೋಜನೆಗಳಿಗೆ ಕೇಂದ್ರದಿಂದ ಸಿಗದ ಸ್ಪಂದನೆ
4. ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಮಾಡಲಾಗಿರುವ ಅನ್ಯಾಯ
5. ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆ ಪಾಲು ಕಡಿತ ಮಾಡಿರುವುದು
ಇನ್ನು ವಿಧಾನಪರಿಷತ್ನಲ್ಲೂ ಕೂಡ ಬಿಜೆಪಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸಜ್ಜಾಗಿದೆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಹಿಡಿದು ಶ್ವೇತ ಪತ್ರವನ್ನು ಹೊರಡಿಸುವಂತೆ ಆಗ್ರಹಿಸಲು ಕೂಡ ಸಜ್ಜಾಗಿದೆ
ಪರಿಷತ್ನಲ್ಲಿ ಬಿಜೆಪಿ ಹೂಡಲಿರುವ ಬಿಜೆಪಿ ಅಸ್ತ್ರ
1. ಫೈನಾಸ್ಸ್ ದಂಧೆಗೆ ಈವರೆಗೂ ಬಿದ್ದಿಲ್ಲ ಕಟ್ಟು ನಿಟ್ಟಿನ ಕಡಿವಾಣ
2. ಗ್ಯಾರಂಟಿ ಹೆಸರಿನಲ್ಲಿ ಕ್ಷೇತ್ರಾಭಿವೃದ್ಧಿ ಅನುದಾನಕ್ಕೆ ತಡೆ
3. ಅನುದಾನದ ಬಿಡುಗಡೆಯಾಗದೇ ಅಭಿವೃದ್ಧಿಗೆ ಹಿನ್ನಡೆ
4. ಗ್ಯಾರಂಟಿಗಳಿಗೆ SCP ಹಾಗೂ TSP ಅನುದಾನ ಬಳಕೆ
5. ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ದರ ಏರಿಕೆ
6. ಇಡೀ ರಾಜ್ಯಾದ್ಯಂತ ಬಾಣಂತಿಯರ ಸರಣಿ ಸಾವು
7. ಗಲಭೆ, ಗಲಾಟೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು
8. ಇತ್ತ ಸರ್ಕಾರ ಕಳೆದೆರಡು ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲ
9. ಗ್ಯಾರಂಟಿಗಳಿಂದಾಗಿ ಜನರಿಗೆ ತೆರಿಗೆ ಹೊರೆ ಹೆಚ್ಚಾಗುತ್ತಿರುವುದು
10. ಸರ್ಕಾರ ದಿವಾಳಿ ಆಗಿಲ್ಲ ಎಂದು ಶ್ವೇತ ಪತ್ರ ಹೊರಡಿಸಲು ಆಗ್ರಹ
ಇದನ್ನೂ ಓದಿ:ಕೃಷ್ಣನೂರಿನಲ್ಲೂ ಹಿಂದುತ್ವದ ಜಪ ಮಾಡಿದ ಡಿಸಿಎಂ; ಡಿಕೆಶಿ ಸಿಎಂ ಆಗೋದು ಪಕ್ಕಾ ಅಂದಿದ್ದು ಯಾರು?
14 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರವನ್ನು ಮುಜುಗರಕ್ಕೆ ತಳ್ಳಲು ಯಶಸ್ವಿಯಾಗುತ್ತವೆಯಾ. ಇಲ್ಲವೇ ಹಿಂದಿನ ಅಧಿವೇಶನದಂತೆ ಸರ್ಕಾರವೇ ತನ್ನ ಮೇಲುಗೈ ಸಾಧಿಸಲಿದೆಯಾ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ